ಪುಟ:Mrutyunjaya.pdf/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೩೮

ಮೃತ್ಯುಂಜಯ

ಗೊತ್ತಾಯ್ತು. ಕಲ್ಲುಕುಟಿಗ ಹಪು ವಾಸಕ್ಕೆ ಜಾಗ ಕೊಟ್ಟಿದ್ದಾನೆ.ಅವನ
ಮಕ್ಕಳು ಹೇಳಿದ್ರು. ಸಂಜೆ ರಾಜಗೃಹಕ್ಕೆ ಬರ್ತೀರಿ ಅಂತಲೂ ತಿಳಿದು
ಬಂತು.”
ಸೆಮ ರಾಗವೆಳೆದ:
“ಈಗ ಸಭೆ ಇದೆಯಲ್ಲ....”
“ಹಾಗಾದರೆ ರಾತ್ರೆ ಸಿಗ್ತೇನೆ. ಅಥವಾ ನಾಳೆ.”
ಬಟಾನೆಂದ :
"ನಾಳೆ ಬೆಳಿಗ್ಗೆ ಹಪು ಮನೆಗೆ ನಾನೇ ಬರ್ತೇನೆ.”
"ನೀವೆ ಬರ್ತೀರಾ ? ಆಗಬಹುದು. ನಾನು ಕೆತ್ತಿರೋ ಸಣ್ಣ ಶಿಲಾ
ಮೂರ್ತಿಗಳು ಎರಡು ಮೂರು ಅಲ್ಲಿವೆ. ಬರ್ತಾ ತಂದದ್ದು.ತೋರಿಸ್ತೇನೆ.
ಹಿರಿಯರೆಲ್ಲ ನೋಡಿದ್ದಾರೆ.”
“ಹೌದು, ಹೌದು," ಎಂದ ಸ್ನೊಫ್ರು.“ಅದ್ಭುತ ಕೃತಿಗಳು,”
ಎಂದು ಮೆಚ್ಚುಗೆಯ ನುಡಿಯನ್ನೂ ಸೇರಿಸಿದ.
ಶಿಲ್ಪಿ ಸಣ್ಣನೆ ನಕ್ಕ. ಎದ್ದು, “ನಾನು ಹೊರಟೆ. ಸಭೆಗೆ ಅಡ್ಡಿ
ಯಾಗೋದಿಲ್ಲ,” ಎಂದು ಬಟಾನ ಕಡೆ ನೋಡಿ ನುಡಿದು, ಒಳಬಂದಾಗಿನ
ಗಾಂಭೀರ್ಯದ ನಡಿಗೆಯಿಂದಲೇ ಉದ್ಯಾನದತ್ತ ಸಾಗಿದ.
ಸ್ನೊಫ್ರುವೆಂದ :
"ಬಹಳ ದೊಡ್ಡ ಮನುಷ್ಯ.ಇವನು ಮುಟ್ಟಿದ ಕಲ್ಲು ಮೆದುವಾಗ್ತದೆ.
ಚಾಣ ತಗಲಿದಾಗ ಸೊಬಗಿನ ಮೂರ್ತಿಯಾಗ್ತದೆ. ಈಗ ಒಂದು ಮೊಳ
ಎತ್ತರದ ನೀರಾನೆ ಮಾಡ್ತಿದ್ದಾನೆ.”
ಬಟಾನಿಗೆ ಕಚಗುಳಿ ಅನುಭವ.
“ಮಾವ! ಮಾವ! ರಾಜಧಾನೀಲಿ ನಿಮ್ಮ ದೇವತಾ ಮೂರ್ತಿಗಳಿಗೆ
ಭಾರಿ ಬೇಡಿಕೆ. ಒಬ್ಬ್ ಅಂಗಡಿಕಾರ ಅಪೋಫಿಸ್ ಮತ್ತು ಅರಮನೆ ದೇವ
ಮಂದಿರದ ಅರ್ಚಕ ಇನೇನಿ—ಇಬ್ಬರೂ ಕೇಳಿದ್ದಾರೆ. ದೋಣಿ ತುಂಬ ದೇವ
ಶಿಲ್ಪ ಸ್ನೊಫ್ರು ಮಾಡಿದ ಮೂರ್ತಿಗಳನ್ನು ತರಬೇಕಂತೆ!"
"ಕೆಫ್ಟು ಅಲ್ಲಿ ಕೊಟ್ಟು ಹೋಗಿರ್ಬೇಕು," ಎಂದ ಸ್ನೊಫ್ರು.
“ಅವನೇ. ಒಮ್ಮೆ ಏನಾಯ್ತು ಗೊತ್ತಾ?”