ಪುಟ:Mrutyunjaya.pdf/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

೪೩೯

ಸೆಮ ಅಂದ :

“ಬಟಾ ಚೂರುಪಾರು ಬೇಡ. ಇಲ್ಲಿಂದ ಹೊರಟಾಗಿನಿಂದ ನೀನು ರಾಜ
ಧಾನಿ ಬಿಟ್ಟು ಬರೋವರೆಗೆ ಏನೇನಾಯ್ತೂಂತ ಕ್ರಮ ಕ್ರಮವಾಗಿ, ವಿವರ
ವಾಗಿ ಹೇಳಪ್ಪ."
"ಹೌದು, ಹೌದು," ಎಂದ ಹೆಮ್ಟ.
ಇಪ್ಯುವರ್ ಆಗಲೇ ಬಾಯಿ ತೆರೆದು ಕುಳಿತಿದ್ದ, ಬಟಾ ಆಡಿದ ಪ್ರತಿ
ಯೊಂದು ಪದವನ್ನೂ ನುಂಗಲು.
ಬಟಾ ಅವನನ್ನು ನೋಡಿ ನಗೆಯಾಡಿದ:
“ಏನು ಲಿಪಿಕಾರಯ್ಯ, ಬರಕೊಳೋದಿಲ್ವೊ? "
ಇಪ್ಯುವರ್ ತಬ್ಬಿಬ್ಬಾಗಿ ಹಿರಿಯರೆಡೆಗೆ ನೋಡಿದ.
ಬಟಾನೆಂದ :
“ತಮಾಷೆಗೆ ಹೇಳ್ದೆ ಕಣಪ್ಪ. ಇದು ರಹಸ್ಯ ಸಮಾಲೋಚನೆ. ಬರಕೋ
ಬೇಕಾಗಿಲ್ಲ.”
ನಾಯಕರಿಗೆ ದೊರೆತ ಸ್ವಾಗತ; ಅಮಾತ್ಯ ಭೇಟಿ; ಪೆರೋ ಸಂದರ್ಶನ;
ಹುಚ್ಚ ಮೆನ್ನ: ನಾಯಕನ ಕನಸು ('ಹೊಡೆತ ತಿಂದ ಮುದುಕ ಹೆಮ್ಟಯ
ಹಾಗಿದ್ದ ಅಂತ ನಾನು ಹೇಳಬಾರದು'); ಸೆಡ್ ಉತ್ಸವ ವಿಲಂಬವಾದುದರ
ನಿಜ ಕಾರಣ; ಐಗುಪ್ತದ ಚೌಕಮಣೆ ಆಟ; ಸರು ಸಭೆ (“ಸರು ಸದಸ್ಯರು
ನಮ್ಮಲ್ಲಿನ ಹಿರಿಯರ ಹಾಗೆ.”) ಪೆರೋ ಔತಣ; “ಹೆಖ್ವೆಟ್ ಅಂತ ಹಿರಿಯ
ಸದಸ್ಯ—ಘಾಟೀ ಮುದುಕ—ಆನ್ನಗರಿಗೆ ಹೋದ ಮಹಾ ಅರ್ಚಕನನ್ನು
ಕರಕೊಂಡು ಬರೋಕೆ. ಅದೇ ಬೆಳಗ್ಗೆ ನಾನು ಈ ಕಡೆ ಹೊರಟೆ.”
ಸ್ವಾರಸ್ಯದ ಸಂಗತಿಗಳು ಹೇರಳವಾಗಿದ್ದುವು: ನಾಯಕ ಅಮಾತ್ಯರ
ಜತೆ ಇದ್ದಾಗ ನುಟ್ಮೋಸ್ ಒಳಹೋಗಲು ಬಯಸಿ ಬೈಗಳು ತಿಂದದ್ದು;
ನಗರೋದ್ಯಾನ ನೋಡೋದಕ್ಕೆ ಇವರು ಹೋದಾಗ ಅರಮನೆಯ ಕಾವಲು
ಪಡೆಗೆ ಆದ ಫಜೀತಿ. ಬೆಕ್ ಔಟರ ನೆಗಡಿಗೆ ನಡೆದ ಚಿಕಿತ್ಸೆ; ತಾನು ಕೊಳಲು
ಬಾರಿಸಿ ಅರಮನೆಯ ಕೆಲಸಗಾರರೆಲ್ಲರ ಮೆಚ್ಚುಗೆ ಗಳಿಸಿದ್ದು....

ತಮ್ಮ ನಾಯಕನನ್ನು ರಾಜಧಾನಿಯಲ್ಲಿ ಗೌರವದಿಂದ ಕಂಡರು ಎಂದು
ಬಟಾನ ಮಾತು ಕೇಳುತ್ತಿದ್ದವರಿಗೆ ಸಮಾಧಾನ.ಆದರೂ ರಾಜಧಾನಿಯಿಂದ