ಪುಟ:Mrutyunjaya.pdf/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೨

ಮೃತ್ಯುಂಜಯ

"ಉದ್ಯಾನದ ಮೂಲೆಯಲ್ಲಿ ಜನ ಗುಂಪುಕಟ್ಟಿ ಕೂತಿದ್ದಾರೆ.ಬಟಾ
ಅಣ್ಣನ ಅಂಬಿಗರು ಅವರಿಗೆ ರಾಜಧಾನಿಯ ಕತೆ ಹೇಳ್ತಿದ್ದಾರೆ.”
"ಸರಿ,ಸರಿ," ಎಂದ ಹೆಮೊನ್.
ಬಟಾ__ಸಭಾಂಗಣದಲ್ಲಿದ್ದ ಸಿಂಹದ ಮೈದಡವಿ, ಖ್ನೆಮ್ಹೊಟೆಪ್ನೆ
ನೆಡೆ ನೋಡಿ, ಅಂದ:
“ಮೆನೆಪ್ಟಾ ಅಣ್ಣನಿಗೆ ಹಾಗೆ ಬಾರಿಸ್ದೆ ಹೀಗೆ ಬಾರಿಸ್ದೆ,ಅಂತ ಬಕಿಲ
ರಾಜಧಾನೀಲಿ ಕಥೆ ಹೇಳ್ತಿದ್ನಂತೆ.ನಾಪತ್ತೆ. ಅಲ್ಲಿ ಸಿಗಲೇ ಇಲ್ಲ. ಟೆಹುಟಿ
ಜತೆ ಎಲ್ಲೊ ಉತ್ತರಕ್ಕೆ ಹೋಗಿದ್ದಾನಂತೆ. ಮಹಾ ಅರ್ಚಕ ಸೋತರೆ
ಟೆಹುಟಿಯ ರೆಕ್ಕೆ ಕತ್ತರಿಸ್ತಾರೆ.ಬಕಿಲನ ಆರ್ಭಟ ಮುಕ್ತಾಯವಾಗ್ತದೆ.”
ಹಿರಿಯರು ಎದ್ದುದು ಉದ್ಯಾನವನದಲ್ಲಿದ್ದವರ ಕಣ್ಣಿಗೆ ಬಿತ್ತು.ಕಥನ
ಒಬ್ಬನಿಂದ.ಪೂರಕ ವಿಷಯಗಳು ಉಳಿದ ಮೂವರಿಂದ.
ಅವರೆಂದರು:
__"ಇವತ್ತಿಗೆ ಸಾಕು";__ಎದ್ಬಿಡಿ";__"ಬಟಾ ಅಣ್ಣ ಬಯ್ಬೌದು";
"ದೋಣಿ ಕಟ್ಟೆಯ ಜಂಭದ ಕೋಳಿ ವಿಷಯ ನಾಳೆ ಹೇಳ್ತೇವೆ.”

       *             *              *               *

ಬೆಳಿಗ್ಗೆ ಬಟಾ ಹೊರಬಿದ್ದು ಮೆನೆಪ್ಟಾನ ಮನೆಗೆ ಹೋಗಿ,ಹಿರಿಯರ
ಸಭೆಯಲ್ಲಿ ನಡೆದುದನ್ನು__ನಾಯಕನನ್ನು ಕರೆತರುವ ತೀರ್ಮಾನವನ್ನು__
ನೆಫಿಸ್ಗೆ ತಿಳಿಸಿದ.
ಆಕೆ ಕೇಳಿದಳು:
"ಅಬ್ಟು ಯಾತ್ರಿಕರು ಆಂದ್ಮೇಲೆ ನಾನೂ ಇರ್ತೇನೆ. ಅಲ್ಲವಾ ?”
“ನನ್ನ ಹೆಂಡತಿ ಲೆಕ್ಕ ಮಾಡಿ ತಿಳಿಸಿದ್ದಾಳೆ. ಒಂಭತ್ತನೇ ತಿಂಗಳಂತೆ.
ಪ್ರಯಾಣ ಸಲ್ಲದಂತೆ."
"ನಾನೂ ಬರಲಾ ?"ಎಂದ ರಾಮೆರಿಪ್ಟಾ.
ಬಟಾ ನೆಫಿಸಳ ಮುಖ ನೋಡಿದ.
ಅವಳೆಂದಳು :
“ಬೇಕಾದರೆ ಹೋಗಿ ಬಾ, ರಾಮೆರಿ.”