ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ
೪೪೩
ರಾಮೆರಿಪ್ ಟಾ ಕಣ್ಣಾಲಿಗಳನ್ನು ಛಾವಣಿಯತ್ತ ಹೊರಳಿಸಿದ, ಕೆಳಕ್ಕೆ
ನೋಡಿದ:
"ಊಹೂಂ. ಅಮ್ಮನನ್ನು ನೋಡ್ಕೊ ಅಂತ ಅಪ್ಪ ಹೇಳಿದ್ದಾನೆ.
ನಾನು ಇಲ್ಲೇ ಇರ್ತೇನೆ.” ಧ್ವನಿಯಲ್ಲಿ ಬೇಸರದ ಛಾಯೆ ಇತ್ತು.
ರಾಜಧಾನಿಯಿಂದ ತಾನು ಹೊರಡುವ ರಾತ್ರಿ ನಡೆದ ಸಂಭಾಷಣೆ.
ರೊಟ್ಟಿ ತಟ್ಟೋದು ಶ್ರೇಷ್ಠ ವಿದ್ಯೆ. ತನ್ನ ಒಬ್ಬಳು ಮಗಳು ಈ ಲಿಪಿಸುರುಳಿ
ವಿದ್ವಾಂಸನ ಪತ್ನಿಯಾದರೆ? ಮೆನೆಪ್ ಟಾ ಬೇಡ ಎಂದಿರಲಿಲ್ಲ. ತಮಾಷೆಗೆ
ಆಡಿದ್ದು. ನೆಫಿಸ್ ಗೂ ತಿಳಿಸೋಣ ಎಂದು ಬಟಾ ಬಾಯಿ ತೆರೆದ. ಈಗ
ಹೇಳುವುದು ಸರಿಯಲ್ಲ ಎನಿಸಿತು.ಬಾಯಿಯನ್ನು ಮುಚ್ಚುವುದರೊಳಗೆ ನೆಫಿಸ್
ಹೇಳಿದಳು:
"ಏನೋ ಹೇಳ್ಬೇಕೂಂತಿದೀಯಲ್ಲ ಬಟಾ ಅಣ್ಣ ?" ಬಟಾ ತಲೆ ಕೊಡವಿದ. “ಏನಿಲ್ಲ, ಏನಿಲ್ಲ. ತಂದೆಯ ಹಾಗೆಯೇ ಈ ಮಗ. ಅಷ್ಟೇ ಗಂಭೀರ,"ಎಂದ. ನೆಫಿಸ್ ಒಲವು ತುಂಬಿದ ನೋಟದಿಂದ ಮಗನನ್ನು ನೋಡಿದಳು. "ರಾಮೆರೀ" ಎಂದು ಹುಡುಗರ ಗಂಟಲು ಕೇಳಿಸಲು,"ಬಂದೆ" ಎನ್ನುತ್ತ ರಾಮೆರಿಪ್ ಟಾ ಓಡಿದ. ತಾಯಿ ಅಂದಳು: “ಲಿಪಿ ಸುರುಳೀಲಿ ಹೀಗಿದೆ ಅಂತ ಏನೇನೋ ಹೇಳ್ತಾ ಇರ್ತಾನೆ. ಎಲ್ಲಿ ಓದ್ತಾನೋ ಯಾವಾಗ ಗಟ್ಟಿ ಮಾಡಿಕೊಳ್ತಾನೋ ಒಂದೂ ಗೊತ್ತಾಗೋದಿಲ್ಲ. ಇಲ್ಲಿ ನೋಡಿದರೆ ಮೂರು ಹೊತ್ತೂ ಆಟ.” ಜ್ಞಾಪಕ ಶಕ್ತಿ. ಒಮ್ಮೆ ಕೇಳಿದರೆ ಸಾಕು. ರಾಮೆರಿಗೆ ಮರೆತು ಹೋಗೋದಿಲ್ಲ." "ಅದು ಅವನ ತಂದೆಗೂ ಹಾಗೆಯೇ...." “ನಾನು ಹೊರಡ್ಲಾ ಅತ್ತಿಗೆ ?” "ಇರು. ಎಲ್ಲಿಗೆ ?" "ನೆಖೆನ್ ಅಂತ ಒಬ್ಬ ಶಿಲ್ಪಿ ಬಂದಿದ್ದಾನಲ್ಲ ?