ಪುಟ:Mrutyunjaya.pdf/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೪೫

       ಮೆಚ್ಚುಗೆ ಸೂಚಿಸುತ್ತ ಆ ಮಗ್ಗುಲಿನಿಂದ ಈ ಮಗ್ಗುಲಿನಿಂದ ಶಿಲ್ಪಗಳನ್ನು ನೋಡಿ, ಬಟಾ ಅಂದ:
       "ನೀವು ನಮ್ಮ ಪ್ರಾಂತಕ್ಕೆ ಬಂದದ್ದು ಒಳ್ಳೆದಾಯ್ತು ನೆಖೆನ್ ಅಣ್ಣ ಈ ರೈತ, ಬೇಟೆಗಾರ,ಬೆಸ್ ಮೂರ್ತಿ_ಇವನ್ನೆಲ್ಲ ನಾಯಕರು ತುಂಬಾ ಇಷ್ಟ ಪಡ್ತಾರೆ. ಸ್ನೋಫ್ರು ಮಾವನಿಗಂತೂ ನಿಮ್ಮನ್ನು ಕಂಡರೆ ಗೌರವ."
       ಶಿಲ್ಪಿಯ ಮುಖದ ಸ್ನಾಯುಗಳು ಮಿಸುಕಿದುವು. ಕಂಠ ಉಮ್ಮಳಿಸಿತು. ನಿಧಾನವಾಗಿ ಆತನೆಂದು:
       "ನನ್ನವರನ್ನು ಹುಡುಕಿಕೊಂಡು ಅದೆಷ್ಟು ದೇಶ ಅಲೆದೆನೊ. ಈ ಊರಿಗೆ ಬಂದಾಗ, ಇವರನ್ನೇ ಅಲ್ಲವಾ ಇಷ್ಟು ವರ್ಷ ಹುಡುಕಿದ್ದು ಅನಿಸ್ತು....ಮನುಷ್ಯರಲ್ಲಿ ಇಂಥ ಸೋದರ ಭಾವ ಸಾಧ್ಯವಾಗಿದೆಯಲ್ಲ_ಅದು ದೊಡ್ಡ ಸಂಗತಿ...."
       "ನೀರಾನೆ ಮೂರ್ತಿ ಮಾಡ್ತಿದ್ದೀರಂತಲ್ಲ...."
       ನೆರಳಿಗಾಗಿ ತಾಳೆಯ ಸೋಗೆಗಳಿಂದ ಛಾವಣಿಯ ಒಂದು ಮೂಲೆಯನ್ನು ವಿಸ್ತರಿಸಿದ್ದರು. ಅದರ ಕೆಳಗೆ ಕೊಳಕು ಬಟ್ಟೆಯಿಂದ ಏನನ್ನೋ ಮುಚ್ಚಿತ್ತು. ಬಟಾನ ದೃಷ್ಟಿ ಅತ್ತಿತ್ತ ಅಲೆದು ಅದರ ಮೇಲೆ ನೆಲೆಸಿದಾಗ ನೆಖೆನ್ ಅಂದ:
       "ಪೂರ್ತಿಯಾಗಿಲ್ಲ. ಈಗ ಚೆನ್ನಾಗಿ ಕಾಣಿಸೋದಿಲ್ಲ."
       "ದೋಣಿ ತಯಾರಿಕೆಯ ಮೊದಲ ಹಂತದಲ್ಲಿ ಚೌಕಟ್ಟಿಗೆ ಹಲಗೆಗಳನ್ನೊ ಪೆಪೈರಸ್ ದಂಟುಗಳನ್ನೊ ಬಿಗಿಯುವಾಗ ಹ್ಯಾಗಿರ್ತದೆ ಅಂದ್ಕೊಂಡ್ರಿ ?"
       ನೆಖೆನ್ ನಕ್ಕು, ಆ ಬಟ್ಟೆಯನ್ನೆಳೆದ. ಅಲ್ಲಿದ್ದುದು, ಬಾಣದ ಏಟಿಗೆ ಮಣಿಯತೊಡಗಿದ್ದ ಅಂಡಾಕಾರದ ಕರಿಗಲ್ಲು. ಅದರಲ್ಲಿ ನೀರಾನೆಯ ಅವ ಯವಗಳು ಸ್ಥೂಲವಾಗಿ ಮೂಡತೊಡಗಿದ್ದುವು.
       “ಇನ್ನು ಎರಡು ವಾರಗಳ ಕೆಲಸ. ದೋಣಿಕಟ್ಟೇಲಿ ಎತ್ತರದಲ್ಲಿ ಇದ ನ್ನಿಡಬೇಕು."
       "ಹೌದು. ಹೌದು."
       "ಬಟಾ ಅಣ್ಣ ನಾನು ನಿಮ್ಮನ್ನ ಕೇಳ್ತೇನೆ. ಅತಿಥಿ ಅಂತ ಪರಿಗಣಿಸಿ