ಪುಟ:Mrutyunjaya.pdf/೪೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ರಾಜಗೃಹದಿಂದ ನನಗೆ ಆಹಾರ ಧಾನ್ಯ ಇತ್ಯಾದಿ ಕೊಡ್ತಾರೆ . అತಿಥಿ ಎನ್ನಿಸಿ ಕೊಳ್ಳೋದು ನನಗೆ ಇಷ್ಟವಿಲ್ಲ. ನಮ್ಮವರೇನೇ ಅಂತ ನೀವು ನನ್ನನ್ನು ಸ್ವೀಕರಿಸೋದು ಯಾವತ್ತು?" ಬಟಾನ ನೋಟ ನೆಖೆನ್ ನನ್ನು ಮುದ್ದಿಸಿತು. “ನಾಯಕರು ವಾಪಸಾಗೋ ತನಕ ನೀವು ಆತಿಥಿ. ಅಮೇಲೆ ನೀವು ನನ್ನನ್ನು ಅಣ್ಣ ಅಂತ ಕರೆಯೋ ಹಾಗಿಲ್ಲ. ಮಗ ಅನ್ಬೇಕು, ತಮ್ಮ ಅನ್ಬೇಕು.” “ಆಗಲಿ. ನನ್ನ ಆಸೆ ಇದು; ಉದ್ಯಾನದ ಸ್ಮಾರಕ ಕಂಬಕ್ಕೆ ಒಂದು ಶಿಲಾಪೀಠ; ದೇವಮಂದಿರದ ಅಂಗಣದಲ್ಲಿ ನಾಯಕರ ಒಂದು ಶಿಲಾಪ್ರತಿಮೆ -ಎತ್ತರದ್ದು." “ಪ್ರತಿಮೆಗೆ ಮೆನೆಪ್ ಟಾ ಅಣ್ಣ ಒಪ್ಪಲಾರ. ಬಹಳ ಅಂದರೆ ಅವನು ಏನು ಹೇಳಬಹುದು ಗೊತ್ತಾ?” "ಏನು ?” “ಜನರು ಅಧಿಕಾರ ವಶಪಡಿಸಿಕೊಂಡ ದಿನ ವೈರಿಬಾಣಕ್ಕೆ ಬಲಿಯಾದವನು ನೇಕಾರ ಅನ್ಪು; ಆ ಅನ್ಪುವಿನ ಪ್ರತಿಮೆ ರಚನೆಯಾಗಲಿ-ಅಂತ.” “ಅನ್ಪು, ಅವನ ವಿಷಯ ಕೇಳಿದ್ದೇನೆ. ಆಗಬಹುದು.” “ಆದರೆ ಆತ ಇಲ್ಲ.” “ಮಕ್ಕಳಿದ್ದಾರೆ.” “ಹ್ಞ . ದೊಡ್ಡ ಹುಡುಗನದು ತಂದೆಯದೇ ರೂಪ.” “ಮೊದಲು ಅರಿವೆಯ ಮೇಲೆ ಅನ್ಪುವಿನ ಪ್ರತಿರೂಪ ಬಿಡಿಸ್ತೇನೆ.” "ಆಗಲಿ. ಆಗಲಿ." “ಅನ್ಪು ವೀರನ್ದು ಆದ್ಮೇಲೆ ನಾಯಕರದು ಒಂದು ನಿರ್ಮಿಸ್ಬೇಕು. ಪೆರೋನ ಮೂರ್ತಿಗೆ ಎಷ್ಟು ಮಹತ್ವವೋ ಜನನಾಯಕನಿಗೂ ಅಷ್ಟೇ ಮಹತ್ವ.” ಬಟಾ ನಕ್ಕು ನುಡಿದ: “ಆ ವಿಷಯದ ಪ್ರಸ್ತಾಪ ಈಗ ಬೇಡ.” “ಅವಸರವಿಲ್ಲ, ಅವಸರವಿಲ್ಲ. ಇಷ್ಟೆ, ರಕ್ತದ ಬಿಸಿ ಆರೋದಕ್ಮುಂಚೆ,