ಪುಟ:Mrutyunjaya.pdf/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ತೋಳಿನ ಬಲ ಕುಂದೋದಕ್ಮುಂಚೆ ಆ ಕೆಲಸ ನಾನು ಮಾಡ್ಬೇಕು.” “ದೇವಮಂದಿರಕ್ಕೊಂದು ಮುಖ ಮಂಟಪ ಕಟ್ಟಿಸಿ, ತಬ್ಬೋದಕ್ಕೆ ಇಬ್ಬರು ಬೇಕಾಗುವಂಥ ಕಂಬಗಳಲ್ಲಿ ನಮ್ಮ ಪ್ರಾಂತದ ಜನರ ಹೋರಾಟದ ಕಥೇನ ಕೆತ್ತಿದರೆ?” “ಒಪ್ಪಿದೆ! ಶ್ರೇಷ್ಟ ವಿಚಾರ, ಭವ್ಯ ಸೃಷ್ಟಿ!"

“ಏನೊ ತೋಚ್ತು. ಹೇಳ್ದೆ. ತೀರ್ಮಾನ ಏನಿದ್ದರೂ ಮೆನೆಪ್ ಟಾ ಅಣ್ಣ ಬಂದ್ಮೇಲೆ......"

“ಓಹೊ ಆಗಬಹುದು.”

           *             *            *          *

ಡಂಗುರದವನು ಊರಲ್ಲಿ ಸುತ್ತಾಡಿದ. ದೂತರು ಒಳನಾಡಿಗೆ ಹೋದರು. ನೆಫರುರಾ ಅಂದಳು:

“ಅಬ್ಟು ಯಾತ್ರಿಕರೇ ಅದೃಷ್ಟವಂತರು. ನೋಡೋಣ. ಯಾವತ್ತಾದ ರೊಂದು ದಿನ ಅಣ್ಣನ ಜತೆ ನಾನು ಪ್ರಯಾಣ ಬೆಳೆಸೇನು.”

ರಾತ್ರಿಯ ಊಟಕ್ಕೆ ಬಟಾನ ಕುಟುಂಬವನ್ನು ಮಾತ್ರವಲ್ಲ, ಸ್ನೊಘ್ರು_ಸೆಬೆಕ್ಖುರ ಸಂಸಾರಗಳನ್ನೂ ನೆಫಿಸ್ ಕರೆದಳು. ಖ್ನೆಮ್ ಹೊಟಿಪನೂ ಹೆಂಡತಿಯೊಡನೆ ಬಂದ. ಅಡುಗೆಯ ಆತಿಥ್ಯದ ಎಲ್ಲ ಹೊಣೆಯನ್ನೂ ನೆಜಮುಟ್ ಹೊತ್ತಳು ತಬಬುವಾ ಅವಳಿಗೆ ನೆರವಾದಳು. ರಾಜಧಾನಿಯ ರಂಜಕ ಕಥೆಗಳನ್ನು ಎಷ್ಟು ಸಲ ಹೇಳಿದರೂ ಬಟಾಗೆ ದಣಿವಿಲ್ಲ. ಅವನ್ನು ಎಷ್ಟು ಸಲ ಆಲಿಸಿದರೂ ಶ್ರೋತೃಗಳಿಗೆ ಬೇಸರವಿಲ್ಲ. ಧ್ವನಿ ಎತ್ತರಿಸಿ ನೆಜಮುಟ್ ಅಂದಳು: “ಅಣ್ಣ ನನ್ನು ಕರಕೊಂಡು ಬರೋದಕ್ಕೆ ಆಬ್ಟು ಯಾತ್ರಿಕರು ಮಾತ್ರ ಹೋಗೋದು ಅಂತ ತೀರ್ಮಾನಿಸಿದ್ದೀರಿ. ಹಾಗೇ ಆಗಲಿ. ಆದರೆ ರಾಮೆರಿಪ್ ಟಾನನ್ನು ಬಿಟ್ಟು ಹೋಗೋದು ಖಂಡಿತ ಸರಿಯಲ್ಲ. ಅವನು ಅಬ್ಟುಗೆ ಹೋಗಿರ್ಲಿಲ್ಲವಾ? ಬೇರೆ ಸಮಯವಾಗಿದ್ದರೆ ನೆಫಿಸ್ ಳೂ ಬರ್ತಿದ್ಲು.”