ಪುಟ:Mrutyunjaya.pdf/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ “ನೀವು ಹೋಗೋಕ್ಮುಂಚೆ ಇವನ್ನಿಷ್ಟು ತೋರಿಸ್ಬಿಡೋಣ್ ಅಂತ ಬಂದೆ.” ಅವನ ಕಂಕುಳಲ್ಲಿ ಕಡ್ಡಿಗೆ ಸುತ್ತಿದ್ದ ಬಟ್ಟೆ ಸುರುಳಿ ಇತ್ತು, ಅದನ್ನು ಅವನು ತೆಗೆದು ಬಿಚ್ಚಿದ ಒಂದು ಬಟ್ಟೆ ಚಿಕ್ಕದು, ಇನ್ನೊಂದು ನೀಳವಾದದು. ಚಿಕ್ಕದನ್ನು ಬಿಡಿಸಿ ಗೋಡೆಯಿಂದ ಇಳಿಬಿಟ್ಟು ನೆಖೆನ್ ನಿಂತ. ಲಿಪಿಸುರುಳಿ ಬರೆಯುವ ಮಸಿಯಲ್ಲಿ ಬಿಡಿಸಿದ ಒಂದು ಚಿತ್ರ.ಕೃಶಾಂಗ ಯುವಕ.ಮುಖದ ಮೇಲೆ ಕೆಚ್ಚು. ಬಲಪಾದವನ್ನು ಮುಂದಿರಿಸಿದ್ದಾನೆ.ಏನನ್ನೋ ಬದಿಗೆ ಸರಿಸುವವನಂತೆ ಬಲ ಅಂಗೈಯನ್ನು ಬೀಸಿದಾನೆ. “ಅನ್ಪು!" ಎಂದ ಬಟಾ ಉದ್ಗರಿಸಿದ. ನೆಖೆನ್ ನಸುನಕ್ಕು ಅ ಚಿತ್ರವನ್ನು ಬಿಡಿಸಿದ. ಅವನಿಗಿಂತಲೂ ಒಂದು ಮೊಳ ಎತ್ತರವಿತ್ತು ಆ ಸುರುಳಿ, ಮೊದಲು ನೋಡಿದ ಚಿತ್ರದ ದೊಡ್ಡರೂಪ. ಬಟಾನನ್ನು ಉದ್ವಿಗ್ನತೆ ಬಾಧಿಸಿತು. ಅವನು ಉಗುಳು ನುಂಗಿದ. ಕಣ್ಣೆವೆ ಮುಚ್ಚದೆ ಚಿತ್ರವನ್ನು ದಿಟ್ಟಿಸಿದ. “ಅನ್ನು ಸತ್ತಿಲ್ಲ, ಇಲ್ಲೇ ಇದ್ದಾನೆ. ನಮ್ಮೆಲ್ಲರಿಗಿಂತಲೂ ದೊಡ್ಡವನಾಗಿ ಬೆಳೆದಿದ್ದಾನೆ. ಆಶ್ಚರ್ಯ ! ಆಶ್ಚರ್ಯ !” ಎಂದ. ಬಟಾನ ಹೆಂಡತಿ ನೋಡಿದಳು. ಮಕ್ಕಳು ನೋಡಿದರು. ಸತ್ತವರನ್ನು ಬದುಕಿಸುವ ಕೌಶಲ!ನೆಖೆನ್ ಅವರಿಗೆ ಪವಾಡಪುರುಷನಂತೆ ಕಂಡ. ವಿನಮ್ರನಾಗಿ ಬಟಾ ಹೇಳಿದ: “ಇದು ಅಪೂರ್ವ ಸಾಧನೆ. ಮೆನೆಪಟಾ ಅಣ್ಣನಿಗೆ ತಿಳಿಸ್ತೆನೆ.” ಕೃತಜ್ಞತೆಯ ಭಾವದಿಂದ ಬಟಾನನ್ನು ನೋಡುತ್ತ ನೆಖೆನ್ ಅಂದ: “ನೀವು ರಾಜಧಾನಿಯಿಂದ ಮರಳಿ ಬಂದ್ಮೇಲೆ ಹತ್ತು ಮೊಳ ಉದ್ದ, ಎರಡು ಮೊಳ ಅಗಲ, ಎರಡು ಮೊಳ ದಪ್ಪದ ಕರಿಶಿಲೆ ತರಿಸ್ಕೊಡಿ. ಸ್ಯೆನೆ ಹತ್ತಿರ ಹೇರಳವಾಗಿ ಸಿಗ್ರವೆ. ಸಹಾಯಕರಿದ್ದರೆ ಕೆಲಸ ಬೇಗನೆ ಆಗ್ರದೆ ಹಪು ವಿನ ಮಕ್ಕಳಿಗೆ ಶಿಲ್ಪಕಲೆ ಹೇಳ್ಕೊಡ್ರೇನೆ. ಕಲಿಯೋದಕ್ಕೆ ಇಷ್ಟಪಡೋ ಬೇರೆ ಯುವಕರಿದ್ದರೆ ಅವರೂ ಬರಲಿ.” ೨೯