ವಿಷಯಕ್ಕೆ ಹೋಗು

ಪುಟ:Mrutyunjaya.pdf/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ “ಹೂಂ.. ಹೂಂ. ನೀವು ರಾಜಗೃಹಕ್ಕೆ ಹೋಗಿ ಹಿರಿಯರಿಗೆ ಅನ್ಪುವಿನ ಚಿತ್ರ ತೋರಿಸ್ತೀರಾ ?” “ಚಿತ್ರ ಸರಿಯಾಗಿದೆ ಅಂತ ಅನ್ಪುವಿನ ಹೆಂಡತಿ ಹೇಳ್ಬೇಕಲ್ಲ! ಆ ತಾಯಿಗೆ ತೋರಿಸಿ, ಅಲ್ಲಿಂದ ರಾಜಗೃಹಕ್ಕೆ ಹೋಗ್ತೇನೆ.” “ಅಗಲಿ ನೆಖೆನ್ ಮಾವ. ಮಾವ ಅಂತ ಕರೀಬಹುದು ?” “ಮಗ ಮಗಳು ಯಾರೂ ಇಲ್ಲ, ಅಳಿಯಂದಿರಾದರೂ ಇರಲಿ ! ಯಾಕೆ ಬೇಡ?” ಹಾಗೆ ಹೇಳುತ್ತ ನೆಖೆನ್ ಚಿತ್ರವನ್ನು ಸುರುಳಿ ಸುತ್ತಿದ. ....ಆ ಸಂಜೆ ರಾಜಗೃಹದಲ್ಲಿ ಹದಲ್ಲಿ ಅಬ್ಟು ಯಾತ್ರಿಕರೊಡನೆ ಸ್ವಲ್ಪ ಹೊತ್ತು ಕಳೆದು ಬಟಾ ಮನೆಗೆ ಮರಳಿದ. ಬುಡ್ಡಿ ದೀಪದ ಬೆಳಕಿನಲ್ಲಿ ಕೈ ಬೆರಳುಗಳನ್ನು ಚಮತ್ಕಾರವಾಗಿ ಮಡಚಿ ಬೇರೆ ಬೇರೆ ಪ್ರಾಣಿಗಳ ಛಾಯಾ ಆಕೃತಿಗಳನ್ನು ಗೋಡೆಯ ಮೇಲೆ ಮೂಡಿ ಸುತ್ತ ಬಟಾ ಮಕ್ಕಳ ಜತೆ ಕುಳಿತಿದ್ದ. "ಅಗೋ ನೀರಾನೆ !” "ಅಗೋ ನೀರಾನೆ !” "ಜಿಂಕೆ!" ಧಪಧಪನೆ ತಟಿಕೆ ಬಾಗಿಲನ್ನು ಬಡೆದ ಸದ್ದು. ಜತೆಯಲ್ಲೇ “ಅಣಾ ! ಅಣ್ಣಾ!” ಎಂಬ ಕರೆ. ದೋಣಿಕಟ್ಟೆಯ ಹುಡುಗನ ಸ್ವರ. ಬಟಾ ಥಟ್ಟನೆ ಎದು, ಬಾಗಿಲಿನ ಅಗಣಿ ತೆಗೆದು, ದೋಣಿಕಟ್ಟೆಯ ಕಿರಿಯನನ್ನು ಒಳಕ್ಕೆ ಬಿಟ್ಟ. ಓಡಿಕೊಂಡು ಬಂದ್ದಿದ ಅವನು ಏದುಸಿರು ಬಿಡುತ್ತ ವರದಿ ಮಾಡಿದ : “ಹೇರುನಾವೆ_ವರ್ತಕ ಕೆಫ್ಟುದು_ಕಟ್ಟೆಗೆ ಬಂದಿದೆ........ ಬಟಾ ಎದ್ದಾರಾ? ಅಂತ ಕೇಳಿದ್ರು. ಎದ್ದಾರೆ ಅಂದೆ_ಓಡಿ ಹೋಗಿ ತಕ್ಷಣ_ಕರಕೊಂಡ್ಬಾ ಅಂದ್ರು....ಬನ್ನಿ...." ಏಕಕಾಲದಲ್ಲೇ ಒಡಮೂಡಲು ಬಯಸಿದ ವಿವಿಧ ಭಾವನೆಗಳನ್ನು ನಿಯಂತ್ರಿಸುತ್ತ ಬಟಾ ಅಂದ : “ನೀನು ಹೋಗು_ಬಂದ್ಬಿಟ್ಟೆ"