ಪುಟ:Mrutyunjaya.pdf/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೫೧ ಒಲೆಯ ಮುಂದೆ ಕುಳಿತಿದ್ದ ಬಟಾನ ಹೆಂಡತಿಗೆ ಮಾತು ಕೇಳಿಸಿತ್ತು. ಆಕೆ ಕತ್ತು ತಿರುಗಿಸಿ “ಊಟ ಮಾಡ್ಕೊಂಡು ಹೋಗು,” ಎಂದಳು ಗಂಡನಿಗೆ. “ಬೇಡ. ಬೇಗ ಬಂದ್ಬಿಡ್ತೇನೆ. ಮಕ್ಕಳಿಗೆ ಬಡಿಸು,” ಎಂದು ಹೇಳಿ, ಛಾವಣಿಗೆ ಸಿಕ್ಕಿಸಿದ್ದ ಜೊಂಡಿನ ಪಾದರಕ್ಷೆಯನ್ನು ಎಳೆದುಕೊಂಡು, ಅದನ್ನು ಮೆಟ್ಟಿಕೊಂಡು ಬಟಾ ಬೀದಿಗಿಳಿದ. ಅಂದು ನಡುವಿರುಳಿನ ಸುಮಾರಿಗೆ ಚಂದ್ರದರ್ಶನ. ಆದರೆ ಶುಭ್ರ ಆಕಾಶ ದಲ್ಲಿ ಅಸಂಖ್ಯ ನಕ್ಷತ್ರಗಳ ಮಿನುಗು ಬೆಳಕಿತ್ತು. ಕತ್ತಲೆಯ ಕಠೋರತೆಯನ್ನು ಅದು ಕಡಿಮೆ ಮಾಡಿತ್ತು. ದೋಣಿಕಟ್ಟೆಯ ವೇದಿಕೆಯ ಮೇಲೆ ಕಫ್ಟು ಕುಳಿತಿದ್ದ, ಅಂಬಿಗರು ದೋಣಿಯಿಂದ ಇಳಿಸಿದ ಮುಗ್ಗಾಲುಪೀಠ ಅವನ ದೇಹದ ಭಾರವನ್ನು ಹೊತ್ತಿತು.ಬಟಾ ಆ ಸ್ಥಳವನ್ನು ಸಮೀಪಿಸಿದೊಡನೆ ದೋಣಿಕಟ್ಟೆಯ ಹುಡುಗ ಗಟ್ಟಿಯಾಗಿ ನುಡಿದ : "ನೀರಾನೆ ಪ್ರಾಂತದ ಸಾರಿಗೆ ಮುಖ್ಯಸ್ಥ ಬಟಾ ಅಣ್ಣ ಬಂದ್ರು". ಕೆಫ್ಟು ಎದ್ದ. ತನ್ನೆದುರು ನಿಂತ ಬಟಾನ ಕೈಯನ್ನು ಮೃದುವಾಗಿ ಹಿಡಿದು "ಬನ್ನಿ," ಎಂದು ಹೇಳಿ, ಬಟಾನ ಜತೆ ದಂಡೆಯುದ್ದಕ್ಕೂ ದಕ್ಷಿಣಕ್ಕೆ ಹತ್ತು ಹೆಜ್ಜೆ ನಡೆದ. ಬಟಾನಿಗೆ ತಳಮಳ. ಈ ಕೆಫ್ಟುವಿನಿಂದ ಕೆಡುಕಾಗುವುದು ಸಾಧ್ಯವೆ? ಎಂಥ ಸುದ್ದಿ ತಂದಿದ್ದಾನೆ ಈತ ? ಯಾಕೆ ಈ ರಹಸ್ಯ? ಪ್ರಯತ್ನಪೂರ್ವಕವಾಗಿ ಧನಿಯಲ್ಲಿ ಮಾರ್ದವತೆ ತುಂಬುತ್ತ ಕೆಫು ಮಾತನಾಡಿದ : "ನೀವು ರಾಜಧಾನಿ ಬಿಟ್ಟ ಐದನೇ ದಿನ ನಾನು ಅಲ್ಲಿಗೆ ತಲಪಿದೆ.ನಿಮಗೊಂದು ಗೋಪ್ಯದ ಸುದ್ದಿ ಕಳಿಸೋದಕ್ಕೆ ಯಾರಾದರೂ ಸಿಗ್ತಾರೇನೋಂತ ಕಾಯ್ತಾ ಹುಚ್ಚ ಮೆನ್ನಕಟ್ಟೆಯ ಮೇಲೆ ನಿಂತಿದ್ದ, ಗಂಭೀರ ಸುದ್ದಿ. ನಾನೇ ಅದರ ವಾಹಕನಾಗೋದು ಸರಿ ಅಂತ,ಅವಸರ ಅವಸರವಾಗಿ ರಾಜಧಾನಿಯ ಕೆಲಸ ಮುಗಿಸಿ ಅಲ್ಲಿಂದ ಹೊರಟೆ.” ಬಟಾನ ಎದೆತುಡಿತ ಬಲಗೊಂಡಿತು