ಪುಟ:Mrutyunjaya.pdf/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೫೩ “ನಿಮ್ಮ ದಳಪತಿ ಖೈಮ್ ಹೊಟೆಪ್...” "ಕೆಫ್ಟು ಮಹಾಶಯ ಬರಲಿಲ್ಲ; ಶಸ್ತ್ರಾಸ್ತ್ರ ಸಿಗಲಿಲ್ಲ--ಅಂತ ಕೂಗಾಡ್ತಿದ್ದಾನೆ.” “ನಿಮ್ಮ ನೂರು ಜನರ ದಂಡಿಗೆ ಸಾಲುವಷ್ಟು ಆಯುಧಗಳನ್ನು ತಂದಿದ್ದೇನೆ. ನೀವು ಬೇಕು ಅಂದಿದ್ದ ಬೇರೆ ಸಾಮಗ್ರಿಗಳೂ ಇವೆ.” “ಹಿರಿಯರಿಗೆ ತಿಳಿಸ್ತೇನೆ. ನೀವು ರಾಜಗೃ ಹಕ್ಕೆ ಬರಬಹುದಲ್ಲ?” “ ಈ ಸಲ ಬೇಡ. ಇಲ್ಲಿಯೇ ಕಾದಿರ್ತೇನೆ. ಪಂಜುಗಳನ್ನು ಉರಿಸಿ ಬೆಳಕು ಮಾಡೋಣ, ವ್ಯವಹಾರ ಮುಗಿಸಿ ನಾನು ರಾತ್ರೆಯೇ ಇಲ್ಲಿಂದ ಮುಂದಕ್ಕೆ ಹೊರಡ್ಬೇಕು." “ವರ್ತಕ ಕೆಫ್ಟುಗೂ ಅಂಜಿಕೆಯೆ ?” ಕೆಫ್ಟು ಸಣ್ಣನೆ ನಕ್ಕ. ಉಗುಳು ನುಂಗಿದ . “ಅಂಜಿಕೆ ಅಲ್ಲ, ಯುಕ್ತಯುಕ್ತ ವಿವೇಚನೆಯ ಪ್ರಶ್ನೆ, ನಾಯಕರು ಪ್ರಾಂತಕ್ಕೆ ಮರಳಿ ಪರಿಸ್ಥಿತಿ ಸುಧಾರಣೆ ಮೇಲೆ ವಾಣಿಜ್ಯ ವ್ಯವಹಾರಗಳನ್ನು ಸುಗಮಗೊಳಿಸೋಣ." ಬಟಾನಿಗೆ ಏನೋ ಕುಟುಕಿದಂತಾಯಿತು. ಅವನೆಂದ : “ನಾವಾಗಿ ಪೆರೋನಿಂದ ಆಮಂತ್ರಣ ಬಯಸಲಿಲ್ಲ, ಅದು ಹ್ಯಗೆ ಬಂತು ಅನ್ನೋದು ನಿಮಗೆ ಗೊತ್ತಿದೆ.” ಇಂಥ ಪ್ರತಿಕ್ರಿಯೆಯನ್ನು ಕೆಫ್ಟು ನಿರೀಕ್ಷಿಸಿದ್ದ, ಅವನು ತಬ್ಬಿಬ್ಬಾಗಲಿಲ್ಲ . “ಸೆಡ್ ಉತ್ಸವಕ್ಕೆ ಅಲ್ಲವಾದರೆ ವಸಂತ ಉತ್ಸವಕ್ಕೆ ನಿಮ್ಮ ನಾಯಕರಿಗೆ ಕರೆ ಬಂದೆಬರ್ತಿತ್ತು. ಸಿಡಿದು ಹೋದ ಪ್ರಾಂತವನ್ನು ಸದಾಕಾಲವು ಹಾಗೆಯೇ ಬಿಡ್ತಿದ್ದರಾ ? ಇವತ್ತಲ್ಲ ನಾಳೆ ಇತ್ಯರ್ಥವಾಗಲೇಬೇಕಾದ ಸಮಸ್ಯೆ. ನಿಮ್ಮ ಪ್ರಾಂತದ ವಿಷಯದಲ್ಲಿ ರಾಜಧಾನಿಯಲ್ಲಿ ಸದಭಿಪ್ರಾಯ ಮೂಡೋ ಹಾಗೆ ನಾನು ಮಾಡ್ದೆ, ಇನ್ನು ಮುಂದೆನೂ ನಾನು ನಿಮ್ಮ ಸ್ನೇಹಿತ" ವರ್ತಕ ಹೇಳಿದುದು ಸರಿ ಎನಿಸಿ, ಸುಮ್ಮನೆ ಕಹಿ ಮಾತು ಆಡಿದೆನಲ್ಲ--ಎಂದು ಬಟಾ ಪರಿತಪಿಸಿದ, ಬಟಾನ ಮೌನ ಕೆಫ್ಟುಗೆ ಅರ್ಥವಾಗಲಿಲ್ಲ; ಮುಖಭಾವವೂ ಕಾಣಿಸಲಿಲ್ಲ, ಅವನೆಂದ: “ಈಗ ತಾನೆ ಹೇಳಿದಿರಲ್ಲ ನಮ್ಮದು ಋಜುಮಾರ್ಗ, ನಮ್ಮ ಮಾಟ್