ಪುಟ:Mrutyunjaya.pdf/೪೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೪ ಮೃತ್ಯುಂಜಯ ನಮ್ಮನ್ನು ಕಾಯ್ತುದೆ ಅಂತ? ಅದು ಬಹಳ ಬೆಲೆಯ ಮಾತು. ರಾಜಧಾನಿ ಯಲ್ಲಿ ದುಡುಕಿ ಏನನ್ನೂ ಮಾಡಬೇಡಿ, ಉಪಾಯವಾಗಿ ತೊಡಕನ್ನು ಬಗೆ ಹರಿಸಿಕೊಳ್ಳಿ.” ಮೌನ ತಳೆದಿದ್ದ ಕ್ಷಣಗಳಲ್ಲಿ ಅಬ್ಟು ಯಾತ್ರಿಕರ ಬದಲು ಖೈಮ್ ಹೊಟೆಪ್ ನ ಯೋಧರನ್ನು ಕರೆದೊಯ್ದರೆ ಆಗದೆ?-ಎನಿಸಿತು ಬಟಾನಿಗೆ. ಯೋಧರ ಜತೆ ಹೋಗಿ ಅಲ್ಲಿ ಮಾಡುವುದೇನು ? ಹೋರಾಟ ? ಅರಮನೆ ಕಾವಲು ಪಡೆಗಿದರು ? ಸೈನ್ಯಕ್ಕಿದುರು ? (ಮುಂದೆ ಕೆಫ್ಟುನ ಮಾತು; 'ದುಡುಕಿ ಏನನ್ನೂ ಮಾಡಬೇಡಿ.') ಇದು ವಿವೇಕದ ನುಡಿ, ಮೆನೆಪ್ಟಾ ಇನ್ನೂ ಅತಿಥಿಗೃಹದಲ್ಲಿದ್ದಾನೆ ಎಂದ ಮೇಲೆ ಅಲ್ಲಿಂದ ಪಾರು ಮಾಡಿಸಿ ಕರೆತರು ವುದು ಕಷ್ಟವಾಗದು. ಮತ್ತೆ ಕೆಫ್ಟು  : “ಏನು ಬಟಾ. ಸುಮ್ಮನಿದ್ದೀರಲ್ಲ?” “ಏನಿಲ್ಲ, ಯೋಚಿಸ್ತಿದ್ದೆ, ನೀವು ಹೇಳಿದ್ದು ಒಪ್ಪಿಗೆ. ನಾವು ದುಡು ಕೋದಿಲ್ಲ." “ಇನ್ನು ಸ್ವಲ್ಪ ಹೊತ್ತಿನಲ್ಲಿ ರಾತ್ರೆಯ ಊಟ ಮುಗಿಸ್ಬಿಡ್ತೇವೆ.ಆಮೇಲೆ ನಮ್ಮ ಅಂಬಿಗರು ಹೇರು ಇಳಿಸೋದಕ್ಕೂ ಸ್ವೀಕರಿಸೋದಕ್ಕೂ ಸಿದ್ದ, ನೀವು--" “ಹಿರಿಯರಿಗೆ ವಿಷಯ ತಿಳಿಸಿ ರಾಜಧಾನಿಗೆ ಹೊರಡ್ತೇವೆ. ಅವರೆಲ್ಲ ಇಲ್ಲಿಗೆ ಬಂದು ಪಡೆಯುವ, ಕೊಡುವ ಕೆಲಸ ಮಾಡ್ತಾರೆ.” ತೀರಾ ಆತ್ಮೀಯವಾಗಿ ಕೆಫ್ಟುವಿನ ಧ್ವನಿ ಕೇಳಿಸಿತು: “ದೋಣಿಕಟ್ಟೇಲಿ ಕೆಫ್ಟು ಹಿರಿಯರ ದಾರಿ ನೋಡ್ತಾನೆ ಅಂತ ಅವರಿಗೆ ತಿಳಿಸಿ. ಬಟಾ." “ತಿಳಿಸ್ತೇನೆ.”

                      *                               *                                 *                             *

ಕೆಫ್ಟು ಬಂದನೆಂದು ಶಸ್ತ್ರಾಸ್ತ್ರಗಳನ್ನು ತಂದನೆಂದು ಹರ್ಷ್. ರಾಜಧಾನಿಯ ಸುದ್ದಿ ಕೇಳಿ ಕಾತರ.