ಪುಟ:Mrutyunjaya.pdf/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೫೫ "ಕೆಫ್ಟು ಈಗಲಾದರೂ ಬಂದನಲ್ಲ, ಸುದ್ದಿ ತಂದನಲ್ಲ--ಇದು ದೊಡ್ಡ ಉಪಕಾರವೇ ಸರಿ, ದೂತರು ಹೋಗಿ ಅಬ್ಟು ಯಾತ್ರಿಕರನ್ನು ಹೊರಡಿಸಲಿ. ನಾವೂ ಬರ್ತೇವೆ ದೋಣಿಕಟ್ಟೆಗೆ. ವ್ಯಾಪಾರ ಮುಗಿದು ಹೋಗಲಿ,” ಎಂದ ಸೆಮ. ಹೆಮಾನ್ ಅಂದ : “ನಮ್ಮ ಜತೆ ವ್ಯವಹಾರ ಗೋಪ್ಯವಾಗಿರಲೀಂತ ಕತ್ತಲಾದ್ಮೇಲೆ ಬಂದಿದ್ದಾನೆ . ಈಗಲೇ ಹೊರಟು ಹೋಗ್ತಾನೆ.” ಖೈಮ್ ಹೊಟೆಪ'ಗೆ ದುಗುಡ, ಸಂಭ್ರಮ ಎರಡೂ. “ಮೌಲ್ಯದ ವಿನಿಮಯದ ಜವಬ್ದಾರಿಯೆಲ್ಲ ಸ್ನೊಫ್ರು ಮಾವನ್ದು, ಸೆಬೆಕ್ಖು ಮಾವನ್ಪು ಕೊಂಡ ಸಾಮಗ್ರಿಗಳನ್ನು ರಾಜಗೃಹಕ್ಕೆ ತರೋದಕ್ಕೆ ನಮ್ಮ ಯೋಧರನ್ನು ನೇಮಿಸ್ತೇನೆ. ರಾಜಧಾನಿಗೆ ನಾನು ಹೋಗಬೇಕೆ ಏನು ಎನ್ನುವ ವಿಷಯ ಇನ್ನೊಮ್ಮೆ ಯೋಚನೆ ಮಾಡಿ,” ಎಂದು ಹೇಳಿ ಆತ ಅಲ್ಲಿಂದ ಎದ್ದು ಹೋದ. ಹೆಮ್ ಟಿ ನಿಧಾನವಾಗಿ ನುಡಿದ : “ಇಡೀ ಪ್ರಾಂತದ ರಕ್ಷಣೆ ಕಾವಲು ಪಡೆಯ ಹೊಣೆ. ಯುದ್ಧ ಎಂದಾ ದರೆ ಆ ಮಾತು ಬೇರೆ. ಅಲ್ದೆ, ನಮ್ಮದು ಆತ್ಮರಕ್ಷಣೆಯ ದಂಡು, ಆಕ್ರಮಣದ್ದಲ್ಲ...." ಸೆಬೆಕ್ಖು ಖಚಿತ ಧ್ವನಿಯಲ್ಲಿ ಅಂದ : "ಮೆಂಫಿಸಿನ ದೋಣಿಕಟ್ಟೆಯಲ್ಲೇ ನಮ್ಮ ದಂಡನ್ನು ಸುತು ವರಿದು ಶಸ್ತ್ರ ಗಳನ್ನು= ಕಸಕೊಂಡ್ಬಿಡ್ತಾರೆ. ತೋಳ್ಬಲ ತೋರಿಸ್ತೆವೇಂತ ಹೋಗೋದು ಹುಚ್ಚು ಕೆಲಸ....” ತನ್ನ ಹಣೆಯ ಮೇಲೆ ಬೆವರು ಹನಿಗಳು ಸಾಲುಗಟ್ಟಿದ್ದನ್ನು ಕಂಡು ಬಟಾಗೆ ಆಶ್ಚರ್ಯವಾಯಿತು. ಅಂಗೈಯಿಂದ ಬೆವರನ್ನು ತೊಡೆದು, ಕೂದಲ ಮೇಲೆ ಬೆರಳುಗಳನ್ನೋಡಿಸಿ, ಆತ ಎದ್ದ. “ಕೆಫ್ಟು ದೋಣಿ ಕಟ್ಟೇಲಿ ಹಿರಿಯರ ದಾರಿ ನೋಡ್ತಿದ್ದಾನೆ. ನೆಫಿಸ್ ಅಕ್ಕನಿಗೆ ಹೇಳಿ, ನಾನೂ ಅಲ್ಲಿಗೆ ಬತ್ತೇನೆ,” ಎಂದ, ಅಲ್ಲಿಂದ ಹೊರಬೀಳುತ್ತ,