ಪುಟ:Mrutyunjaya.pdf/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೬ ಮೃತ್ಯುಂಜಯ ಅಬ್ಟು ಯಾತ್ರಿಕರೊಡನೆ ಬಟಾ ಆ ರಾತ್ರಿಯೇ ಮೆಂಫಿಸಿಗೆ ಮರಳುವ ನೆಂಬ ಸುದ್ದಿ ಕಿವಿಯಿಂದ ಕಿವಿಗೆ ಆಗಲೇ ಹಬ್ಬಿತ್ತು. ವಿಷಯ ಏನೆಂದು ತಿಳಿಯಲು ನೆಫರುರಾ ಓಡಿ ಬಂದಳು, ನೆಫಿಸ್ಳಲ್ಲಿಗೆ. ಅಹೂ ತನ್ನ ಮಗಳ ನ್ನೆತ್ತಿಕೊಂಡು ಹೊರಟು ನಿಂತಳು.

      ಬಟಾ ಒಳಬಂದು ಲವಲವಿಕೆ ನಟಿಸುತ್ತ, “ಅತ್ತಿಗೆ, ಸೆಡ ಉತ್ಸವದ 

ದಿನ ಗೊತ್ತಾಗಿದೆಯಂತೆ. ನಾಳೆಯಲ್ಲ, ಇವತ್ತೇ ಹೊರಡ್ತೇವೆ,” ಎಂದ.

      “ಇವತ್ತೇ ಅಂದರೆ ಈಗಲೇ,” ಎಂದು ಮಾತು ಕೂಡಿಸಿದಳು ಅಹೂರಾ.
      ನೆಫಿಸ್ ಅಂದಳು:
     “ಕೆಲಸ ಸಲಭವಾಯ್ತು ಅಲ್ಲವಾ? ಸೆಡ್ ಉತ್ಸವ ಮುಗಿಸ್ಕೊಂಡೇ 

ನಿಮ್ಮ ನಾಯಕನನ್ನು ಕರಕೊಂಡ್ಬರ್ತೀರಿ."

     "ಹೌದು, ಅತ್ತಿಗೆ,"
     "ರಾಮೆರಿಪ್ ಟಾ ತಪ್ಪಿಸುಕೊಂಡಾನು.ಸ್ವಲ್ಪ ನೋಡ್ಕೊ, ಬಟಾ

ಅಣ್ಣ.”

     “ನಾವಿದ್ದೇವೆ. ನೆಫಿಸ್ ಅಕ್ಕ,” ಎಂದು ಅಹೂರಾ, “ನಾಯಕ ಪುತ್ರ 

ನನ್ನು ನೋಡ್ಕೊಳ್ಳದೆ ಇರ್ತೇವಾ?" ಎಂದು ಬಟಾ, ಒಟ್ಟಿಗೆ ಅಂದರು.

     ನಾನೇನು ಚಿಕ್ಕ ಮಗು ಅಲ್ಲ,” ಎಂದು ರಾಮೆರಿಪಟಾ ಪ್ರತಿ

ಭಟಿಸಿದ.

     "ನೆಜಮುಟ್ ಬಂದಳು.
     “ನೀನು ದೋಣಿಕಟ್ಟಿಗೆ ಬರೋದು ಬೇಡ ನೆಫಿಸ್, ನಾವೆಲ್ಲ ಹೋಗಿ 

ಇವರನ್ನುಕಳಿಸ್ಕೊಟ್ಟು ಬರ್ತೇವೆ.

     "“ನಾನು ದೋಣಿಕಟ್ಟೀಲಿ ಸಿಗ್ತೇನೆ....ಹೋಗಲಾ ಅತೀಗೆ?"
      "ಏನಾದರೂ ವಿಶೇಷ ತಿನಿಸು ತಯಾರಿಸಿ ರಾಮೆರಿಪ್ ಟಾ ಕೈಲಿ ಕೊಟ್ಟು

ಕಳಿಸ್ಬೇಕೂಂತಿದ್ದೆ.ಹೊರಡೋದು ನಾಳೆ, ನಾಳೆಯೇ ಮಾಡಿದರಾಯ್ತು ಅಂದುಕೊಂಡಿದ್ದೆ....ಈಗ ನೋಡಿದರೆ....”

    “ಪರವಾಗಿಲ್ಲ ಬಿಡು ಅತ್ತಿಗೆ. ನೀನು ತಟ್ಟಿದ ರೊಟ್ಟಿ, ಮಿಾನಿನ 

ಉಪ್ಪೇರಿ, ಇದ್ದರಾಯ್ತು, ಅಣ್ಣನಿಗೆ ಇನ್ನೇನೂ ಬೇಡ.”

    “ಅದನ್ನಂತೂ ಕಟ್ಟಿ ಕೊಡ್ತೇನೆ.”