ಪುಟ:Mrutyunjaya.pdf/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

       ನೆಫರುರಾ ಆಗಲೇ ಹೊರಕ್ಕೆ ನುಸುಳಿ, ಗೋಡೆಯ ನೆರಳಿನಲ್ಲಿ ಮರೆಯಲ್ಲಿ 

ನಿಂತಿದ್ದಳು.

       ಬಟಾನ ಕೈಹಿಡಿದು ಆಕೆ ಪಿಸುದನಿಯಲ್ಲಿ ಕೇಳಿದಳು:
       “ಏನೂ ಅಪಾಯ ಇಲ್ಲವಾ?” 
       ತನ್ನೊಳಗಿನ ಸಂಕಟವನ್ನು ಅವಳಿಗೆ ತಿಳಿಸಬೇಕು ಎನಿಸಿತು ಬಟಾಗೆ. 

ಹತ್ತಿರಕ್ಕೆ ಅವಳನ್ನು ಬರಸೆಳೆದ.. (ಧಿಮಿಗುಡುತ್ತಿದ್ದ ಮೆದುಳು ತೀರ್ಮಾನಿಸಿತು: ಸುದ್ದಿ ಹಬ್ಬೀತು. ಇವಳಿಗೆ ಏನನ್ನೂ ಹೇಳಬಾರದು.' )

     ನೆಫರುರಾ ಪುನಃ ಕೇಳಿದಳು: 
     “ಅಪಾಯವೇನೂ ಇಲ್ಲ, ಅಲ್ಲವಾ ?” 
     ಇಲ್ಲ ಎನ್ನುವಂತೆ ತಲೆಯಲ್ಲಾಡಿಸಿದ ಬಟಾ. 
     ಎರಡೂ ಕೈಗಳಿಂದ ಬಟಾನ ತಲೆಯನ್ನು ತನ್ನೆಡೆಗೆ ಎಳೆದು ಅವನ

ತುಟಿಗಳಿಗೆ ನೆಫರುರಾ ಮುತ್ತು ಕೂಟ್ಟಳು.

      "ಇದು ನಾಯಕರಿಗೆ," ಎಂದಳು.
       ಮತ್ತೊಂದು ಮುತ್ತು ನೀಡಿ “ಇದು ನನ್ನ ಬಟಾ ಅಣ್ಣನಿಗೆ,” ಎಂದಳು. 
      ಅವಳ ಅನಿರೀಕ್ಷಿತ ವರ್ತನೆಯಿಂದ ಬಟಾನ ಗಂಟಲು ಕಟ್ಟಿತು. 

ಮುತ್ತಿನ ಜತೆಗೆ ಮುಖಕ್ಕೆ ನೀರಿನ ಸ್ಪರ್ಷವೂ ಆಯಿತಲ್ಲ ಎಂದು, ಬಟಾ ತನ್ನ ಬೆರಳುಗಳಿಂದ ನೆಫರುರಾಳ ಕಪೋಲಗಳನ್ನು ಮುಟ್ಟಿದ. ತೋಯ್ದಿದ್ದುವು. ಆ ಕಂಬನಿಯನ್ನು ಒರೆಸಿದ.

      ಬೀದಿಯ ತಿರುವಿನಿಂದ ಮಾತಿನ ಧ್ವನಿ ಕೇಳಿಸಿತು. ನೆಫರುರಾ ನಿಟ್ಟುಸಿರು

ಬಿಟ್ಟು ಬಟಾನಿಂದ ದೂರ ಸರಿದಳು.

      ಬರ್ತೇನೆ ನೆಫರು,” ಎಂದು ಹೇಳಿ, ಬಟಾ ಇರುಳಲ್ಲಿ ಕರಗಿದ. 
     ....ಆತ ಮಡದಿಯೊಡನೆ ಕಳೆಯಬೇಕಾಗಿದ್ದ ರಾತ್ರೆ. ಯಾವುದೇ 

ಪಯಣಕ್ಕೆ ಮುಂಚೆ ನೀಡುವ ಪಡೆಯುವ ಒಲವಿನ ಉಡುಗೊರೆ. ಈ ಸಲ ಅದಿಲ್ಲ ಬಟಾ ದೋಣಿಕಟ್ಟೆಯತ್ತ ಧಾವಿಸಿದಾಗಲೇ, ಎಲ್ಲಿಯೋ ಏನೋ ಹೆಚ್ಚು ಕಡಿಮೆಯಾಗಿದೆ ಎನಿಸಿತ್ತು ಅವನ ಹೆಂಡತಿಗೆ, ಮುಂದೆ ಸ್ವಲ್ಪ ಹೊತ್ತಿನಲ್ಲಿ ದೋಣಿ ಆ ಕ್ಷಣವೇ ಹೊರಡುತ್ತದೆ ಎಂಬ ಸುದ್ದಿ ಬಂತು. ಮುಂಜಾವ ಹೊರಟಿದ್ದರೆ ಆಗುತ್ತಿರಲಿಲ್ಲವೇನೋ ಎಂದುಕೊಂಡಳು. ನಿರಾಸೆ. ಒಂದು ಚೂರು ಸಿಡುಕು ಕೂಡಾ.