ಪುಟ:Mrutyunjaya.pdf/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

      ಮಕ್ಕಳು ಮಲಗಿದ್ದುವು. ಅವಳು ಬಾಗಿಲಲ್ಲಿ ನಿಂತಿದ್ದಳು. ಬಟಾ 

ಬಿರುಗಾಳಿಯಂತೆ ಅವಳನ್ನು ತಳ್ಳಿಕೊಂಡು ಒಳಕ್ಕೆ ನುಗ್ಗಿದ. ಅವಳ ನಡು ವನ್ನು ಬಳಸಿ ಹೇರಳವಾಗಿ ಮುತ್ತುಕೊಟ್ಟ. "ಈ ಸುಗಂಧ ಎಲ್ಲೀದು?"ಎಂದು ಆಕೆ ಕೇಳಿದಳು .

ಮರಳ  ದಿಬ್ಬವನ್ನು ಒರೆಸಿತಲ್ಲ ನಾವೆ?

“ಕೆಫ್ಫು ತಂದದ್ದು,” ಎಂದ. ('ನೆಫರುರಾ ಹೆಸರನ್ನೆತ್ತಿ ಮಡದಿಯ ಅರ್ಥವಿಲ್ಲದ ಕೊರಗಿಗೆ ಯಾಕೆ ಕಾರಣನಾಗಲಿ?') “ಈಗಲೆ ಹೋಗ್ಬೇಕೆ ?" “ಹ್ಗ್ನ, ಈ ಸಲ ದೂರವಿರೋದು ಹತ್ತೇ ದಿನ.” “ಊಟಕ್ಕಿಡ್ತೇನೆ.” “ಬೇಡ. ನಿಂತುಕೊಂಡೇ ತಿನ್ತೇನೆ. ಒಂದು ರೊಟ್ಟಿ ಕೊಡು." “ನಿನ್ನೆ ತಂದ ಖಿವವ ಮಿಕ್ಕಿದ್ದು ಸ್ವಲ್ಪ ಇದೆ.” “ನಿನಗಿರಲಿ.” “ಊಹೂಂ.ನೀನು ತಗೋ.”

 ಒಂದೆರಡು ತುಣುಕು ರೊಟ್ಟಿ ತಿಂದು ಬಟಾ, “ಸಾಕು. ಹಸಿವಿಲ್ಲ.” ಎಂದುಬಿಟ್ಟ ಅರ್ಧ ಬಟ್ಟಲು ಖಿವವವನ್ನು ಗಟಗಟನೆ ಕುಡಿದ. ಉಳಿದರ್ಧ ವನ್ನು ಅದರಲ್ಲೇ ಬಿಟ್ಟು ,"ನಿನಗೆ,"ಎಂದ.
 ಅವನ ಹೆಂಡತಿ ತಾನು ಒಗೆದು ಒಣಗಿಸಿ ಮಡಚಿ ಇಟ್ಟಿದ್ದ  ಗಂಡನ ನಡು ವಸ್ತ್ರವನ್ನೂ ಕೊಳಲನ್ನು ತಂದುಕೊಟ್ಟಳು.

ನಡುವಸ್ತ್ರವನ್ನು ಭುಜದ ಮೇಲಿರಿಸಿ, ಕೊಳಲನ್ನು ತುಟಿಗಳಿಗೆ ತಗಲಿಸಿ ಮಡದಿಯ ಮುಖದತ್ತ ತಿರುಗಿಸಿ "ಪೀ" ಎಂದ . ಮಕ್ಕಳ ಕಡೆಗೊಮ್ಮೆ ನೋಡಿದ. ಕೊಳಲಿನಿಂದ ಪತ್ನಿಯ ತಲೆಯನ್ನು ಮೆಲ್ಲನೆ ತಟ್ಟಿದ. “ಹುಟ್ಟು ಹಾಕ್ರೇನೆ ಇನ್ನು,” ಎಂದು ಹೇಳಿ ಬೀದಿಗಿಳಿದ.

 ಬಿರಬಿರನೆ ನಡೆಯುತ್ತಿದ್ದ ಗಂಡನ ಆಕೃತಿ ಬೇಗನೆ ಮಸಕಾಯಿತು.ಏನು ಕಾಣಿಸದೆ ಇದ್ದರೂ ಗಂಡ ಹೋದ  ದಿಕ್ಕನ್ನೇ ಅವನ ಹೆಂಡತಿ ನೋಡುತ್ತ ಬಾಗಿಲಲ್ಲಿ ಬಹಳ ಹೊತ್ತು ನಿಂತಳು.