ಪುಟ:Mrutyunjaya.pdf/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

 ದೋಣಿಕಟ್ಟೆಯ ಬಳಿಯ ವಿಸ್ತಾರ ಸ್ಥಳವನ್ನು ಕೆಫ್ಫುವಿನ ಅಂಬಿಗರೂ ಖೈಮ ಹೊಟೆಪ್ ನ ಯೋಧರೂ ಹಚ್ಚಿದ ಪಂಜುಗಳು ಜಾತ್ರಾಸ್ಥಳವಾಗಿ ಮಾರ್ಪಡಿಸಿದ್ದುವು."ಅಬ್ಟು ಯಾತ್ರೆಯಲ್ಲೂ ಹೀಗಿಯೇ ಇತ್ತು ಅಲ್ಲವಾ?"ಎನ್ನುತ್ತ  ಆ ಯಾತ್ರಿಕರು ತುಸು ಕೆಳಗೆ ಬಂಡೆಗೆ ಕಟ್ಟಿದ್ದ ಬಟಾನ ದೋಣಿ ಯನ್ನು ಏರತೊಡಗಿದರು. ಹಿರಿಯರು ಕಟ್ಟೆಯ ವೇದಿಕೆಯ ಮೇಲೆ ಕುಳಿತರು. ಕೆಫ್ಫ್ತು 'ನಿಮ್ಮ ಜತೆ ನನಗೂ ನೆಲವೇ ಸಾಕು'-ಎಂದ. 
 ವೇದಿಕೆಯ ಬಳಿ ಬಂದು ದೀಪದ ಕೆಳಗೆ ಇಪ್ಪ್ಯುವರ್ ನಿಂತುಕೊಂಡ,ತೆರೆದ ಲಿಪಿಸುರುಳಿಯನ್ನು ಕೈಯಲ್ಲಿ ಹಿಡಿದು.
 “ಯಾವು ಯಾವುದಕ್ಕೆ ಎಷ್ಟೆಷ್ಟು ಮೌಲ್ಯ ಅಂತ ನಾನು ಹಿಂದೆ ಹೇಳಿದ್ದನ್ನು ನಿಮ್ಮ ಲಿಪಿಕಾರ ಬರಕೊಂಡಿದ್ದಾರೆ.ಅಲ್ಲವಾ? " ಎಂದ ಕೆಫ್ಫ್ಟು.
 ಅರಳು ನಗೆ ತೋರಿ  ಇಪ್ಪ್ಯುವರ್ ನೇ ಆ ಪ್ರಶ್ನೆಗೆ ಉತ್ತರವಿತ್ತ :

“ಬರಕೊಂಡಿದ್ದೇನೆ. ಇಲ್ಲಿದೆ....ನಮ್ಮಿಂದ ಕೊಳ್ಳೋ ಸಾಮಗ್ರಿಗಳ ಮೌಲ್ಯವಷ್ಟೇ ಬರೆದಿದೆ.” “ಈ ಸಲ ನಾನು ಕೊಡೋ ವಸ್ತುಗಳ ಮೌಲ್ಯ ಎಷ್ಟು ಅಂತಲೂ ಗೊತ್ತಾಗ್ರದೆ. ಬರಕೊಂಡ್ಬಿಡಿ.” ಹಾಳೆ, ಹಲಗೆ, ಮಸಿಪಾತ್ರೆ, ಲೆಕ್ಕಣಿಕೆ ವೇದಿಕೆಯ ಬುಡದಲ್ಲಿ ಕತ್ತಲಲ್ಲಿದ್ದವು. ಇವು ಕೆಫ್ಫ್ಟುಗೆ ಕಾಣಿಸಿರಬೇಕು, ಅದಕ್ಕೇ ಹೀಗೆ ಹೆಳ್ತಾನೆ-ಎಂದು ಕೊಂಡ ಇಫ್ಫ್ಟುವರ್.ಬಟಾನನ್ನು ಕಾಣಲು ಅವನಿಗೆ ತವಕ, ಅರ್ಚಕ ಅಪೆಟ್ ಹೊತ್ತಿಗೆ ಮುಂಚೆ ತನ್ನ ಮಗನನ್ನು ಒಂದು ಸಂದೇಶ ದೊಡನೆ ಕಳಿಸಿದ್ದ. ಆ ಸಂದೇಶವನ್ನು ಬಟಾನಿಗೆ ತಲಪಿಸಬೇಕು. ಅಲ್ಲದೆ. ಕೆಳಗೆ ದೋಣಿಯ ಬಳಿ ಬಟಾ ಮತ್ತು ಖೈಮ್ ಹೊಟೆಪ್ರ ಸ್ವರ ಕೇಳಿಸಿ ದೊಡನೆ ಇಫ್ಫ್ತುವರ್ ಅಲ್ಲಿಗೆ ಧವಿಸಿದ. “ಬಟಾ, ಪ್ರಯಾಣ ಹೊರಡೋದಕ್ಮುಂಚೆ ಮಂದಿರಕ್ಕೆ ಬಂದು ಪ್ರಸಾದ ಸ್ವೀಕರಿಸಬೇಕೂಂತ ಅಪೆಟ್ ಹೇಳಿ ಕಳಿಸಿದ್ದಾರೆ.” “ ಇಷ್ಟು ಹೊತ್ನಲ್ಲಿ ದೇವರು-ಅಪೆಟ್ ಇಬ್ಬರೂ ಮಲಗಿರ್ತಾರೆ. ನಾಳೆ ಅರ್ಚಕ ಏನೇನು ವ್ಯಾಪಾರವಾಯ್ತೂಂತ ಕೇಳೋದಕ್ಕೆ ಬರ್ತಾರೆ .ಆಗ