ಪುಟ:Mrutyunjaya.pdf/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೦ ಮೃತ್ಯುಂಜಯ ತಿಳಿಸ್ಬಿಡಿ: ಪ್ರಸಾದ ಜೋಪಾನವಾಗಿಡ್ಬೇಕಂತೆ, ರಾಜಧಾನಿಯಿಂದ ವಾಪ ಸಾದ್ಮೇಲೆ ಇಸಕೋತೇನಂತೆ_ಅಂತ." “ಇನ್ನೊಂದು ವಿಷಯ ಬಟಾ.. ಅಲ್ಲಿ ಖರ್ಚಿಗೆ ಬೇಕಾದೀತೇನೋ....

ರಾಜಗೃಹದಿಂದ ಒಂದಿಷ್ಟು ವಿನಿಮಯ ಸಾಮಗ್ರಿಗಳನ್ನು ತಂದಿದ್ದೇನೆ. ಮೂಟೆ

ಅಲ್ಲಿದೆ-ದಂಡೆ ಮೇಲೆ." “ಇದಕ್ಕೆ ದೂರದೃಷ್ಟಿ ಅನ್ನೋದು. ಒಳ್ಳೆ ಕೆಲಸ ಮಾಡಿದಿರಿ.

ಗೇಬುವಿನ ಪೆಟಾರಿಗಳನ್ನೂ ತಂದಿಲ್ಲ ತಾನೆ?”

“ತರಬೇಕಾಗಿತ್ತಾ ? ದೋಣಿ ತುಂಬಿರ್ತದೆ ಅಂತ-” “ನಿಜ. ಅಣ್ಣ ನಮ್ಮ ರಾಜಧಾನಿಗೆ ವಾಪಸಾದ್ಮೇಲೆ ನೀವು ಆ ಪೆಟಾರಿ

ಗಳನ್ನು ತಗೆಂಡು ಲಿಷ್ಟ್‍ಗೆ ಹೋಗಿ ಗೇಬುಗೆ ತಲಪಿಸ್ಬೇಕು ಹಾಗೆಯೇ

ಮೆಂಫಿಸಿಗೂ ಹೋಗಿ ಅಲ್ಲಿನ ಲಿಪಿಕಾರಯ್ಯಾದಿಗಳಿಗೆ ನಿಮ್ಮ ಹಸಾಕ್ಷರ ತೋರಿಸ್ಬೇಕು.” “ತಮಾಷೆ ಮಾತಾ ?” “ಛೆ! ಛೆ!” “ನಾನೊಬ್ಬನೇ !” “ಹೆದರ್ಕೇನಾ ? ದಳಪತಿ ಮತ್ತು ನಾನು ಜತೆಗಿರ್ತೇವೆ.” ಖ್ನೆಮ್‍ಹೊಟೆಪ್‍ನ ಧ್ವನಿ ಕೇಳಿಸಿತು: “ಎಲ್ಲರೂ ಹತ್ತಿದಿರಾ ?....ಸರಿ....” ಇಪ್ಯುವರ್ನನ್ನು ಬಟಾ ಕೇಳಿದ : “ನುಬಿಯದಿಂದ ವಾಪಸು ಬರುವಾಗ ಸಿದ್ಧ ಸಾಮಗ್ರಿಗಳನ್ನು ತಗೊಂಡು ಹೋಗ್ತೇವೆ-ಅಂತ ಕೆಪ್ಪ ಹಿಂದೆ ಹೇಳಿದ್ದ.” “ಇಲ್ಲ, ಹಿರಿಯರು ಬಂದ ತಕ್ಷಣ ಅದು ಇತ್ಯರ್ಥವಾಯಿತು. ಈಗಲೇ ಬೇಕಂತೆ." ಕೈಯಲಿದ್ದ ಕೊಳಲನ್ನೂ ಮಡಚಿದ ನಡುವಸ್ತ್ರವನ್ನೂ ತನ್ನ ಅಂಬಿಗರ ವಶ ಕೊಟ್ಟು ಬಟಾ ಅಂದ: "ನಿಮ್ಮ ಮೂಟೇನ ದೋಣೀಲಿ ಇಡಿಸಿ."