ಪುಟ:Mrutyunjaya.pdf/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಜಯ ೪೬೧

 "ಹೂಂ ಹೂಂ," ಎಂದು ಇಪ್ಯುವರ್ ಪಂಜು ಕಂಬಗಳೆಡೆಯಿಂದ ಹತ್ತಾರು ಮಾರುಗಳಾಚೆ ಸಾಗಿದ.
   ವೇದಿಕೆಯತ್ತ ಹೋಗಲು ಬಟಾ ಬಯಸಲಿಲ್ಲ. ಕೆಫ್ಟುವಿನವರು ಮಾತು ಸಹಿಸುವುದು ಇನ್ನು ತನ್ನಿಂದಾಗದು ಎನಿಸಿತು.
   ಕೆಫ್ಟು, ವಿದಾಯದ ವಂದನೆಗೆ ಬಟಾ ಬರಬಹುದು ಎಂದು, ಚಿಕ್ಕ ದೋಣಿಯಿಂದ ಕೇಳಿಸುತ್ತಿದ್ದ ಕಲರವದತ್ತ ಕತ್ತು ಚಾಚಿ ಕುಳಿತಿದ್ದ, ಅವನು ಬರದೇ ಇದಾಗ, ಹಿರಿಯರನ್ನು ವೇದಿಕೆಯ ಮೇಲೆಯೇ ಬಿಟ್ಟು ಬಟಾನ ಆಕೃತಿ ದೂರದಿಂದ ಕಣ್ಣಿಗೆ ಬಿದ್ದ ಕಡೆಗೆ ತಾನು ನಡೆದ.
  ಇದನ್ನು ಕಂಡ ಬಟಾ "ಬಂದ ಸೆತ್" ಎಂದು ಗೊಣಗಿ, ತಾನೂ ಕೆಫುನತ್ತ ಹೊರಟ ನಡುದಾರಿಯಲ್ಲಿ ಅವನನ್ನು ಸಂದಿಸಿದ.
  ಕೆಫ್ಟು ಕೇಳಿದ:
 “ನನ್ನ ಮೇಲೆ ಕೋಪವಾ?”
 “ ಇಲ್ಲವಪ್ಪ.”
 "ಮೆಂಫಿಸಿನ ದೋಣಿಕಟ್ಟೆಗೆ ನೇರವಾಗಿ ಹೋಗ್ಬೇದಿ. ನಿಮ್ಮ ದೋಣಿಯ ಪರಿಚಯ-ನಿಮ್ಮ ಪರಿಚಯ-ಕಟ್ಟೆಯವರಿಗಿದೆ ಅರಮನೆ ಕಾವಲು ಭಟರೂ ಆಳುಗಳೂ ನಿಮ್ಮನ್ನು ಬಲ್ಲರು. ಬಕಿಲ ಬೇರೆ ಅಲ್ಲಿ ಓಡಾಡ್ತಿರಾನೆ. ಸೆಡ್ ಉತ್ಸವದ ಮುನ್ನಾ ದಿನದಿಂದಲೇ ಮೆನ್ನ ನಿಮ್ಮ ದಾರಿ ನೋಡ್ತಾನೆ. ರಾಜಧಾನಿ ಹತ್ತಿರ ಬಂದ ಹಾಗೆ ಎಡದಂಡೆ ಕಡೆ ದೃಷ್ಟಿ ಇಡಿ.”
  "ಹೂಂ. "
  “ಕಠಾರಿಗಿಂತಲೂ ಚಿಕ್ಕದು ಬಾಕು ತಂದಿದ್ದೇನೆ. ಸುಲಭವಾಗಿ ನಡು ವಸ್ತ್ರದಲ್ಲಿ ಮುಚ್ಚಿಟ್ಕೋಬೌದು . ಆತ್ಮರಕ್ಷಣೆಗೆ ಆಗ್ತದೆ. ಒಂದು ಹತ್ತು ಕೊಟ್ಟಿರ್ಲಾ? ಇದಕ್ಕೆ ಪ್ರತಿಯಾಗಿ ನೀವೇನೂ ಕೊಡೋದು ಬೇಡ.”
  "ಕೃತಜ್ಞ."
  "ಪ್ರಯಾಣಕ್ಕೆ ಇನ್ನೇನಾದರೂ ಬೇಕಾದರೆ ಹೇಳಿ.”
  " ಏನೂ ಬೇಡ.”
  ಕೆಫ್ಟು ತಿರುಗಿ ನೋಡಿದ. ನಾಲ್ಕು ಹೆಜ್ಜೆ ಹಿಂದೆ ನಿಂತಿದ್ದರು ಅವನ ಇಬ್ಬರು ಸೇವಕರು. ಅವರಲ್ಲೊಬ್ಬನಿಗೆ ಕೆಫ್ಟು ನಿರ್ದೇಶವಿತ್ತ :