ಪುಟ:Mrutyunjaya.pdf/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೨ ಮೃತ್ಯುಂಜಯ

   "ಹತ್ತು ಬಾಕು ತಂದು ಇವರಿಗೆ ಕೊಡು."
    ಆ ಸೇವಕ  ನಿರ್ಗಮಿಸುವುದನ್ನು ಮೋಡುತ್ತಿದ್ದು, ತನ್ನವರು ಹೇರು ದೋಣಿಗಳಿಂದ ಸಾಮಾನುಗಳನ್ನು ಇಳಿಸುತ್ತಿದ್ದುದರ ಕಡೆಗೊಮ್ಮೆ ದೃಷ್ಟಿ ಹಾಯಿಸಿ, ಕೆಫ್ಟು ಮತ್ತೆ ಬಟಾನತ್ತ ಹೊರಳಿದ.
   "ಸಂಘಟನಾ ಕೌಶಲದಲ್ಲಿ ಐಗುಪ್ತದ ಜನರನ್ನು ಮೀರಿಸುವವರು ಬೇರೆಲ್ಲೂ    ಇಲ್ಲ. ಆದರೆ ಐಗುಪ್ತದಲ್ಲಿ ನೀರಾನೆ ಪ್ರಾಂತದವರ ಸಂಘಟನಾ ಸಾಮರ್ಥ್ಯಕ್ಕೆ ಬೇರೆ ಯಾವ ಪ್ರಾಂತದೂ ಸಾಟಿಯಿಲ್ಲ.”
   ಬಟಾ ಏನೂ ಹೇಳಲಿಲ್ಲ.ಹೇರುನಾವೆಯಿಂದ ಇಳಿಸಿದ ಸರಕುಗಳತ್ತ ಸಾಗುತ್ತಿದ್ದ ಖೈಮ್ ಹೊಟೆಪ್ ನನ್ನು ಅವನ ದೃಷ್ಟಿ ಹಿಂಬಾಲಿಸಿತು. ಇಪ್ಯುವರ್ ಓಡಿಬಂದು, “ಇಟ್ಟಾಯ್ತು,” ಎಂದು ಹೇಳಿ, ವೇದಿಕೆಯತ್ತ ಧಾವಿಸಿದ.
   ಕೆಫ್ಟು ನಿಧಾನವಾಗಿ ಅಂದ:
   "ನಿಮ್ಮ ದಳಪತಿ, ನಿಮ್ಮ ಲಿಪಿಕಾರ-ಇವರು ಸಾಮಾನ್ಯ ಮನುಷ್ಯರು ಅಲ್ಲವೇ ಅಲ್ಲ."
   ಕಾಲ ಕಳೆಯಲು ಮಾತು ಎನಿಸಿತು ಬಟಾಗೆ. ಅವನು ನಕ್ಕು, "ಈ
ಬಡ ಅಂಬಿಗ?"ಎಂದು ಕೇಳಿದ.
   "ಬಡ ಆಂಬಿಗ ಬಟಾ ಸದಾ ಕಾಲವೂ ಹೀಗೆ ನಗುನಗ್ತಾ ಇರಲಿ ಅನ್ನೋದೇ ನನ್ನ ಪ್ರಾರ್ಥನೆ...ಅಗೋ ಬಾಕುಗಳು. ನಿಮಗೆ ಒಳ್ಳೆದಾಗಲಿ.” ಅಷ್ಟು ಹೇಳಿ ಕೆಫ್ಟು, ಸರಕ್ಕನೆ ತಿರುಗಿ, ಕಟ್ಟೆಯ ವೇದಿಕೆಯತ್ತ ಹೊರಟು ಹೋದ. ಸೆಣಬಿನ ಬಟ್ಟೆ ಸುತ್ತಿದ್ದ ಬಾಕುಗಳ ಪುಟ್ಟ ಸೇವಕನಿಂದ ಪಡೆದು ಬಟಾ     ತನ್ನ ದೋಣಿಯತ್ತ ನಡೆದ. ದೋಣಿಯ ಬಳಿ ಕಟ್ಟನ್ನು ಸಡಿಲಿಸಿ ಒಂದು ಬಾಕುವನ್ನು ಹೊರತೆಗೆದು ಮೊನೆಯನ್ನು ಪರೀಕ್ಷಿಸಿ "ಚೂಪಾಗಿದೆ.                    
   ಹರಿತವಾಗಿದೆ” ಎಂದು ಸಮಾಧಾನ ಪಟ್ಟುಕೊಂಡ.
   ದಂಡೆಯ ಮೇಲಿನಿಂದ ನೆಜಮುತಟ್ ಕೀರಲು ಗಂಟಲಲ್ಲಿ ನುಡಿದಳು:
  " ನಿಂತಿರೋರೆಲ್ಲ ಕೂತ್ಕೋಂಡ್ಬಿಡಿ. ದೋಣಿ ಹೊರಡ್ತದೆ. ಆಹೂರಾ, ರಾಮೆರಿನ ನೋಡ್ಕೊ. ಜೋಪಾನ, ಎಲ್ರೂ ಜೋಪಾನ.”
  ದಂಡೆಯ ಮೇಲೆ ಗುಂಪು ಕೂಡಿದವರನ್ನು ಸೀಳಿ ಕೂಡಿದ್ದವರನ್ನು ಸೀಳಿ ಖ್ನೆಮ್ ಹೊಟೆಪ್ ಮುಂದೆ ಬಂದು ಸ್ವರವೇರಿಸಿ ಅಂದ: