ಪುಟ:Mrutyunjaya.pdf/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೬೩

   " ಈಟಿ, ಕಠಾರಿ, ಬಿಲ್ಲುಬಾಣ-ಎಲ್ಲ ಚೆನಾಗಿವೆ, ಬಟಾ ಅಣ್ಣ, ಹೋಗಿ ಬನ್ನಿ."
   ಬಟಾ ಒಳಗೆ ಬಂದೊಡನೆ,ದೋಣಿಯನ್ನು ದಂಡೆಯಿಂದ ದೂರ ಸರಿಸಿದ್ದರು. ಅದೀಗ ಚಲಿಸತೊಡಗಿತು.
   ಬಟಾ ನೆಟ್ಟಗೆ ನಿಂತು, ಬಲತೋಳನ್ನೆತ್ತಿ ದಂಡೆಯ ಕಡೆಗೆ ಚಾಚಿ ಗಟ್ಟಿಯಾಗಿ ನುಡಿದ:
   “ ಸ್ವರ್ಣದೇವತೆ ಹಾಥೋರ್ ನಿಮ್ಮೆಲ್ಲರ ಮೂಗುಗಳಿಗೆ ಬಲಕೊಡಲಿ! ಹಿರಿಯರಿಗೂ ಎಲ್ಲ ಬಂಧುಗಳಿಗೂ ತಿಳಿಸ್ಬಿಡಿ."ಮೆನೆಪ್ ಟಾ ಅಣ್ಣನನ್ನು ಕರಕೊಂಡು ಬೇಗನೆ ವಾಪಸು ಬರ್ತೇವೆ.”
    ದಡದಲ್ಲಿದ್ದ ಕೆಲವರು ತಮ್ಮ ಮೂಗುಗಳನ್ನು ಮುಟ್ಟ ನೋಡಿ ನಕ್ಕರು.    
   ಖ್ನೆಮ್ ಹೊಟೆಪ್ ಘೋಷ ಆರಂಭಿಸಿದ. ಅವನ ಎಡಬಲಗಳಲ್ಲೂ ಹಿಂಬದಿಯಲ್ಲೂ ನಿಂತಿದ್ದವರೆಲ್ಲ ಅಂದರು:  
   "ಓ ಮೆನೆಪ್ ಟಾ ! ಓ ಮೆನೆಪ್ ಟಾ!"
    ರಾಮೆರಿಪ್ ಟಾನನ್ನು ಒಳಗೊಂಡು ದೋಣಿಯಲ್ಲಿದ್ದವರೆಲ್ಲ ಮಾರ್ನುಡಿದರು:
   "ಓ ಮೆನೆಪ್ ಟಾ !  ಓ ಮೆನೆಪ್ ಟಾ!"....
   ...ನೀರಾನೆ ಪ್ರಾಂತದವರು ಕೇಳಿದ್ದೆಲ್ಲವನ್ನೂ ಕೆಫ್ಟು ತಂದಿದ್ದ. ನಾರಗಸೆ ಎಣ್ಣೆ ತೊಲಗಲಿ ನಾಲ್ವತ್ತು ಚೀಲಗಳಲ್ಲಿ, ಹುದುಗುಪುಡಿ ಒರಟು ಸೆಣಬಿನ ಐವತ್ತು ಮೂಟೆಗಳಲ್ಲಿ, ಉತ್ತಮ ಪೀಠೋಪಕರಣಗಳ ತಯಾರಿಕೆಗೆ ಬಳಸಲು ಅರವತ್ತು ಮೋಪಾದ ಹಲಗೆಗಳು, ನೂರು ಜನರ ಪಡೆಗೆ ಸಾಲುವಷ್ಟು ಶಸ್ತ್ರಾಸಗಳು. ಒಂದು ರಂಧ್ರಗಡಿಯಾರವೂ ಇತ್ತು. ಆತ ಬಯಸಿದ್ದನ್ನು ನೀರಾನೆ ಪ್ರಾಂತದವರು ಸಿದ್ಧಗೊಳಿಸಿದ್ದರು. ಇಪ್ಪತ್ತು ಮರದ ಗಡಿಯಾರಗಳು, ನೂರಾರು ಕೈಗೋಲು, ಊರುಗೋಲು, ನೇಗಿಲುಗಳು, ಐನೂರು ದೇವತಾ ಮೂರ್ತಿಗಳು, ಇಪ್ಪತ್ತು ತೊಗಲಿನ ಚೀಲಗಳಲ್ಲಿ  ಜೇನು....ಉಚಿತ ಕಾಣಿಕೆ ಒಂದು ಚೀಲ ಖಿವವ. ಮೌಲ್ಯಮಾಪ ಸಮನಾಗಿಲ್ಲ.
    "ನೂರುಬಳ್ಳ ಯವೆ ಅಥವಾ ಅರವತ್ತು ಬಳ್ಳ ಗೋಧಿ ಕೊಡ್ರಿ," ಎಂದ

ಕೆಫ್ಟು.