ಪುಟ:Mrutyunjaya.pdf/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೪ ಮೃತ್ಯುಂಜಯ

     ಜನ ಸಾಲುಗಟ್ಟಿ ರಾಜಗೃಹಕ್ಕೆ ತೆರಳಿ ಅಷ್ಟನ್ನು ತಂದರು.
     ಇಪ್ಯುವರ್ ನಡೆದ ವ್ಯವಹಾರವನ್ನು ಲಿಪಿಸುರುಳಿಯಲ್ಲಿ ದಾಖಲು ಮಾಡಿದ.
    ಸ್ನೊಫ್ರುವೆಂದ:
    "ಮುಂದಿನ ಸಲ ಶಸ್ತ್ರಾಸ್ತ್ರಗಲು ಬೇಡ. ಮರದ ದಿಮ್ಮಿಗಳೂ ಹಲಗೆ ಗಳೂ ಬೇಕು. ಎಣ್ಣೆ ಇತ್ಯಾದಿಗಳು ಈ ಸಲದ ಹಾಗೆಯೇ. ಹಾಲುಗಲ್ಲು ನುಣುಪು ಕರಿಶಿಲೆ ಸಿಕ್ಕಿದರೆ ತನ್ನಿ."
    "ಕಲ್ಲು? ಶಿಲೆ? ಶಿಲ್ಪಿ ಇರುವನಾ ನಿಮ್ಮಲ್ಲಿ?” ಎಂದು  ಕೇಳಿದ 

ಕೆಫ್ಟು.

    "ಹ್ಞ.  ಶ್ರೇಷ್ಟ ಶಿಲ್ಪಿ. ಇಲ್ಲಿಗೆ ಹೊಸಬ.  ಸೊಬಗನ್ನು ಸೃಷ್ಟಿಸುವ  

ಮಾಯಾವಿ."

    "ಮುಂದಿನ ಸಲ ಬಂದಾಗ ಆತನನ್ನು ಕಾಣ್ಬೇಕು ; ಆತ ಸೃಷ್ಟಿಸಿರುವು ದನ್ನು ನೋಡ್ಬೇಕು. ಕಲ್ಲಿನ ಸಣ್ಣ ತುಂಡುಗಳನ್ನು ತರುವುದು ಸುಲಭ. ಆಳೆತ್ತರದ ಪ್ರತಿಮೆ ಮಾಡೋದಕ್ಕಾದರೆ ಅಂಥ ಕಲ್ಲಿನ ಸಾಗಣೆಗೆ ಪ್ರತ್ಯೇಕ ದೋಣಿ ಬೇಕಾಗ್ತದೆ. ನೋಡೋಣ.”
    ಸೆಮ ಕೆಫ್ಟುವನ್ನು ಕೇಳಿದ:
   "ನಿಮಗೆ ಮುಂದಿನ ಬಾರಿ ಏನೇನು ಬೇಕು?"
   "ರಂಧ್ರ ಗಡಿಯಾರ ಮಾಡೋದು ಸಾಧ್ಯವಾದರೆ ಒಂದು ಹತ್ತಿಪ್ಪತ್ತು ಇರಲಿ. ಉಳಿದದ್ದೆಲ್ಲ ಇವತ್ತು ಕೊಟ್ಟಷ್ಟು ಮುಂದಿನ ಸಲವೂ ಬೇಕು. ನೀವು ಹೊಸತು ಏನು ಸೃಷ್ಟಿ ಮಾಡಿದರೂ ಮಾದರಿಗಾಗಿ ಒಂದೊಂದು ನನಗೆ..."
   ಮಾತು. ಲೆಕ್ಕಗಳ ವಿವರ. ಎಣ್ಣೆ ತೀರಿದ ಪಂಜುಗಳು ಕೆಲವು ಆರಿದುವು. ('ಹೇಗೂ ಕೆಲಸ ಮುಗಿಯಿತಲ್ಲ.') ನೀಲನದಿಯ ಪೂರ್ವ ದಂಡೆಯ ಆಚೆಗಿಂದ ಚಂದ್ರಬಿಂಬ ಕಾಣಿಸಿತು. ತಕ್ಕಮಟ್ಟಿಗೆ ಪ್ರಕಾಶಮಾನವಾದ  ಬೆಳದಿಂಗಳು ಆ ಪ್ರದೆಶವನ್ನು ವ್ಯಾಪಿಸಿತು.
   ಖ್ನೆಮ್ ಹೊಟೆಪ್ ನ ನಾಯಕತ್ವದಲ್ಲಿ ಕೊಂಡ ಸಾಮಗ್ರಿಗಳೆಲ್ಲ ರಾಜ ಗೃಹ ತಲಪಿದುವು.