ಪುಟ:Mrutyunjaya.pdf/೪೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೬೫

     ಹಿರಿಯರಿಗೆ ಕೆಫ್ಟು ಅಂದ:
     "ನಿಮ್ಮ ಪ್ರಾಂತಕ್ಕೆ ನನ್ನಿಂದ ಒಂದಿಷ್ಟಾದರೂ ಸೇವೆ ಸಲ್ತಿದೆಯಲ್ಲ ಅಂತ ಸಮಾಧಾನ....ದೇವರು ನಿಮಗೆ ಒಳ್ಳೇದು ಮಾಡ್ತಾನೆ....ನನಗೆ ಅಪ್ಪಣೆ ಕೊಡ್ತೀರಾ? ಅಂಬಿಗರು ಸಿದ್ಧವಾದ ಕೂಡಲೇ ನಾವು ಹೊರಡ್ತೇವೆ.”
    "ಹ್ಞ  ಹ್ಞ,” ಎಂದರು ಸೆಮ ಮತ್ತಿತರರು, ಏಳುತ್ತ.
    ಕೆಫ್ಟು  ಹೇರುನಾವೆಯನ್ನೇರಿ  ತನ್ನ ಕೊಠಡಿಯನ್ನು ಸೇರಿದ. ಮನಸ್ಸಿ ನಲ್ಲೇ ಅಂದಿನ ವ್ಯಾಪಾರದಲ್ಲಿ  ಲಾಭ ಎಷ್ಟಾಯಿತೆಂದು ಎಣಿಕೆ ಹಾಕಿದ. ಮೆಂಫಿಸಿನಲ್ಲಿ ಮಹಾರಾಣಿಯ ಎದುರು ಕೇಶಕವಚವನ್ನು ಎತ್ತಿ ಹಿಡಿದು  ತಾನು ನಿಂತ ಚಿತ್ರ ಕಣ್ಣಿಗೆ ಕಟ್ಟಿತು.
    ಕುಳಿತಲ್ಲಿಯೇ  ತೂಕಡಿಕೆ. ಯಾರೋ  ರೋದಿಸುವ ಸ್ವರದಲ್ಲಿ  "ಓ  ಕೆಫ್ಟು ! ಓ  ಕೆಫ್ಟು!” ಎಂದಂತಾಯಿತು. ಬೆಚ್ಚಿಬಿದ್ದು ಎಚ್ಚರಗೊಂಡು ಕಿಂಡಿ ಯಿಂದ ಹೊರ ನೋಡಿದ ಯಾರೂ  ಇರಲಿಲ್ಲ. ನಿಷ್ಕೃಮಿಸುತ್ತಿದ್ದ ಹಿರಿಯರು  ಮತ್ತಿತ್ತರರ ಮಾತಿನ ಧ್ವನಿ ಕ್ಷೀಣವಾಗಿ ಕೇಳಿಸಿತು.
    ಬಿಚ್ಚಿದ ಹಾಯಿಗಳ ಮಡಿಲಲ್ಲಿ ಗಾಳಿ ತುಂಬಿಕೊಂಡಿತು. ಕಟ್ಟೆಯ ಗೂಟಗಳಿಗೆ ಕಟ್ಟಿದ್ದ ದಾರ ಬಿಚ್ಚಿ ನಾವೆಯನ್ನು ಅಂಬಿಗರು ನದಿಯ ಮಧ್ಯಕ್ಕೆ ಸಾಗಿಸಿದರು. 
      *         *       *        *
    ಮೊಸಳೆಪ್ರಾಂತವನ್ನು ದಾಟುತ್ತಿದ್ದಂತೆ ಬಟಾ  ತನ್ನ  ಅಂಬಿಗರನ್ನು  ಕೇಳಿದ:
   "ಕೆಪ್ಪು ಈಗ ಹೊರಟಿರಬಹುದು ಅಲ್ಲವಾ?”
   "ಹೊರಟಿರ್ಬೇಕು," ಎಂದ ಒಬ್ಬ.
   "ಆಗಾಗ್ಗೆ ಹುಟ್ಟು ಕೂಡಾ ಹಾಕ್ತಿರಿ.  ಆದಷ್ಟು ಬೇಗನೆ  ರಾಜಧಾನಿ ತಲುಪೋಣ."
       ೩೦