ಪುಟ:Mrutyunjaya.pdf/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೬ ಮೃತುಂಜಯ


                                                     ೧೧
                 ಸೆಡ್ ಉತ್ಸವದ ಹಿಂದಿನ ರಾತ್ರೆ ಅರಮನೆಯ ಸೇವಕ ಗಣಕ್ಕೆ ಅರ್ಧ
         ನಿದ್ದೆ. ಮುಂಜಾವದಲ್ಲಿ ಪೆರೋ ಪರಿವಾರ ಮಹಾಮಂದಿರಕ್ಕೆ ಹೋಗಬೇಕು,
         ಧಾರ್ಮಿಕ ವಿಧಿಗಳಿಗಾಗಿ. ಪೂಜಾ ಪರಿಕರಗಳನ್ನು ಜತೆಯಲ್ಲಿ ಒಯ್ಯಬೇಕು,
         ಪಲ್ಲಕಿಗಳಿಗೆ ಅಲಂಕಾರ. (ಈ ಕೆಲಸದಲ್ಲಿ ನೂರಾರು ಜನ ನಿರತರು.) ಬಳಿಕ 
         ಮೆರವಣಿಗೆ. ಉತ್ಸವದ ಮಧ್ಯಾಹ್ನ ಮಹಾ ಅರ್ಚಕರಿಗೂ ಅಮಾತ್ಯ ಮತ್ತಿತರ
         ಪ್ರಮುಖ ಆಡಳಿತಗಾರರಿಗೂ ಐಗುಪ್ತದ ನಾನಾ ಕಡೆಗಳಿಂದ ಆಗಮಿಸಿದ್ದ
         ಪ್ರಾಂತಪಾಲರಿಗೂ ಪ್ರತಿಷ್ಠೆತ ವಣಿಕರೇ ಮೊದಲಾದವರಿಗೂ ಭೂರಿ 
         ಭೋಜನ.  (ಅದಕ್ಕಾಗಿ ಸಹಸ್ರಾರು ಜನರ ದುಡಿಮೆ.) ಸಂಜೆ ಅರಮನೆಗೆ
         ದೀಪಾಲಂಕಾರ.  ರಾತ್ರೆ ಅರಮನೆಯ ಆಟದ ಬಯಲಲ್ಲಿ ಕ್ರೀಡೆಗಳು. ಬಳಿಕ
        ತೆಪ್ಪೋತ್ಸವ. (ಇದಕ್ಕಾಗಿ ಬೇರೆ ಸಾವಿರಾರು ಜನರ ಪರಿಶ್ರಮ....)
               ಆ ಗದ್ದಲದ ನಡುವೆ ನಿದ್ದೆ ಎಲ್ಲಿಯದು ? ಬೆಕ್ ಔಟರ ಜತೆ ಮೆನೆಪ್ಟಾ
         ಎಚ್ಚರವಿದ್ದ .
               ಮುಂದಿನ ಒಂದು ಹಗಲು ಕಳೆದರಾಯಿತು. ಸೆಡ್ ಉತ್ಸವ ಮುಗಿಯು
         ತ್ತದೆ.  ಆ ರಾತ್ರೆಯೇ ಊರಿಗೆ ಹೊರಡಬಹುದು ತಾನು, ಬಟಾ ಇನ್ನೂ 
         ಬರಲಿಲ್ಲವಲ್ಲ.  ಅಗತ್ಯಬಿದ್ದರೆ ಆರು ದಿನಗಳ ದೂರವನ್ನು ನಾಲ್ಕೇ  ದಿನಗಳಲ್ಲೂ
         ಆತ ಕ್ರಮಿಸಬಲ್ಲ. ದೋಣಿ ತುಂಬ ಜನರಿದ್ದಾಗ ಮಾತ್ರ ಸ್ವಲ್ಪ ನಿಧಾನ 
        ವಾಗಬಹುದು. ಅಥವಾ ಈ ಕೆಪ್ಟುವೇ ಸುದ್ದಿ ತಿಳಿಸುವುದನ್ನು ತಡಮಾಡಿದನೋ ?
        ಹೊಸ ಗಿರಾಕಿ ಕುದುರಿದರೆ ದಾರಿಯಲ್ಲಿ ಅವನು ಒಂದರ್ಧ ದಿನ ನಿಂತರೂ 
        ನಿಂತನೇ.  ತನಗೆ ತಿಳಿಸಲೆಂದು ಮೆನ್ನನೊಡನೆ  ಕೆಪ್ಟು ಕಳುಹಿಸಿದ ಸಂದೇಶ
        ಎಷ್ಟರ ಮಟ್ಟಿಗೆ ಪ್ರಾಮಾಣಿಕವಾದ್ದು? ' ಒಂದು ನಿಮಿಷ ಕೂಡ ಪುರ 
        ಸೊತ್ತು ಸಿಗಲಿಲ್ಲ.  ನಾಯಕರನ್ನು ನೋಡೋದಕ್ಕೆ ಆಗಲಿಲ್ಲ.   ಅವರು 
       ನನ್ನನ್ನು ಕ್ಷಮಿಸ್ಬೇಕು.....ಈಗಿಂದೀಗ ನೀರಾನೆ ಪ್ರಾಂತಕ್ಕೆ ಹೊರಡ್ತೇವೆ....ಸೆಡ್ 
       ಉತ್ಸವದ ಮುನ್ನ ದಿನವೇ ಅವರ ಸಂಗಡಿಗರೆಲ್ಲ ಇಲ್ಲಿಗೆ ಬರೋ ಹಾಗೆ