ಪುಟ:Mrutyunjaya.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೭

"ಮೂರ್ಖ ! ನಾಯಿಯ ಹಾಗೆ ನನ್ನ ಹಿಂದೆಯೇ ಬರಬೇಡ ಅಂತ ಎಷ್ಟು ಸರ್ತಿ ಹೇಳ್ಬೇಕು ನಿನಗೆ ? ತೊಲಗಾಚೆ ! ನಿನ್ನ ಮುಸುಡು ತೋರಿಸ್ಬೇಡ ! ರಾಜಧಾನಿಗೆ ಹೋದ್ಮೇಲೆ ನಿನ್ನ ವಿಚಾರಣೆ ನಡೆಸ್ತೇನೆ !"

ದೇವಸೇವಕಿ ಎದ್ದು ನಿಂತು, ಹೆರಳನ್ನು ಹಿಂದಕ್ಕೆ ತಳ್ಳಿ, ಹೇಪಾಟನ ಕ್ರೋಧಕ್ಕೆ ತುತ್ತಾದವನನ್ನು ನೋಡಿದಳು. ಸ್ಫರದ್ರೂಪಿ ಯುವಕ ದೇವ ಸೇವಕ. ಅವ್ಯಕ್ತ ಸಂಕಟ ಆವರಿಸಿದ್ದ ಮುಖ. ತಲೆಯೇನೋ ಬಾಗಿತ್ತು. ಆದರೆ ಹೆದರಿರಲಿಲ್ಲ. ಆತ ಹೊರಟ. ನಡಿಗೆ ದೃಢವಾಗಿತ್ತು.
      ದೇವಸೇವಕ ಹೋದೊಡನೆಯೇ ಮಹಾಅರ್ಚಕನ ಮಾತು ದ್ರವಿಸಿತು :

" ದಿನವೆಲ್ಲ ಉಪವಾಸವಿದ್ದೆ____ಅಲ್ಲವಾ ? ಹೋಗು ಮಗು. ಊಟ ಮಾಡಿ ಸನ್ನಿಧಿಗೆ ಬಾ.” ಅಷ್ಟು ಹೇಳಿ ಹೇಪಾಟ್ ಟಪಟಪನೆ ನಡೆದು ಹೊರಹೋದ.

                 *            *             *            *           

ಬಳಲಿಕೆಯ ಯಾವ ಕುರುಹನ್ನೂ ಉಳಿಸದ ಉಲ್ಲಾಸ. ಅಬ್ವುವಿನಲ್ಲಿ ನೆರೆದಿದ್ದ ಐಗುಪ್ತದ ಎಲ್ಲ ಭಾಗಗಳ ಜನರಿಗೆ ಅದೊಂದು ಎಂದೂ ಮರೆಯ ಲಾಗದ ಮಹಾ ಅನುಭವ. ಧರ್ಮಾತ್ಮ ದೊರೆಯ ಅಂತಿಮ ಯಾತ್ರೆಯಲ್ಲಿ ಅವರು ಪಾಲ್ಗೊಂಡಿದ್ದರು, ಸಾಧ್ವೀಮಣಿ ಐಸಿಸಳನ್ನು ಕಂಡಿದ್ದರು ; ಸರ್ವ ಶಕ್ತನಾದ ಪೆರೋನನ್ನೂ ಇಡೀ ದೇಶದ ಸರ್ವೊಚ್ಚ ಧರ್ಮಾಧಿಕಾರಿಯನ್ನೂ ನೋಡಿದ್ದರು. ಮಹಾಜಾತ್ರೆಯಲ್ಲಿ ಭಾಗವಹಿಸಿ ಪುಣ್ಯಭಾಜನರಾಗಿದ್ದರು. ಮುಂದಿನವರು ಹೇಳಬಹುದು : " ನಮ್ಮ ತಾತ ಅಬ್ವುವಿಗೆ ಹೋಗಿದ್ದ.” ......ತಂದೆಯ ಹೆಗಲನ್ನೇರಿದ, ರಾಮೆರಿಪ್‌ಟಾ‌‌. ಅವನಿಗೆ ತೂಕಡಿಕೆ. " ದೋಣಿಯಲ್ಲಿ ತುಸು ಉಂಡು ಆಮೇಲೆ ನಿದ್ದೆ ಮಾಡುವಿಯಂತೆ," ಎಂದಳು ತಾಯಿ. ನೆಫಿಸ್ ಮೆನೆಪ್‌ಟಾರಿಗೆ ಕುಡಿದ ಖಿವವದಿಂದ ಮತ್ತೇರಿರಲಿಲ್ಲ. ಆದರೆ, ಜಾತ್ರೆಯ ಸಮೂಹ ಅನುಭವ ಅವರ ಪಾಲಿಗೂ ಮಾದಕವಾಗಿತ್ತು. ಆ