ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೪೬೭
ಮಾಡ್ರೇವೆ.' ಸಂಗಡಿಗರು ಬಂದು ತಲಪಿಲ್ಲ ಎಂದು, ಅವನ ಮಾತಿನ ಬಗೆಗೆ ಈಗ ಶಂಕೆ. ಬೆಳಗಾಗುವುದರೋಳಗೆ ಬಟಾ ಬಂದೇ ಬಿಟ್ಟರೆ ?.... 'ನಾಯಕರು ನಿಶ್ಚಿಂತೆಯಾಗಿರ್ಲಿ ಎಲ್ಲ ಸರಿಹೋಗ್ತದೆ,' ಎಂದು ಹೇಳಿದ್ದ ಕೆಫ್ಟು. ಸಂತೈಸುವ ನುಡಿ ? ಭೇಟಯಾಗದೆ ಇರಲು ಬೇರೇನಾದರೂ ಕಾರಣ ? ತನ್ನ ಮೇಲಿನ ಕಾವಲು ಬಿಗಿಯಾದುದನ್ನು ಅರಿತಾಗ ಮೆನೆಪ್ ಟಾ, ಬಾಹ್ಯವಾಗಿ ತೋರ್ಪಡಿಸದೆ ಇದ್ದರೂ, ಒಳಗೆ ತುಸು ಕಾತರಗೊಂಡಿದ್ದ. ಆದರೆ ಸ್ವಲ್ಪ ಹೊತ್ತಿನಲ್ಲೇ ದುಗುಡವನ್ನು ಬದಿಗೆ ತಳ್ಳಿ, ಋಜುಮಾರ್ಗ ಆವಲಂಬಿಗಳಿಗೆ ಯಾತರ ಭಯ ?---ಎಂದ ತನ್ನನ್ನು ತಾನೇ ಸಂತೈಸಿದ. ಔಟ ಮತ್ತು ಬೆಕ್ ತಲೆವಾಗಿಲಲ್ಲಿ ನಿಂತ,, ಕಲರವಕ್ಕೆ ಕಿವಿಗೊಡುತ್ತ, ಜನರ ಓಡಾಟವನ್ನು ದಿಟ್ಟಿಸುತ್ತಲಿದ್ದರು. ಹೋರಗಿನಿಂದ ಒಬ್ಬ ಇತ್ತ ಬರು ತ್ತಿದ್ದಾನೆ. ಯಾರು? ಸೆನೆಬ್ ? ಈ ಹೊತ್ತಿನಲ್ಲಿ ಮರಳುಗಾಡಿನ ಏಕಾಕಿ ಗಳಿಗೆ ಸೆತ್ ಸಾನ್ನಿಧ್ಯವೂ ಅಪೇಕ್ಷಣೀಯ.... ಒಳಬಂದನು ನಿತ್ಯದ ನಗೆ ಬೀರಿ ಸೆನೆಬ್ ಆಂದ : 'ಇಲ್ಲಿ ಬೆಳಕು ನೋಡ್ಡೆ. ಬಂದೆ. ನಾಯಕರಿನ್ನೂ ನಿದ್ರಿಸಿಲ್ಲ.......' ಏನಾದರು ಹೇಳಬೇಕು ಮೆನೆಪ್ ಟಾ. " ಸೆಡ್ ಉತ್ಸವದ ತಯಾರಿಯ ಸಂಭ್ರಮ, ಮಹಾಪ್ರಭುವೂ ಎಚ್ಚರ ವಾಗಿಯೇ ಇಡದ್ದಾರೆ ಅಂತ ತೋರ್ತದೆ." " ಇಲ್ಲ, ಮಲಗಿ ಸ್ವಲ್ಪ ಹೊತ್ತಾಯ್ತು. ಅವರು ಮುಂಜಾವ ಬೇಗನೆ ಏಳಬೇಕಲ್ಲ.....ರಾ ಉದಿಸುವುದಕ್ಕೆ ಮುಂಚೆ ಇಲ್ಲಿಂದ ಹೊರಟು ಬಿಸಿಲೇರುವ ಹೊತ್ತಿಗೆ ಮರಳಿ ಬರ್ತಾರೆ." " ಈಗ ಮಧ್ಯರಾತ್ರಿ ಇರಬಹುದು, ಅಲ್ಲವಾ?” " ಮಧ್ಯರಾತ್ರಿ ದಾಟಿದೆ. ಸೆಡ್ ಉತ್ಸವದ ಸ್ಮರಣಾರ್ಥ ಬಂದಿಗಳನ್ನು ಬಿಡ್ತಾರ. ಆದಕ್ಕೇಂತ ಕಾರಾಗೃಹದ ಅಧಿಕಾರಿ ಆಚೆಗೆ ಹೋದ. ನಾನು ಈಚೆಗೆ ಬಂದೆ. ಅಗೋ ಬಂದು !" ಇದ್ದಕ್ಕಿದಂತೆ ಗದ್ದಲ ಕೇಕೆ ನಗು. ನಡುಬಟ್ಟೆಯ ಹೊರತು ಬರಿಮೈ. ಕಿರಿಯರು ಯುವಕರು ಮಧ್ಯವಯಸ್ಕರು ವೃದ್ದರು. ನೀಳ ಗಡ್ಡ ಕೇಶ ಕೆಲವರಿಗೆ, ಬಡಕಲು ಜೀವಗಳು. ಕೆಲವರು " ನಾವು ಹೋಗೋದಿಲ್ಲ. ಇಲ್ಲಿಯೇ