ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೬೮ ಮೃತ್ಯುಂಜಯ
ಇರ್ತೇವೆ,” ಎನ್ನುತ್ತಿದ್ದರು. ಕಾವಲು ಭಟರ ಈಟಿಗಳು ಅಂಥವರನ್ನು ತಿವಿದು ಮುಂದಕ್ಕೆ ಅಟ್ಟುತ್ತಿದ್ದುವು. ಅರಮನೆಯ ಸೇವಕರು ಕೈಯಲ್ಲಿದ್ದ ಕೆಲಸವನ್ನು ಬಿಟ್ಟು, ವಿಮುಕ್ತ ಸೆರೆಯಾಳುಗಳನ್ನು ಹೊರಕ್ಕೆ ಕಳುಹುವ ಕಾರ್ಯಾಚರನೆ ಪ್ರೇಕ್ಷಕರಾಗಿದ್ದರು. ಬಂದಿಗಳ ನಡುವೆ ಒಬ್ಬ ದೈತ್ಯಕಾಯನಿದ್ದ. ಪಂಜು ಬೆಳಕನ್ನು ಸಮೀಪಿಸಿದಾಗ ಅವನ ಮುಖ ಭೀಕರವಾಗಿ ಕಂಡಿತು. ಸೆನೆಬ್ ನುಡಿದ : "ಜಜ್ ಮಂಖ್. ಗೋರಿ ದರೋಡೆಗಾರ. ಐದು ವರ್ಷ ಹಿಂದೆ, ನಮ್ಮ ಮಹಾಪ್ರಭುವಿನ ತಾತನ ಗೋರಿಯನ್ನು ಲೂಟಿ ಮಾಡ್ತಿದ್ದಾಗ ಸಿಕ್ಕಿ ಬಿದ್ದವನು. ಮರಣ ದಂಡನೆಗೆ ಗುರಿಯಾಗಬೇಕಿತ್ತು. ಅದೃಷ್ಟಶಾಲಿ. ಕಾರಾಗೃಹಕ್ಕೆ ಬಂದ. ಭಲೇ ಅದೃಷ್ಟಶಾಲಿ. ತನ್ನ ಕಸುಬಿಗೆ ವಾಪಸಾಗ್ರಿದ್ದಾನೆ." "ಸೆಡ್ ಉತ್ಸವ ಹಿಂದಿನ ಪದ್ಧತಿಯಂತೆ ಮೂವತ್ತುವರ್ಷಕ್ಕೊಮ್ಮೆಯೇ ನಡೀತಿದ್ರೆ ಜಜ್ ಮಂಖ್ ಇನ್ನೂ ಹತ್ತು ವರ್ಷ ಕಾಯಬೇಕಾಗ್ತಿತ್ತು." "ಹಹ್ಹ! ನೀರಾನೆ ಪ್ರಾಂತದ ನಾಯಕರು---ನೀವು---ಸೆಡ್ ಉತ್ಸವ ಕ್ಕೇಂತ ರಾಜಧಾನಿಗೆ ಈಗ ಬತ್ತಲೂ ಇರಲಿಲ್ಲ!" ಜನ "ಜಜ್ ಮಂಖ್ ! ಜಜ್ ಮಂಖ್ !" ಎಂದು ಕೂಗುತ್ತಿದ್ದರು. "ಮಾತನಾಡು" ಎನ್ನುತ್ತಿದ್ದರು. ಆತ ಸಿಟ್ಟಾಗಿ ಸಿಂಹದಂತೆ ಗರ್ಜಿಸುತ್ತಿದ್ದ, ತನ್ನನ್ನು ಮುಟ್ಟಿಲು ಬಂದ ವರನ್ನು ತೋಳುಬೀಸಿ ಚೆದರಿಸುತ್ತಿದ್ದ, " ಹೊಹ್ಹೊಹ್ಹೊ " ಎಂದು ಜನ ಬಿದ್ದು ಬಿದ್ದು ನಗುತ್ತಿದ್ದರು. ಇದ್ದಕ್ಕಿದಂತೆ ಸದ್ದಡಗಿತು. ಛಟಿಲ್ ಛಟಿಲೆಂದುವು ಭಟರ ಚಾವಟಿ ಗಳು. " ಅಯ್ಯೋ ! ಅಯ್ಯೋ !" ಎಂದರು ಏಟು ತಗಲಿದವರು. ಅರಮನೆ ಕಾವಲುಗಾರರ ದಳಪತಿ ಎತ್ತರದ ಧ್ವನಿಯಲ್ಲಿ ಗದರಿದ : " ಇದೇನು ಸಂತೆ ಅಂದ್ಕೊಂಡ್ರಾ ? ಪೆರೋ ಮಲಗಿದ್ದಾರೆ. ಬುದ್ದಿ ఇల్ల ನಿಮಗೆ ? ಹೊರಡಿ ಇಲ್ಲಿಂದ ! ಕೆಲಸಕ್ಕೆ! " ಮತ್ತೆ ಏಟುಗಳು---ಅರಮನೆ ಸೇವಕರಿಗೆ, ವಿಮುಕ್ತ ಕೈದಿಗಳಿಗೆ. ಚುರುಕು ಮುಟ್ಟಿಸಿಕೊಂಡವರು ಬಾಯಿಗಳಿಗೆ ಅಂಗೈ ಅಡ್ಡ ಹಿಡಿದರು, ಚೀತ್ಕಾರ