ಪುಟ:Mrutyunjaya.pdf/೪೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                ಮೃತ್ಯುಂಜಯ                          ೪೬೯


        ಕೇಳಿಸಬಾರದೆಂದು. ಸೇವಕರು ಗುಂಪು ಹಿಮ್ಮೆಟ್ಟತು. ಬಿಡುಗಡೆ ಹೊಂದಿ
        ದವರು ಪ್ರಾಕಾರದ ಮಗ್ಗಲು ಬಾಗಿಲಿನೆಡೆಯಿಂದ ಬೀದಿಗೆ ಇಳಿದರು.
                ಮೆನೆಪ್ ಟಾ, ಸೆನೆಬ್ ಇಬ್ಬರೂ ಮಾತಿಲ್ಲದೆ ಕೆಲವು ಕ್ಷಣ ಕಳೆದರು.
                ಬಳಿಕೆ ಅಮಾತ್ಯರ ಹಿರಿಯ ಲಿಪಿಕಾರ ಅಂದ :
                "ಸೆಡ್ ಉತ್ಸವ ಅಂದರೆ ಖೊನ್ಸುಗೆ ತಲೆನೋವು."
                "ಖೋನ್ಸು ? ಪ್ರವಾಸಿಗಳ ಅಧಿಕಾರಿ ?”
                "ಹೌದು. ನೀವು ಮರೆತಿಲ್ಲ ! ಅವನಿಗೂ ಅಷ್ಟೆ, ಸಾರಿಗೆ ಅಧಿಕಾರಿಗೂ
       ಅಷ್ಟೆ. ನೀವು ಇಲ್ಲೇ ಇದ್ದೀರಿ. ನಿಮಗೆ ತಿಳೀತಾ ಇಲ್ಲ, ಹೊರಗೆ ಗದ್ದಲವೋ
       ಗದ್ದಲ, ಮಹಾ ಅರ್ಚಕರು ಬಂದು ಸೆಡ ಉತ್ಸವಕ್ಕೆ ದಿನ ಗೊತ್ತು ಮಾಡಿದ್ದೇ
       ತಡ, ದಂಡೆ ಪ್ರಾಂತಗಳಿಗೂ ಒಳನಾಡಿಗೂ ಬಾಣದ ವೇಗದಲ್ಲಿ ಸುದ್ದಿ ಹಬ್ಬಿ,
       ಹಿಂಡುಗಟ್ಟಲೆ ಜನ ಬಂದೇ ಬಿಟ್ಟಿದ್ದಾರೆ ನದಿ ತುಂಬ ದೋಣಿಗಳು,
       ತುಂಬ ಕತ್ತೆಗಳು. ನಿಮ್ಮೂರಿನಂಥ ದೂರ ಸ್ಥಳಗಳಿಗೆ ಮಾತ್ರ ಸುದ್ದಿ ತಡ
       ವಾಗಿ ಮುಟ್ಟಿದೆ....."
                "ಇಷ್ಟು ದಿನ  ಕಾದದ್ದು ವ್ಯರ್ಥವಾಗಲಿಲ್ಲ.  ಸೆಡ್ ಉತ್ಸವ ನೋಡೋ 
       ಅವಕಾಶ ಸಿಗ್ತು.”
                "ನಿಮ್ಮ ದೋಣಿಕಾರ ಬಟಾ ನತದೃಷ್ಟ. "
                ಮೆನೆಪ್ ಟಾ ಸುಮ್ಮನಿದ್ದ.  ಹೊರಡುವುದಕ್ಕೆ ಮುನ್ನ ಸೆನೆಬ್ ಮಾತಿನ 
       ಎಳೆಯನ್ನು ಮತ್ತಷ್ಟು ಜಗ್ಗಿದ.
                "ನೀವು ಎಷ್ಟು ಹೊತ್ತಿಗೆ ಸಿದ್ಧರಾಗಬೇಕು ಏನು ಅಂತ ಅಮಾತ್ಯರು 
       ನನಗೆ ಹೇಳಿಲ್ಲ,  ಪಲ್ಲಕಿ ಏರ್ಪಾಟಿಗೂ ಆಜ್ಞೆ ನೀಡಿಲ್ಲ. ಸ್ವಲ್ಪ ತಡವಾಗಿ 
       ಕರೆದುಕೊಂಡು ಹೋಗ್ತಾರೇಂತ ತೋರ್ತದೆ.  ನೀವಿನ್ನು ನಿದ್ದೆ ಮಾಡಿ. ನಾನು 
       ಈ ರಾತ್ರೆ ಇಲ್ಲಿಯೇ ಇರಬೇಕಾಗ್ತದೆ.   ಉಗ್ರಾಣದ ಪಡಸಾಲೆಯಲ್ಲಿ ಸ್ವಲ್ಪ 
       ಹೊತ್ತುಮಲಕೊತ್ತೇನೆ.”
                 " ಆಗಲಿ," ಎಂದ ಮೆನೆಪ್ ಟಾ.
                 ಸೆನೆಬ್ ನಿರ್ಗಮಿಸಿದ. “ನೀವು ಮಲಕೊಳ್ಳಿ, ನಾವು ಎಚ್ಚರವಿತ್ತೇವೆ,"
       ಎಂದ ಔಟ.