ಪುಟ:Mrutyunjaya.pdf/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೨ ಮ್ರುತ್ಯುಂಜಯ

ಅವನತ್ತ ಸರಿದಾಗ ಔಟ ಬೆಕ್ ಬಿಡಿಸಿಕೊಳ್ಳಲು ಚಡಪಡಿಸುತ್ತಿದ್ದರು. “ಮುಟ್ಬೇಡಿ! ಮುಟ್ಬೇಡಿ !”ಎಂದು ಕೂಗಾಡಿದರು. ಅವರ ಕೈಗಳನ್ನು ಬೆನ್ನ ಹಿಂದೆ ಹಗ್ಗದಿಂದ ಬಿಗಿದು,ಈಟಿ ಮೊನೆಗಳಿಂದ ಬೆನ್ನು ತೋಳುಗಳನ್ನು ಚುಚ್ಚಿದರು ಭಟರು. ಔಟ, ಬೆಕ್ ಕೂಗು ನಿಲ್ಲಿಸಲಿಲ್ಲ. "ಜೋಕೆ! ನಾಯಕರ ಮೈ ಮುಟ್ಟಿದರೆ ಜೋಕೆ!" ಮೆನೆಪ್ಟಾ ತನ್ನವರನ್ನು ಉದ್ದೇಶಿಸಿ ಅಂದ : “ಔಟ, ಬೆಕ್, ಸುಮ್ಮನಿರಿ.” ಭಟರು ನಾಯಕನನ್ನು ಸುತ್ತುವರಿದು ನಿಂತರು. “ಏನಿದು? ಬಂಧನವೇ ?” ದಳಪತಿ ಕರ್ಕಶ ಗಂಟಲಲ್ಲಿ ಗದರಿದ: "ಹ್ಞ ! ರಾಜಾಜ್ಞೆ !” “ಸಿದ್ಧವಾಗಿದ್ದೇನೆ. ಕರಕೊಂಡು ಹೋಗಬಹುದು.” "ಹೊರಡಿ!"

ಭಟರು ಔಟ ಬೆಕ್ ರನ್ನು ತಳ್ಳುತ್ತ ಅಂಗಳಕ್ಕಿಳಿದು, ಅಲ್ಲಿದ್ದ ಯೋಧರ 

ದೊಡ್ಡಗುಂಪನ್ನು ಸೇರಿದರು. ದಳಪತಿಯನ್ನು ಹಿಂಬಾಳಿಸಿ ಬಂದರು,

ಮೆನೆಪ್ಟಾ ಮತ್ತು ಅವನನ್ನು ಸುತ್ತುವರಿದಿದ್ದವರು.

“ತಪ್ಪಿಸ್ಕೊಂಡಾರು, ಎಚ್ಚರ !"ಎಂದ ದಳಪತಿ, ಗಟ್ಟಿಯಾಗಿ. ಅದು ಸಾಲದೆಂದು,"ತಪ್ಪಿಸಿಕೊಂದರೆ ನಮ್ಮನ್ನು ಹಿಡಿದು ಹಾಕ್ತಾರೆ!”

ಎಂದೂ ಗದರಿದ.

ತನ್ನ ಧ್ವನಿಗೆ ತಾನೇ ಮೆಚ್ಚಿ, ಹೆಚ್ಚು ಹೆಚ್ಚು ಧೈರ್ಯ ತಳೆಯುತ್ತ, ಆತ ಆಜ್ಞಾಪಿಸಿದ: "ನಡೀರಿ ಕಾರಾಗೃಹಕ್ಕೆ !” ಬಟಾ ಹಿಂದೆ ಅಂದಿದ್ದ : 'ಅತಿಥಿ ಗೃಹದ ಹತ್ತಿರದಲ್ಲೇ ಇದೆ ಕಾರಾ

ಗೃಹ.' ಮೆನೆಪ್ ಟಾಗೆ ಆ ದಿಕ್ಕು ಗೊತ್ತಿತ್ತು, ಈಗ ಅದರಲ್ಲಿ ವಾಸಿಸುವ 

ಅವಕಾಶ.