ಪುಟ:Mrutyunjaya.pdf/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ್ರುತ್ಯುಂಜಯ ೪೭೩

      ಚಂದ್ರನ ಮಂದಪ್ರಕಾಶ ಪಂಜುಗಳೊಡನೆ ಸೆಣಸತೊಡಗಿತ್ತು. ಕಟ್ಟಡ

ಗಳ ನೀಳ ನೆರಳುಗಳಿಂದ ಆವೃತ್ತವಾಗಿತ್ತು ಪರಿಸರ. ಕಾರಾಗೃಹದ ಅಧಿಕಾರಿ ಅಲ್ಲಿ ನಿಂತಿದ್ದ. ಇಬ್ಬರು ಭಟರು ಪಂಜುಗಳನ್ನು ತಂದರು. ಅವರಲ್ಲಿ ಒಬ್ಬ ನನ್ನು, ಔಟ ಬೆಕ್ ರನ್ನು ಹಿಡಿದುಕೊಂಡಿದ್ದವರು ಹಿಂಬಾಲಿಸಿದರು. (ಮೆನೆಪ್ ಟಾನಿಗೆ ಅನಿಸಿತು: ನಮ್ಮನ್ನು ಬೇರ್ಪಡಿಸುತ್ತಿದ್ದಾರೆ. ಅಲ್ಲಿರುವ ಕಲ್ಲಿನ ಕಟ್ಟಡದೊಳಕ್ಕೆ ಔಟ-ಬೆಕ್ ರನ್ನು ತಳ್ಳುತ್ತಾರೆ.) ಇನ್ನೊಂದು ಪಂಜು ದಳ ಪತಿಗೂ ನಾಯಕನನ್ನು ಸುತ್ತುವರಿದಿದ್ದ ಯೋಧರ ಗುಂಪಿಗೂ ದಾರಿ ತೋರಿತು. ಆ ಕಟ್ಟಡದ ಇನ್ನೊಂದು ಪಾರ್ಶ್ವದಲ್ಲೊಂದು ಬಾಗಿಲು. ('ಕಾವಲುಗಾರರಿಲ್ಲ ವಲ್ಲ?....ಎಲ್ಲ ಬಂದಿಗಳೂ ಮುಕ್ತರಾಗಿರುವ ರಾತ್ರಿ. ಇದು ಬರಿದಾದ ಸೆರೆ ಮನೆ........ ') ಒಂದು ಮೊಳ ದಪ್ಪ. ನಾಲ್ಕರು ಜನ ಬಲ ಪ್ರಯೋಗಿಸಿ ದರು. ಬಾಗಿಲು ಒಬ್ಬನನ್ನು ಒಳಕ್ಕೆ ಬಿಡುವಷ್ಟು ತೆರೆದುಕೊಂಡಿತು. ಮುಂದೆ ಹೋದ ಪಂಜಿನ ಬೆಳಕು ಮೆಟ್ಟಲುಗಳನ್ನು ತೋರಿಸಿತು. ಕೆಳಕ್ಕೆ ('ಇದು ಗೋರಿಯಂತಿದೆ........ಶಾಶ್ವತ ಮನೆಗೂ ಸೆರೆಮನೆಗೂ ಏನು ವ್ಯತ್ಯಾಸ?") ಇಳಿಯತೊಡಗಿದರು. ಪಂಜು ಮುಂದೆ ಹೋದಷ್ಟೂ ಮೆಟ್ಟಲು ಗಳು. ಎಡಕ್ಕೆ-ಬಲಕ್ಕೆ, ನಿಂತರು. ಮತ್ತೊಂದು ಬಾಗಿಲು. ಪುನಃ ಅವ ರೋಹಣ. ಮತ್ತೂ ಒಂದು ಬಾಗಿಲು.

     ಅದು ತುಸು ತೆರೆದುಕೊಂಡಾಗ ದಳಪತಿ ಬದಿಗೆ ಸರಿದ. ಯಾರೋ

ಮೆನೆಪ್ಟಾನನ್ನು ಹಿಂದಿನಿಂದ ತಳ್ಳಿದರು. ಅವನು ಮುಂದಕ್ಕೆ ಮುಗ್ಗರಿಸಿದ. ಬಾಗಿಲು ಮುಚ್ಚಿದ ಸದ್ದು. ಕತ್ತಲು. ಮೆಟ್ಟಲುಗಳನ್ನೇರಿ ನಿರ್ಗಮಿಸಿದ ಪದ ಹತಿಯ ಸಪ್ಪಳ ಕ್ಷೀಣವಾಯಿತು. ('ಬಾಗಿಲು ಮುಚ್ಚಿದಂತಾಯಿತಲ್ಲ? ಮೇಲ್ಗಡೆ ಇನ್ನೂ ಒಂದಿದೆ. ಅದಾದ ಮೇಲೆ ಒಂದಿಷ್ಟು ಬೆಳದಿಂಗಳು....')

     ಮೆನೆಪ್ ಟಾ ಹಿಂದಕ್ಕೆ ಹೊರಳಿ ಬಾಗಿಲನ್ನು ಮುಟ್ಟಿದ. ಪಕ್ಕಕ್ಕೆ ಸರಿದು

ಕೈ ಚಾಚಿದಾಗ ಕಲ್ಲಿನ ತಣುಪು ಸ್ಪರ್ಶ.

     ಬಹಳ ಹೊತ್ತು ನಾಯಕ ನಿಂತಲ್ಲಿಯೇ ನಿಂತ. ನಿಶ್ಯಬ್ದ. ಬಲುಮಟ್ಟಿಗೆ

ಸ್ತಬ್ಧ ಗಾಳಿ. ('ಒಂದೆರಡು ತೂತು ಎಲ್ಲಾದರೂ ಇವೆಯೇನೋ') ಇಷ್ಟವಲ್ಲದ ವಾಸನೆ. ತನ್ನ ಧ್ವನಿ ತನಗೆ ಹೇಗೆ ಕೇಳಿಸುವುದೊ ಇಲ್ಲಿ? (“ಬಟಾ”) ಗುಂಯ್ ಗುಡುವ ಪ್ರತಿಧ್ವನಿ, (“ನೆಫಿಸ್” “ರಾಮೆರಿ”) ಗುಂಯ್ ಗುಂಯ್....