ಪುಟ:Mrutyunjaya.pdf/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೪೭೪ ಮ್ರುತ್ಯುಂಜಯ

   ಮೆನೆಪ್ ಟಾ ಗೋಡೆಗೆ ಒರಗಿದ. ಹಾಗೆಯೇ ಕೆಳಕ್ಕೆ ಚಾರಿದ; ಒರಗಿ

ಕುಳಿತ.

   ಮುಗುಳುನಗೆ, ಧ್ವನಿಪಡೆಯದ ಮಾತಿಗೆ ಮುನ್ನ. 'ಯಾವುದು ಆಗ

ಲಾರದು. ಅಂದ್ಕೊಂಡಿದ್ದೆವೂ ಅದು ಆಗಿಯೇ ಬಿಟ್ತು, ಬಟಾ....'

   ಯೋಚನೆ. ಔಟ ಬೆಕ್ ತನ್ನ ರಕ್ಷಣೆಗೆಂದು ನಿಯೋಜಿತರಾದವರು.

ಕೆಲೆಸ ತಮ್ಮಿಂದ ಆಗಲಿಲ್ಲ ಎಂದು ಅವರು ವ್ಯಥಿತರಾಗಿರಬಹುದು. ಸಮಾಧಾನ ಹೇಳಬೇಕು. ಪಕ್ಕದ ಕೊಠಡಿಯಾಗಿದ್ದರೆ ಮಾತು ಕೇಳಿಸುತ್ತಿತ್ತೇನೋ. ಹೆಸರು ಹಿಡಿದು ಕೂಗಲೆ ಗಟ್ಟಿಯಾಗಿ? "ಔಟ! ಬೆಕ್!" ಗುಂಯ್ ಗುಡುವ ಪ್ರತಿಧ್ವನಿ. ಕೇಳಿಸಿದರೆ ಅವರಿಂದ ಮಾರ್ನುಡಿ ಬರಬೇಕು. ಊಹೂಂ. ಇದು ನೆಲಮಾಳಿಗೆ ಕೊಠಡಿ. ಸದ್ದು ಹೊರಹೋಗುವುದಿಲ್ಲ. ಅಲ್ಲಿಂದ ಸದ್ದು ಒಳ ಬರುವುದಿಲ್ಲ.

   *          *          *            *
   ಔಟ ಬೆಕ್ ರನ್ನು ಪೆಟಾರಿಯಾಕಾರದ ವಿಶಾಲ ಕಟ್ಟಡದೊಳಕ್ಕೆ ತಳ್ಳಿದ್ದರು.

ವಿಮುಕ್ತರಾದ ನೂರ ಎಂಬತ್ತೆಂಟು ಜನ ಅಲ್ಲಿ ಇದ್ದವರು, ಒಟ್ಟೆಗೆ. ಛಾವಣಿಯೂ ಕಲ್ಲಿನದೇ. ಅದರಲ್ಲಿ ಅನೇಕ ಸಣ್ಣ ರಂಧ್ರಗಳಿದ್ದುವು. ಚಂದ್ರನ ಮಬ್ಬು ಬೆಳಕು ಆ ತೂತುಗಳ ಎಡೆಯಿಂದ ಒಳಕ್ಕೆ ಇಳಿದಿತ್ತು. ಜಾಗದ ಒಂದು ಬದಿಯುದ್ದಕ್ಕೂ ಅರ್ಧ ಮೊಳ ಎತ್ತರದ ಮರಳ ದಿನ್ನೆ, ಅದರ ಉಪಯೋಗ ಏನೆಂಬುದನ್ನು ಅಲ್ಲಿಂದ ಬರುತ್ತಿದ್ದ ದುರ್ಗಂಧ ಸಾರುತ್ತಿತ್ತು. ಮೂಲೆಯಲ್ಲಿ ನೆಲವನ್ನು ತೋಡಿ ಮಾಡಿದ್ದೊಂದು ನೀರಿನ ತೊಟ್ಟ.

  ತನ್ನ ಯಾತನೆಯ ನಡುವೆಯೂ ಔಟ ಇದನ್ನು ಗಮನಿಸಿದ. ಆದರೆ 

ಬೆಕ್ ಗಟ್ಟಿಯಾಗಿ ರೋದಿಸಿದ. ತಾನು ಕಾವಲು ಕುಳಿತಿದ್ದೂ ಹೀಗಾಯಿತಲ್ಲ ಎಂದು ಅಳಲು ಐವತ್ತರ ಮುಖ್ಯಸ್ಥನಾದೆ; ಖ್ನೆಮ್ ದಳಪತಿಯ ವಿಶ್ವಾಸಕ್ಕೆ ಪಾತ್ರನಾದೆ; ನಾಯಕರ, ಅಂಗರಕ್ಷಣೆಯ ಹಿರಿಯ ಹೊಣೆಯಲ್ಲಿ ಪಾಲುಗಾರ ನಾದೆ....ಆದರೆ ಏನಾಗಿ ಹೋಯಿತು?....

  ಔಟ ಗೋಡೆಗಳನ್ನು ತಡಕಾಡಿದ. ತಪ್ಪಿಸಿಕೊಳ್ಳುವ ಸಾಧ್ಯತೆ?

ಬಾಗಿಲಿನ ಒಳಮೈಯನ್ನು ಮುಟ್ಟಿ ನೋಡಿದ. ಎದೆ ಮಟ್ಟದಲ್ಲಿ ಚೌಕಾಕಾರ ದಲ್ಲಿ ಸಂದಿಕೂಡಿಸಿದ್ದರು. ಮುಷ್ಟಿ ತುರುಕಲು ಸಾಲುವಷ್ಟು ವಿಸ್ತಾರ. ಹೊರಗಿ