ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮ್ರುತ್ಯುಂಜಯ ೪೭೫
ನಿಂದ ತೆರೆಯುವ ವ್ಯವಸ್ಥೆ. ಬಾಗಿಲಿಗೆ ಕಿವಿಗೊಟ್ಟು ಆಲಿಸಿದ. ಅಸ್ವಷ್ಟ ಸ್ವರ ಗಳು. ಹೊರಗೆ ಜನರಿದ್ದಾರೆ ಅನಿಸಿತು. ಕಾವಲುಭಟರಿರಬಹುದು, ಅರ ಮನೆಯ ಸೇವಕರಿರಬಹುದು....ನಾಯಕರನ್ನು ಸಮೀಪದಲ್ಲಿಯೆ ಎಲ್ಲೋ ಇಟ್ಟ ದ್ದಾರೆ. ಎಲ್ಲಿ ? ನೆಲಮಾಳಿಗೆಯಲ್ಲೆ? ಸೆಡ್ ಉತ್ಸವ ಮುಗಿಸಿ ಇನ್ನು ತಮ್ಮೂರಿಗೆ ಪಯಣ ಎನ್ನುವಾಗಲೇ ಹೀಗಾಯಿತು. ಪೆರೋಗೆ ಯೌವನ ಪಾಪ್ತವಾಗುವ ಹರ್ಷದ ನೆನಪಿಗೆ ಗೋರಿದರೋಡೆಗಾರನನ್ನೂ ಕಳ್ಳಕಾಕರನ್ನೂ ಕೊಲೆಪಾತಕಿಗಳನ್ನೂ ಕಾರಾಗೃಹದಿಂದ ಹೊರಗೆ ಬಿಟ್ಟರು. ಅತಿಥಿಗಳಾದ ನಮ್ಮನ್ನು ಒಳಕ್ಕೆ ನೂಕಿದರು.
ಔಟ ಕಟಕಟನೆ ಹಲ್ಲು ಕಡಿದ. ಒಳಗಿನಿಂದ ಒಂದಿಷ್ಟು ನೋವನ್ನು
ನರಳಾಟವಾಗಿ ಮಾರ್ಪಡಿಸಿ ಹೊರಕ್ಕೆ ಹರಿಸಿದ.
ಬೆಕ್ ತನ್ನ ಅಳು ನಿಲ್ಲಿಸಿ ಅಂದ: "ಹೀಗಾಯ್ತಲ್ಲಣ್ಣ....!” ಔಟ ಉತ್ತರಿಸಿದ: "ಧೈರ್ಯಗೆಡಬಾರ್ದು” ಔಟ ಹಾಗೆ ಹೇಳಿದನೆಂದು ಬೆಕ್ ಗೆಷ್ಟೋ ಸಮಾಧಾನ. "ಬಟಾ ಅಣ್ಣ ಬರ್ತಾರೆ, ಅಲ್ಲವಾ?” "ಹೂಂ. ಹೂಂ." “ನಾವು ಇಲ್ಲಿರೋದು ಹ್ಯಾಗೆ ಗೊತ್ತಾಗ್ತದೆ?” "ಒಳ್ಳೆಯವರು ಯಾರಾದರೂ ಹೇಳಾರು,” ಬೆಕ್ ಯೋಚಿಸಿದ; “ಒಳ್ಳೆಯವರು ಯಾರು? ಮೆನ್ನ ಒಬ್ಬನೇ.... ಆದರೆ ತಾವು ಇಲ್ಲಿರುವುದು ಮೆನ್ನನಿಗೆ ತಿಳಿಯುವ ಬಗೆ? ಆ ಸಿಕ್ಕುಗಂಟನ್ನು ಬಿಡಿಸಲಾಗದೆ ಬೆಕ್ ಸಪ್ಪೆಮೋರೆ ಹಾಕಿಕೊಂಡು ಕುಳಿತ. * * * * ಸೂರ್ಯೋದಯವಿನ್ನೂ ದೂರವಿದ್ದಾಗಲೇ ಮಹಾಪ್ರಭುವನ್ನೂ ಮಹಾ ರಾಣಿಯನ್ನೂ ಎಬ್ಬಿಸಿದರು. ನೆಫರ್ ಟೀಮ್ ಅದೆಷ್ಟು ಸಮಯದಿಂದ ಇದಿರು
ನೋಡಿದ್ದಳು ಆ ದಿನವನ್ನು! ಸಾಮಾನ್ಯವಾಗಿ ಪೆರೋ ಬೆಳಿಗ್ಗೆ ಅರಮನೆಯ ದೇವಮಂದಿರಕ್ಕೆ ಹೋದ ಬಳಿಕ ಹಾಸಿಗೆ ಬಿಟೇಳುತ್ತಿದ್ದವಳು ಇಂದು ನಿದ್ರಾ