ಪುಟ:Mrutyunjaya.pdf/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯು೦ಜಯ

ಹಿಂಬಾಲಿಸಿ ಕೇಶಕವಚ, ಕಿರೀಟಗಳಿದ್ದ ಪೆಟಾರಿಯನ್ನು ಒಯ್ಯುವ ಪಲ್ಲಕಿ, ಹಿಂದಿನ ಪಲ್ಲಕಿಯಲ್ಲಿ ರಾಜಕುಮಾರ, ಅದರ ಹಿಂದಿನದರಲ್ಲಿ ರಾಜಕುವರಿಯರು, ಕಾಲ್ನಡಿಗೆಯ ಸೇವಕರು, ಪಂಜುಗಳು. ತೆರೆದ ಮಹಾದ್ವಾರವನ್ನು ಹಾದು ಮೆರವಣಿಗೆ ಬೀದಿಗಿಳಿಯಿತು. ನಗರದ ಹೊರಕ್ಕೆ ಮಹಾಮ೦ದಿರದತ್ತ ಸಾಗಿತು.

    ಕರಗತೊಡಗಿದ್ದ ಇರುಳು. ಅದು ಪೂರ್ತಿಯಾಗಿ ಇಲ್ಲವಾಗುವುದಕ್ಕೆ ಮುನ್ನ ದೀವಟಿಗೆಗಳ ಪ್ರಭೆಯಲ್ಲಿ ಮೆರವಣಿಗೆ. ಉದ್ದಕ್ಕೂ ನೆಳಲು-ಬೆಳಕು ಆಟ. ಹೊಳೆಯುವ ಈಟಿಮೊನೆ, ಪಲ್ಲಕಿಗಳ ಕೆತ್ತನೆ ಕೆಲಸ. ಮೆರವಣಿಗೆ ಯಲ್ಲಿದ್ದವರ ಹಾರೈಕೆ: “ಓ ಪೆರೋ! ಓ ಪೆರೋ!" "ದೀರ್ಘಾಯು ಪೆರೋ! ದೀರ್ಘಾಯ ಪೆರೋ!"ಬೀದಿಯ ಇಕ್ಕೆಲಗಳಲ್ಲಿ ಜನಸಮ್ಮರ್ದ.ನಗರವಾಸಿ ಗಳು, ಹೊರಗಿನಿ೦ದ ಬ೦ದವರು ಗಂಡಸರು-ಹೆಂಗಸರು...ಮಹಾಪ್ರಭುವಿನ ಮಹಾರಾಣಿಯ ಪಲ್ಲಕಿಗಳು ಸವಿಪಿಸಿದಾಗ ಬಾಗಿ ನಮಿಸಿದರು. ಮೆರವಣಿಗೆ ಯಿಂದ ಕೇಳಿಸಿದ ಘೋಷದೊಡನೆ ತಮ್ಮ ಧ್ವನಿಯನ್ನೂ ಕೂಡಿಸಿದರು.
    ಹಗಲಾದರೆ ಚಲಿಸದ ಮುಖ ಮುದ್ರೆ ಇರಬೇಕು ನಸುಗತ್ತಲೆಯಲ್ಲಿ ಅತ್ತಿತ್ತ ನೋಡುವ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಪೆರೋಗೆ. ಇವರಲ್ಲವೆ ತನ್ನ ಪ್ರಜೆಗಳು ? ಅಂತೂ ಅನಗತ್ಯ ಘರ್ಷಣೆಯನ್ನು ತಪ್ಪಿಸಿದ ಹಾಗಾಯಿತು. ಇದರಲ್ಲಿ ಆಮೆರಬ್ ನ ಕೌಶಲ ಹೆಚ್ಚಿನದೊ? ಹೆಖ್ವೆಟ್ ನದೊ? ಸೆಡ್ ಉತ್ಸವ ನಡೆಯುತ್ತಿರುವುದು ತನ್ನ ವಿಜಯ. ನೀರಾನೆ ಪ್ರಾಂತದ ಪ್ರಶ್ನೆ ಬಗೆ ಹರಿಯುತ್ತಿರುವುದು ತನ್ನ ಅಬಾಧಿತ ಪ್ರಾ೦ತದ ಪ್ರಶ್ನೆ ಬಗೆ ಹರಿಯುತ್ತಿರುವುದು ತನ್ನ ಅಬಾಧಿತ ಪ್ರಾಬಲ್ಯಕ್ಕೆ ನಿದರ್ಶನ. ಸೆಡ್ ಉತ್ಸವಕ್ಕೆ ಸ೦ಬ೦ಧಿಸಿ ಮಹಾ ಮ೦ದಿರಕ್ಕೆ ತಾನು ಕಾಣಿಕೆಗಳನ್ನು ನೀಡಬೇಕು. ಎಂಥ ಕಾಣಿಕೆ, ಎಷ್ಟು ಮೌಲ್ಯದ್ದು ಎಂಬುದನ್ನು ಆಮೆರಬ್ ನೊಡನೆ ತಾನು ಚರ್ಚಿಸಬೇಕಾಗಿತ್ತು....
    ತಲೆಯ ಮೆಲೆ ಕೇಶರಾಶಿ ಇಲ್ಲದೆ, ಕಿರೀಟವಿಲ್ಲದೆ ಮಹಾರಾಣಿ ಹೊರಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಓರಣವಾಗಿ ಕಟ್ಟಿದ್ದ ಶಿರೋ ವಸ್ತ್ರವಿದ್ದರೂ ತಾನು ನಗ್ನಳಾಗಿಯೇ ಪಲ್ಲಕಿಯಲ್ಲಿ ಕಟ್ಟಿದ್ದ ಶಿರೋ ವಸ್ತ್ರವಿದ್ದರು ಭಾವನೆ ನೆಫರ ಟೀಮಗೆ...ಈ ಪ್ರಜೆಗಳು ತನ್ನನ್ನು ನೋಡಿ ಹರ್ಷಪುಲಕಿತ ರಾಗುತ್ತಿದ್ದಾರೆ. ಅರಸನನ್ನು ಕಂಡು ಭಯಪಡಬಹುದು. ಆದರೆ ಅರಸಿಯ ವಿಷಯದ ಭಯ, ಭಕ್ತಿ, ಪ್ರೇಮ-ಎಲ್ಲವೂ. ಈ ಸೆಡ್ ಉತ್ಸವ ನಡೆ