ಪುಟ:Mrutyunjaya.pdf/೪೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯು೦ಜಯ

ಯುತ್ತಿರುವುದು ತನ್ನಿಂದಾಗಿಯೇ ಅಲ್ಲವೆ? ನವಯೌವನ ದೊರಕಿಸುವ ಈ ನಾಟಕ....ಪೆರೋ ಬಲಾಢ್ಯನೆಂದು ಜನರ ಮನಸ್ಸಿನ ಮೇಲೆ ಬಿಂಬಿಸುವುದ ಕ್ಕೋಕ್ಕರ ಅಲ್ಲವೆ ಇದು ? ಮಹಾ ಅರ್ಚಕ ತನ್ನ ಪರ ಎಂಬುದು ಸ್ಪಷ್ಟ. ತಾನು ಅವನ ಪೂರ್ಣ ವಿಶ್ವಾಸ, ಬೆ೦బల ಗಳಿಸಬೇಕು. ರಾಜಕುಮಾರ ಆದಷ್ಟು ಬೇಗನೆ ಪಟ್ಟವೇರುವುದು ಅಗತ್ಯ. ಮೆರವಣಿಗೆ ವೈಭವಪೂರ್ಣ ವಾಗುವುದು ಮಹಾಮ೦ದಿರದಿ೦ದ ಮರಳುವಾಗಲೇ. ಅತ್ಯಂತ ಎತ್ತರದ ಕೇಶಕವಚ. ಅದರ ಮೇಲೆ ಝಗರುಗಿಸುವ ಕಿರೀಟ. ಪ್ರಾ೦ತಪಾಲರೆಲ್ಲ ಈ ಮೆರವಣಿಗೆಯಲ್ಲಿ ನಡೆದು ಬರುವಂತೆ ಮಾಡಿದ್ದರೆ ಏನಾಗುತ್ತಿತ್ತು? ಸೆಡ್ ಉತ್ಸವದ ದಿನವನ್ನು ಇನ್ನೂ ಮೊದಲು ನಿರ್ಧರಿಸಿದ್ದರೆ ಪ್ರಾಂತಪಾಲರ ಪತ್ನಿ ಯರೂ ಬರುತ್ತಿದ್ದರು. ನೆಹನವೇಯ್ಟ್, ಅಮಾತ್ಯಪತ್ನಿ,ಮಹಾದ೦ಡ ನಾಯಕನ ಮಡದಿ ಇವರಿಷ್ಟೇ ಜನ ಇವತ್ತು. ಔತಣಕ್ಕೆ ಸರುಸದಸ್ಯರ ಹೆಂಗಸರನ್ನೂ ಕರೆಯಬೇಕು.

       ಏರು ಮಾರ್ಗ,ತಿರುವು,ಬಳಿಕ ಮಹಾಮ೦ದಿರ.
     అల్లిಯೂ ಜನ ಸ೦ದಣಿ. ಮ೦ದಿರದ ಒಳಕ್ಕೆ ಆ ದಿನ ಬರಲು ಜನ ಸಾಮಾನ್ಯರಿಗೆ ಅವಕಾಶವಿಲ್ಲ. ಕಟಕಟೆಯ ಹೊರಗೆ ನಿಂತು, ಎಷ್ಟು ಕಾಣಿಸಿತೋ ಅಷ್ಟರಿಂದಲೇ ಅವರು ತೃಪ್ತರಾಗಬೇಕು. ಜನರು ಶಿಸ್ತು ಪಾಲಿಸು ವ೦ತೆ ಮಾಡಲು ಅಲ್ಲಿ ನಿ೦ತಿತ್ತು ಯೋಧಬಲ.
       ಮಹಾಮಂದಿರದಿಂದ ತುಸು ದೂರದಲ್ಲಿ ಪಲ್ಲಕಿಯಿಂದಿಳಿದ ಪೆರೋನಿಗೆ ಜಗತ್ತು ಶ೦ತವಾಗಿ ಕ೦ಡಿತು. ನಿಶ್ಮಬ್ದವಾಗಿದ್ದ ಜನರು. ಸೂರ್ಯನ ಮೊದಲ ಕಿರಣಗಳು ಭೂಮಿಯನ್ನು ಮುದ್ದಿ ಡತೊಡಗಿದುವು. ಎಲ್ಲವನ್ನೂ ಆವರಿಸಿದ್ದ ತೆಳ್ಳಗಿನ ಅವಕುಂಠನವನ್ನು ಕಾಣದ ಕೈಗಳು ಸರಿಸಿದುವು. ಇರುಳಿನ ಸೆತ್'ಗೆ ಸೋಲು. ಮ೦ದಿರದ ಸ್ವರ್ಣಲೇಪಿತ ಗೋಪುರದ ನಸುಹಳದಿ  ಕಣ್ಣಿಗೆ ಹಬ್ಬವಾಯಿತು.
      ಪವಿತ್ರ ಕೊಳದ ಪಕ್ಕದ ದಿಬ್ಬದ ಬುಡದಲ್ಲಿ ಚಿರತೆಯ ಚರ್ಮದಿಂದ ಮೈ ಮುಚ್ಚಿಕೊ೦ಡಿದ್ದ ಮಹಾ ಅರ್ಚಕನೂ ಪರಿವಾರವೂ ಪೂರ್ವ ದಿಕ್ಕಿನತ್ತ ನೋಡುತ್ತ ನಿ೦ತಿದ್ದರು. ಮ೦ದಿರದ ಮಹಾದ್ವಾರದ ಹೊರಗೆ ಐಗುಪ್ತದ ಪ್ರಾ೦ತಪಾಲರೇ ಮತ್ತಿತರ ಪ್ರತಿಷ್ಠಿತರ ಅಸ್ಪಷ್ಟ ಆಕೃತಿಗಳು ಕಾಣಿಸಿದುವು.