ಪುಟ:Mrutyunjaya.pdf/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮೮ ಮೃತ್ಯುಂಜಯ "ಓ ಪೆರೋ! ಓ ಪೆರೋ!" ಬಳಿಕ ಪ್ರಸಾದ ವಿತರಣೆ. ಮಹಾ ಅರ್ಚಕನ ಭವನದಲ್ಲಿ ರಾಜ ಪರಿವಾರ ವಿಶ್ರಾಂತಿಗಾಗಿ ತಂಗಿತು, ನಿಂತಷ್ಟು ಹೊತ್ತೂ ಹೇಗೋ ನಡೆದು ಹೋಗಿತ್ತು. ಆದರೆ ಕುಳಿತೊಡನೆ ವಿಪರೀತ ಬಳಲಿಕೆ ಅರಸನನ್ನು ಕಾಡಿತು. ಲಾಂಛನಗಳನ್ನು ಆತ ಅಂಗರಕ್ಷಕರ ಕೈಗಿತ್ತು, ಶುಭ್ರವಸನದಿಂದ ಆಚ್ಛಾದಿತವಾದ ಪೀಠದ ಮೇಲೆ ಮೆತ್ತಗೆ ಒರಗಿ ಕುಳಿತ. ಬಂಗಾರದ ಬಟ್ಟಲಲ್ಲಿ ಅಂಜೂರದ ಹಣ್ಣುಗಳೂ ಸ್ವರ್ಣ ಪಾತ್ರೆಯಲ್ಲಿ ದ್ರಾಕ್ಷಾ ಸುರೆಯೂ ಬಂದುವು. ಮಹಾ ಅರ್ಚಕ ಗರ್ಭಗುಡಿಯಲ್ಲೇ ನಿಂತುದರಿಂದ ,ರಾಜ ಪರಿವಾರದೊಡನೆ ಒಳಗೆ ಬಂದವನು ಅಮಾತ್ಯನೊಬ್ಬನೇ. ಉಪಹಾರವಿಲ್ಲದೆ ಹಸಿದಿದ್ದ ಹೊಟ್ಟೆಗೆ ತುಸು ಪ್ರಸಾದ ಬಿದ್ದ ಮೇಲೆ ಪೆರೋಗ ಸ್ವಲ್ಪ ಹಾಯೆನಿಸಿತು ಮಹಾರಾಣಿ ಮತ್ತಿತರರಿಗೂ ಅದೇ ಅನುಭವ. ಪೆರೋ ಅಮಾತ್ಯನನ್ನು ಕೇಳದ: “ಎಲ್ಲಿ ದಂಡನಾಯಕ?” ತಕ್ಷಣವೇ ಏನಾದರೂ ಉತ್ತರವೀಯಬೇಕು. ಅಮಾತ್ಯನೆಂದ : “ನೂಕುನುಗ್ಗಲಾಗದಂತೆ ಶಿಸ್ತು ಪಾಲನೆಯ ಉಸ್ತುವಾರಿ ನೋಡ್ತಿದ್ದಾರೆ. ಮಹಾಪ್ರಭು. " ವಾಸ್ತವವಾಗಿ ಅದೇ ವೇಳೆ ಗರ್ಭಗುಡಿಯ ಹಿಂದಲ ಕೊಠಡಿಯಲ್ಲಿ ಮಹಾ ಅರ್ಚಕನ ಸಮ್ಮುಖದಲ್ಲಿ ಅಮ್ಮೆನೆಮೊಪೆಟ್ ನಿಂತಿದ್ದ. “ಸೇನೆಯ ಠಾಣ್ಯಕ್ಕೆ ಯಾವಾಗ ಪಯಣ?" ಮಹಾ ಅರ್ಚಕನ ಪ್ರಶ್ನೆಗೆ ದಂಡನಾಯಕ ಉತ್ತರವಿತ್ತ : “ಒಂದು ವಾರ ಇದು ಹೋಗ್ತೇನೆ.” "ಒಳ್ಳೇದು. ನೀವು ಹೊರಡುವ ವೇಳೆಗೆ ನಾವು ನೀರಾನೆ ಪ್ರಾಂತದಲ್ಲಿರ್ತೇವೆ." "ಸಿದ್ದತೆಗೆ ಅನುಜ್ಱೆ ಆಗಿದೆಯಂತೆ ಬಕಿಲ ತಿಳಿಸಿದ . ನನ್ನ ಅಭಿಪ್ರಾಯದಲ್ಲಿ----" "ಏನದು? ಹೇಳು."