ಪುಟ:Mrutyunjaya.pdf/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೮೯ "ಮಹಾ ಅರ್ಚಕರು ಹೀಗೆ ಶ್ರಮ ಪಡೋದು ಅನಗತ್ಯ. ನಾನಿಲ್ಲವೆ?... ” " ಅಮೆನೆಮೊಪೆಟ್, ಜನ ಸೆತ್ ಆರಾಧಕರಾಗಿದ್ದಾರೆ. ಬಾಹುಬಲ ಶಸ್ತ್ರಬಲ, ಮಾತ್ರ ಸಾಲದು. ಅವರಲ್ಲಿ ಧರ್ಮಭಯ ಹುಟ್ಟಿಸ್ಬೇಕು. ದೇವರನ್ನೂ ಕರೆದುಕೊಂಡು ನಾನು ಹೋಗ್ಬೇಕು.” “ಅರ್ಥವಾಯ್ತು ಸ್ವಾಮಿ.” “ರಾಜಕುಮಾರನ ಶಸ್ತ್ರಶಿಕ್ಷಣಕ್ಕೆ ಮಹಾರಾಣಿ ನಿನ್ನನ್ನು ನೇಮಿ ಸ್ಟೇಕಾಂತಿದಾರೆ. ಆಗಬಹುದು ಅಂದಿದ್ದೇನೆ." “ಕೃತಜ್ಞ .' “ಇನ್ನು ಹೋಗು. ದಂಡನಾಯಕ ಕಾಣಿಸ್ತಿಲ್ಲ ಅಂತ ಅಮಾತ್ಯ ಹುಡುಕಿಕೊಂಡು ಬರಬಹುದು." "ಹ್ಡು ” ಎಂದು ಅಮೆನೆಮೊಪೆಟ್, ಕಟಿಯ ಕಠಾರಿಯನ್ನು ಹಿಂದಕ್ಕೆ ತಳ್ಳಿ ,ಬಾಗಿ, ಮಹಾ ಅರ್ಚಕನ ಅಧಿಕಾರ ದಂಡವನ್ನು ಚುಂಬಿಸಿ, ನೆಟ್ಟಿಗೆ ನಿಂತು ಅಲ್ಲಿಂದ ಹೊರಬಿದ್ದ...... ....ಅರಮನೆಗೆ ಮೆರವಣಿಗೆ ಮರಳಬೇಕು. ಅಲ್ಪ ವಿಶಾಂತಿ ಮುಗಿದು ಪೆರೋ ಪರಿವಾರ ಮೆರವಣಿಗೆಗೆ ಸಿದ್ದ ---ಎಂದು ಸೂಚಿಸಲು ಹೊರ ಬಂದ. ಪ್ರಾಂತಪಾಲರು ಮತ್ತಿತರ ಪ್ರತಿಷ್ಕ್ರಿತರು ಮಹಾ ಅರ್ಚಕ ಭವನದ ಛಾವಣಿಯ ನೆರಳಲ್ಲಿ ನಿಂತಿದ್ದರು. ಅವರಾಚೆಗೆ ಬಿಸಿಲಿನಲ್ಲಿ ತನ್ನ ನಾಲ್ವರು ಐವತ್ತರ ಶ್ರೇಷ್ಟರೊಡನೆ ಅಮೆನೆಮೊಪೆಟ್ ಮಾತನಾಡುತ್ತಿ ದ್ದ, ಆಮೆರಬ್ ಆತನ ಬಳಿ ಸಾರಿ,"ಜನತೆಗೆ ಪ್ರಸಾದವಿತರಣೆಯಾದಂತಿದೆ (ಹೂ ಹಂಚಿಕೆ) ಇನ್ನು ಹೊರಡೋಣ,” ಎಂದ. ಅಮೆನೆಮೊಪೆಟ್ ಸನ್ನೆ ಮಾಡಿದೊಡನೆ ಐವತ್ತರ ಶ್ರೇಷ್ಟ್ಯರು ಯೋಧರೆಡೆಗೂ ಅರಮನೆಯ ಸೇವಕರೆಡೆಗೂ ಸಾಗಿದರು. ಮಹಾ ಅರ್ಚಕನ ಭವನದಿಂದ ಪೆರೋನನ್ನು ಹಿಂಬಾಲಿಸಿ ಹೊರಕ್ಕೆ ಕಾಲಿರಿಸಿದ ಮಹಾರಾಣಿಯನ್ನು ಗೇಬು ಪತ್ನಿ ನೆಹನವೇಯ್ಟ್ ಸವಿಾಪಿಸಿದಳು. ಪರಮಾನಂದದ ಆಗಿನ ಸ್ಥಿತಿಯಲ್ಲಿ ಮಹಾರಾಣಿ ಮೆದುವಾದಳು. “ಮಕ್ಕಳು ಬರಲಿಲ್ಲವಾ ನೆಹನ ?” ನೆಹನವೇಯ್ಟ್ ಅಂದಳು :