ಪುಟ:Mrutyunjaya.pdf/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ದಾಗಲಿ."

    "ಸೆಡ್ ಉತ್ಸವ ಆದ ಮೇಲೆ ಮಹಾಪ್ರಭು ಯುವಕರಂತೆ ಕಾಣಿಸ್ತಿ 

ದ್ವಾರೆ ಅಲ್ಲವೆ?”

      ".........."
      "ಸುಮ್ಮನಿದ್ಡೀಯಲ್ಲ. ಯುವಕರಂತೆ ಯುವಕರು ! ಬಳಲಿದ್ದಾರೆ.....!"
      ಅಷ್ಟು ಹೇಳಿ ಮಹಾರಾಣಿ ಸಣ್ಣನೆ ನಕ್ಕಳು. ನೆಹನವೇಯ್ಟಳೂ 

ಮುಗುಳುನಗೆ ಸೂಸಿದಳು.

      ಮೆರವಣಿಗೆ ಬಂದದ್ಡು ತೊರೆಯಾಗಿ, ಮರಳಿದ್ಡು ಭೋರ್ಗರೆಯುವ 

ನದಿಯಾಗಿ.

          *   *     *    *     *     *
     ಬಳಸಿ ಬಳಸಿ ಗಾಳಿ ನುಸುಳಲು ಎಲ್ಲಿಯೋ ರಂಧ್ರವಿತ್ತು. ಸೂರ್ಯರಶ್ಮಿ

ಅದರಲ್ಲೆಲ್ಲೋ ಸಿಲುಕಿಕೊಂಡು, ಮುರಿದು, ಧೂಳಿಯಾಗಿ, ಗಾಳಿಯೊಡನೆ ಬೆರೆತು ನೆಲಮಾಳಿಗೆಯಲ್ಲಿ ಪಸರುವ ನಸುಬೆಳಕಾಯಿತು.

    ಮೆನೆಪಟಾ ಅಂದುಕೊಂಡ: ಹಗಲು ; ಸಂದೇಹವಿಲ್ಲ.......ಇದು 

ಉತ್ಸವದ ಹಗಲು. ಸೂರ್ಯಾಸ್ತವಾಗಿ ಮತ್ತೆ ಬೆಳಕು ಹರಿಯುವವರೆಗೂ ಸದ್ದು ಗದ್ದಲ ಹೊರಗೆ. ತನ್ನ ನೆನಪಾದರೂ ಅವರಿಗೆ ಆಗುವುದೊ ಇಲ್ಲವೊ? ಬಟಾ ಈಗ ಬಂದರೆ ಅವನನ್ನೂ ಹಿಡಿಯಬಹುದು : ಅವನ ಜತೆ ಇರುವವರನ್ನೂ ಬಂಧಿಸಿ ಸೆರೆಮನೆಗೆ ತಳ್ಳಬಹುದು. ಜತನದಿಂದಿರಬೇಕು,_ಬಲೆಗೆ ಬೀಳಬಾರದು_ ಎಂದು ಅವರಿಗೆ ತಿಳಿಸುವುದು ಹೇಗೆ ? ಮೆನ್ನ-ಮೆನ್ನ ಎಲ್ಲಿರುವನೊ ? ಹಿಂದಿನ ದಿನದಿಂದ ಬಟಾನಿಗಾಗಿ ದೋಣಿಕಟ್ಟೆಯಲ್ಲಿ ಅವನು ಕಾಯುತ್ತಿದ್ದ. ಅದು ಅಪಾಯದ ಸ್ಥಳ. ಅರಮನೆಯ ಗೂಢಚಾರರೂ ಅರ್ಚಕರ ಬೇಹಿನ ವರೂ ಅಲ್ಲಿರುತ್ತಾರೆ. ಮೆನ್ನ ಬುದ್ಧಿವಂತ. ಖಂಡಿತ ಅಲ್ಲಿ ನಿಲ್ಲಲಾರ. ದಂಡೆಯ ಉದ್ದಕ್ಕೂ ಮೇಲಕ್ಕೆ ಹೋಗಿರಬಹುದು.

      ಅವನಿಂದಲೋ ಬಟಾನಿಂದಲೋ ಸಂದೇಶ ಬರಬಹುದೆ? 
      ತಪ್ಪಗ್ರಹಿಕೆಯಿಂದ ಹೀಗೆ ಆಗಿರುವ ಸಂಭವ ? ಅಮಾತ್ಯನ ಅರಿವಿಲ್ಲ 

ದಯೇ ಈ ಬಂಧನ ನಡೆದಿರಬಹುದೆ ? ತಾನು ಅಮಾತ್ಯನನ್ನು ಕಾಣಬೇಕು. ಇದೇನು_ಎಂದು ಕೇಳಬೇಕು. ಗೇಬು ಮತ್ತಿತರರ ಕೈವಾಡವೇನಾದರೂ