ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ ಇದರಲ್ಲಿ ಇದ್ದರೆ? ನೀರಾನೆ ಪ್ರಾಂತದ ಭೂಮಾಲಿಕರು ಏನಾದರೂ ಹೂಟ ಹೂಡಿರಬಹುದೆ? ಆದರೆ ಅದಕ್ಕೆಲ್ಲ ಸೆನೆಬ್ ಸಹಕಾರ ಬೇಕು; ಅಮಾತ್ಯನ ಒಪ್ಪಿಗೆ ಬೇಕು.
ಅಮ್ಮನ್, ಓ ಅಮನ್......ನನ್ನ ಪಾರ್ಥನೆಗಳೆಲ್ಲ ವ್ಯರ್ಥವಾದುವಲ್ಲ......
ಕಿರ್ ಸದ್ದು ಬಾಗಿಲಲ್ಲಿ. ಅಂಗೈ ಅಗಲದ ಕಿಂಡಿ ತೆರೆದುಕೊಂಡು, ಒಂದು
ಹಿಡಿ ಬೆಳಕು ಒಳ ಬಂತು. ಜತೆಯಲ್ಲಿ ಸ್ತ್ರೀಯ ಇಳಿದನಿ :
"ಅಣ್ಣ ! ಅಣ್ಣ !” ಧ್ವನಿಯಲ್ಲಿ ಆತುರ. ಕಿರ್ ಸಪ್ಪಳ ಕೇಳಿಸಿದಾಗಲೇಔಟ, ಬೆಕ್ ಇಬ್ಬರೂ ಏಕಕಾಲದಲ್ಲಿ ಅತ್ತ
ದೃಷ್ಟಿ ಹರಿಸಿದ್ದರು. “ ಅಣ್ಣ !” ಎಂಬ ಕರೆ ಬಂದಾಗ, ಏನನ್ನೋ ಗುರುತಿಸಿ ದವನಂತೆ ಬೆಕ್ ತಟ್ಟಿನೆ ಎದು ಬಾಗಿಲಿನತ್ತ ಧಾವಿಸಿ ಬಗ್ಗಿ, ಕಿಂಡಿಯಿಂದ ಹೊರನೋಡಿದ. ಮುಖ ಮಾತ್ರ ಕಾಣಿಸಿತು. ಅವಳೇನೇ. ಬೆಕ್ ಔಟನನ್ನೂ ಬಳಿಗೆ ಕರೆದ.
ಹೊರಗಿನಿಂದ ಸ್ವರ ಕೇಳಿಸಿತು: "ನಾನು ಶೀಬಾ. ಕಸಾಯಿ ಮನೆಯವಳು."
ಮಗು ಚೆನಾಗಿದೆಯಾ ? ಬಾತುಕೋಳಿ ಹೊರಗೆ ದಾಟಿಸಿ ಇನೇನಿಗೆ ಮೂರ್ತಿ ಕೊಟ್ಟೆಯಾ ? ಗಂಡ ಊರಿಗೆ ಬಂದನಾ?..ಇನ್ನೂ ಹೀಗೆಯೇ ಕೆಲವು ಪ್ರಶ್ನೆಗಳನ್ನು ಕೇಳಬೇಕೆನಿಸಿತು ಬೆಕ್ಗೆ. ಆದರೆ ಇರುವಿಕೆಯ ಕಠೋರತೆ ಯಿಂದ ಗಂಟಲು ಒತ್ತರಿಸಿತು.
ಆಕೆಯೇ ಮತ್ತೆ ಕೇಳಿದಳು : "ಅಣ್ಣ ಗುರುತು ಸಿಗ್ತಾ? (ಕಂಕುಳಲ್ಲಿದ್ದ ಮಗುವನ್ನು ಎತ್ತಿ ಹಿಡಿದು)
ಇದು ಅದೇ ಮಗ."
"ಹೂಂ. ಹೂಂ." ಅವಳಿಗೆ ಸಂತಸ. ಔಟ ಕೇಳಿದ: