ಪುಟ:Mrutyunjaya.pdf/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ನಾನು ಅಲ್ಲಿ ನಿಂತು, ಅವರನ್ನು ಇಲ್ಲಿಗೆ ಕಳಿಸ್ತೇನೆ. ಮಂದಿರದಿಂದ ಪ್ರಸಾದ ತಂದಿದ್ದೇನೆ ಅಂತ ಮೆನ್ನಯ್ಯ ಹೇಳಿದರೆ ಕಾವಲಿನವರು ಬಿಡ್ತಾರೆ. ಮೆನ್ನಯ್ಯ ನಾಯಕರನ್ನು ಕಾಣಬಹುದು.”

     "ಆಗಲಿ, ಆಗಲಿ."
     "ಇಗೋ ಹೊರಟೆ."
     ಕಿಂಡಿ ಮುಚ್ಚಿಕೊಂಡಿತು.  ಬಿರುಡೆ ತಿರುಗಿಸಿದ ಸಪ್ಪಳ.
     ಬೆಕ್ನ ಮುಖ ಹಷದಿಂದ ಅರಳಿತು.
     "ಆಮನ್ ದೇವರೇ ಕಳಿಸಿದ್ದಾನೆ ಇವಳನ್ನು," ಎಂದು ಹೇಳಿ ಬಟಾ

ಮಂಡಿಯೂರಿ, “ಓ ಅಮನ್, ನಮ್ಮ ನಾಯಕರನ್ನು ಕಾಪಾಡು, ಅವರಿಗೆ ಯಾವ ಅಪಾಯವೂ ತಟ್ಟದಂತೆ ನೋಡಿಕೊ,” ಎಂದು ಒಡೆದ ಧ್ವನಿಯಲ್ಲಿ ಪ್ರಾರ್ಥಿಸಿದ. ಬೆಕ್ ತಾನೂ ಔಟನ ಪಕ್ಕದಲ್ಲಿ ಬಾಗಿದ, ಅದೇ ಭಂಗಿಯಲ್ಲಿ.

    ಶೀಬಾ ಮಗುವನ್ನೆತ್ತಿಕೊಂಡು ಅರಮನೆಯ ದೇವಮಂದಿರಕ್ಕೆ ಬಂದಳು. 

ಬಾಗಿಲು ಹಾಕಿತ್ತು. ಇನೇನಿಯ ಬದಲು ಪೂಜಾರಿಯಾಗಿ ಬಂದಿದ್ದವನಾಗಲೀ ಕಿರಿಯ ದೇವಸೇವಕರಾಗಲೀ ಕಾಣಿಸಲಿಲ್ಲ. ಚುಟುಕು ಪೂಜೆ ಮುಗಿಸಿ ಅವರೆಲ್ಲ ಮಹಾಮಂದಿರಕ್ಕೆ ಧಾವಿಸಿರಬೇಕು ಎಂದುಕೊಂಡಳು. ಮುಚ್ಚಿದ ಬಾಗಿಲಿನ ಮುಂದೆ ಶೀಬಾ ಮೊಣಕಾಲು ಊರಿ ಮನಸ್ಸಿನಲ್ಲೆ ' ಓ ದೇವಾ ನಾನು ತಪ್ಪು ಮಾಡ್ತಾ ಇಲ್ಲ. ನನಗೆ ಸಹಾಯ ಮಾಡು. ನನಗೆ ಸಹಾಯ ಮಾಡು' ಎಂದು ಪ್ರಾರ್ಥಿಸಿದಳು. ಅರ್ಥವಾಗದ ದುಗುಡ ಹೊರಬಿರಿದು ಕಣ್ಣೀ ರಾಯಿತು. 'ಬಡವರಿಗೆ ಸತ್ಯವಂತರಿಗೆ ನೀನು ಕಷ್ಟ ಕೊಡಬಾರದು' ಎಂದಳು. ನೆಲದ ಮೇಲೆ ಬಿಟ್ಟಿದ್ದ ಮಗುವಿನ ಹಣೆಯನ್ನು ಬಾಗಿಲ ಚೌಕಟ್ಟಿಗೆ ಮುಟ್ಟಿಸಿ ದಳು. ತಾಯಿಯ ರೋದನ ಇಷ್ಟವಾಗದೆ ಮಗು ತಾನೂ ಅಳತೊಡಗಿತು. ಅದನ್ನೆತ್ತಿಕೊಂಡು ಸಂತೈಸಿ, ಬಿರಬಿರನೆ ನಡೆದು ಕದವಿಕ್ಕಿದ್ದ ಅತಿಥಿಗೃಹವನ್ನು ಹಾದು, ಮಗ್ಗಲು ಬಾಗಿಲಿಗೆ ಶೀಬಾ ಬಂದಳು.

    ದ್ವಾರಪಾಲಕರು ತಡೆದರು.