ಪುಟ:Mrutyunjaya.pdf/೫೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

     "ನಿಲ್ಲು ! ಏನು ತಗೊಡು ಹೋಗ್ತಿದೀಯ ?" ಎಂದು ಒಬ್ಬ 

ಕೇಳಿದ.

      ಶೀಬಾ ನಸುನಕ್ಕಳು.
     “ಏನಿಲ್ಲಣ್ಣ. ಗಂಡ ಮೆರವಣಿಗೇಲಿ ಬರ್ತಾನೆ. ಮಗೂಗೆ ಅವನ 

ತಂದೇನ ತೋರ್ಸೋಣ ಅಂತ ಬಂದೆ."

     "ಕೆಲಸಗಳ್ಳಿ!”
     "ಎಲ್ಲ ಮುಗಿಸಿ ಬಲ್ತಿದೇನಣ್ಣ. ಕಸಾಯಿಮನೆ ಅಧಿಕಾರೀನೇ ಅಂದ್ರು_

ಹೋಗು ಅಂತ."

     "ಸರಿ, ಸರಿ. ನಮಗೇನು ? ಸರಿಯಾಗಿ ಕಾಣಿಸೋ ಜಾಗ ಹುಡುಕಿ 

ನಿತ್ಕೊ. ಮೆರವಣಿಗೆ ವಾಪಸಾದ್ಮೇಲೆ ಕದ ಮುಚ್ತೇವೆ. ಬೇಗನೆ ಬರದೇ ಇದ್ದರೆ ಔತಣ ಇಲ್ಲ."

      "ಬಂದ್ಬಿಡ್ತೇನೆ.”
     ಇನ್ನೊಬ್ಬ ದ್ವಾರಕಪಾಲಕ ನಕ್ಕು, "ನಡು ವಸ್ತ್ರದಲ್ಲಿ ಏನಾದರೂ 

ಕಟ್ಕೊಂಡಿದೀಯೇನೋ ನೊಡ್ಬೇಕು," ಎನ್ನುತ್ತ ಅವಳ ಸೊಂಟಕ್ಕೆ ಕೈ ಹಾಕಿದ.

     ಬೀದಿಯಲ್ಲಿ ಹೋಗುತ್ತಿದ್ದ ಜನ ಬಾಗಿಲಿನೆದುರು ನಿಂತರು.
     ತನ್ನ ಕೋಪವನ್ನು ಹತ್ತಿಕ್ಕಿ ಶೀಬಾ " ನಾಚ್ಕೆ ಇಲ್ಲಣ್ಣ ನಿನಗೆ," ಎಂದು 

ಹೇಳಿ, ಹೊಸ್ತಿಲು ದಾಟಿದಳು.

     ಮೊದಲು ದೋಣಿಕಟ್ಟಿಗೆ, ಅಲ್ಲಿಂದ ದಕ್ಷಿಣಾಭಿಮುಖವಾಗಿ ದಂಡೆ 

ಯುದ್ದಕ್ಕೂ. ವಿಪರೀತ ನೂಕುನುಗ್ಗಲು. ತಾವು ಪ್ರಯಾಣ ಬೆಳೆಸಿ ಬಂದ ಪೆಪೈರಸ್ ದೋಣಿಗಳನ್ನು ದಂಡೆಗೆಳೆದು ಮಗುಚಿ ಹಾಕಿ, ಮಹಾಮಂದಿರಕ್ಕೆ ಹೋಗುವ ಬೀದಿಗುಂಟ ಜನ ಧಾವಿಸುತ್ತಿದ್ದರು. ದೊಡ್ಡ ದೋಣಿ ಗಳನ್ನು ತುಸು ಮಾತ್ರವೇ ದಂಡೆಯ ಮೇಲಕ್ಕೆ ಎಳೆದು ನಿಲ್ಲಿಸಿದ್ದರು. ಅವರೆಲ್ಲಾ ಒಂದು ಕಡೆಗೆ. ಇದಿರು ದಿಕ್ಕಿಗೆ, ಅತ್ತಿತ್ತ ನೋಡುತ್ತ, ಹೋಗುತ್ತಿದ್ದವಳು ಶೀಬಾ ಒಬ್ಬಳೇ. ಮಗನೋ ಗಂಡನೋ ತಪ್ಪಿಸಿಕೊಂಡಿರ ಬೇಕು, ಹುಡುಕುತ್ತಿದ್ದಾಳೆ_ಎಂದು ಭಾವಿಸುವವರೇ ಎಲ್ಲರೂ. (ಕೆಲವರು