ಪುಟ:Mrutyunjaya.pdf/೫೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯೬ ಮೃತ್ಯುಂಜಯ

ಮಾತ್ರ ತರಾತುರಿಯ ನಡುವೆಯೂ ನಾಲಿಗೆಯಿಂದ ತಮ್ಮ ತುಟಿಗಳನ್ನು ಸವರಿದರು : “ಬರ್ರ್ತಿಯಾ?” ಎಂದರು.) ಶೀಬಾ ದಾರಿ ಮಾಡಿಕೊಂಡು ನೇರವಾಗಿ ನಡೆದಳು. ಜನದಟ್ಟಣೆ ಮುಗಿದೊಡನೆ ಮೆನ್ನ ಸಿಗಬಹುದು ಎಂಬ ತರ್ಕ ಅವಳದು. ತರ್ಕ ಸರಿಯಾಗಿತ್ತು. ದೂರದಲ್ಲಿ ಒಂದು ಅಂಜೂರ ವೃಕ್ಷದ ಕೆಳಗೆ ಒಬ್ಬ ಬಡಕಲು ಯುವಕ ಕುಳಿತಿದ್ದುದು ಕಾಣಿಸಿತು. ಆತ ತಲೆಗೆ ಒಂದು ಬಟ್ಟೆ ಸುತ್ತಿದ್ದ. (ಶೀಬಾ ಅಂದುಕೊಂಡಳು : 'ರಾತ್ರೆ ಹೊದ್ದುಕೊಂಡಿದ್ದ ಬಟ್ಟೆ ಇರಬೇಕು; ತನ್ನ ಗುರುತು ಸಿಗದಿರಲಿ ಅಂತ ತನ್ನ ಬೋಳು ತಲೆಯೋ ಕುಚ್ಚು ಕೂದಲೋ ಕಾಣಿಸದ ಹಾಗೆ ಸುತ್ತಿಕೊಂಡಿದ್ದಾನೆ.') ನಿಜವಾದ ಊಹೆಯೇ. ಯಾರೋ ಒಬ್ಬಳು ತಾನಿರುವ ಕಡೆಗೆ ಬರುತ್ತಿದ್ದುದನ್ನು ಕಂಡು ಮೆನ್ನ ಯೋಚನೆಗೀಡಾದ. ಈಕೆ ಅರಮನೆಯ ಪರಿಚಾರಿಕೆ ಎಂಬ ಶಂಕೆ ಹುಟ್ಟಿತು. ತಾಯಿ, ಮಗು ಹತ್ತಿರ ಬಂದಂತೆ ಶಂಕೆ ಬಲವಾಯಿತು. ('ಇವರನ್ನು ಈ ಮೊದಲು ನೋಡಿದ್ದೇನೆ.ನನ್ನನ್ನು ಹುಡುಕುತ್ತಿದಾಳೆ. ಇವಳನ್ನು ಬದಲಿ ಅರ್ಚಕ ಕಳಿಸಿರಬಹುದು.')ಮೆನ್ನ ಎದ್ದು ಪಶ್ಚಿಮಕ್ಕೆ ಮುಖ ಮಾಡಿ ಸರ ಸರನೆ ನಡೆಯತೊಡಗಿದ. ಈ ಅಯ್ಯ ಓಡುತ್ತಿರುವರಲ್ಲ, ಹ್ಯಾಗೆ ನಿಲ್ಲಿಸಲಿ ?-ಎಂದು ಶೀಬಾ ವಿವಂಚನೆಗೆ ಗುರಿಯಾದಳು. “ಅಯ್ಯ! ಅಯ್ಯ!” ಎಂದು ಗಟ್ಟಿಯಾಗಿ ಕೂಗುತ್ತ ತಾನೂ ಓಡತೊಡಗಿದಳು. ಮೆನ್ನನಿಗೆ ಅನಿಸಿತು : ರಾತ್ರೆ ತನ್ನ ಗಮನಕ್ಕೆ ಬರದೆಯೇ ಬಟಾ ದೋಣಿ ಕಟ್ಟೆ ತಲಪಿದ್ದರೆ ?ಆತನೇನಾದರೂ ಸಂದೇಶ ಕೊಟ್ಟ ಈಕೆಯನ್ನು ಕಳುಹಿದ್ದರೆ? ಆತ ಇದ್ದಕ್ಕಿದ್ದಂತೆ ಓಡುವುದನ್ನು ನಿಲ್ಲಿಸಿ, ಹೊರಳಿ, ವೇಗವಾಗಿ ನಡೆದು, ಅವಳನ್ನು ಇದಿರ್ಗೊಂಡ. ಮೆನ್ನ ಓಡಿ ಬಂದಾಗ ಶೀಬಾ ಎರಡು ಕ್ಷಣ ಏದುಸಿರು ಬಿಡುತ್ತ ನಿಂತಳು ನಿಧಾನವಾಗಿ ಅವಳೆಂದಳು :