ಪುಟ:Mrutyunjaya.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೪೦

ಮೃತ್ಯುಂಜಯ

ಸ್ವಲ್ಪ ಹೊತ್ತಾದ ಮೇಲೆ ದೋಣಿ ಹೊರಟಿತು. ಈಗ ಅನುಕೂಲ
ಪವನವಿಲ್ಲ. ಆದರೆ ಮರುಪ್ರಯಾಣ ನದಿ ಹರಿಯುವ ದಿಕ್ಕಿನಲ್ಲಿ. ಸುಲಭ.
ಅಬ್ಟುವಿನ ಧಕ್ಕೆಯಿಂದ ತೇಲಿಬರುತ್ತಿದ್ದ ಸದ್ದು ಕ್ರಮೇಣ ಕಡಿಮೆ
ಯಾಗಿ, ನಿಂತು ಹೋಯಿತು.
ಕುಳಿತ ಹಾಗೆಯೇ ತೂಕಡಿಸಿದರು ಹಲವರು.
ತಾಯಿಯ ತೊಡೆಯ ಮೇಲೆ ತಲೆ ಇರಿಸಿ ರಾಮೆರಿಪ್ಟಾ ಮುದುಡಿ
ಕೊಂಡು ನಿದ್ದೆ ಹೋದ. ನೆಫಿಸ್ ಗಂಡನ ಭುಜದಮೇಲೆ ತಲೆ ಇಟ್ಟು ಕುಳಿ
ತಲ್ಲೇ ನಿದ್ರಿಸಿದಳು.
ದೋಣಿಯ ಮೈಗೆ ಒರಗಿ ಕುಳಿತಿದ್ದ ಮೆನೆಪ್ಟಾಗೂ ನಿದ್ದೆ
ಬಂತು.....
ಆ ನಿದ್ದೆಯಲ್ಲೊಂದು ಕನಸು.
ಬಿಳಿಯ ಮೋಡಗಳ ಮೇಲೆ ತಾನು ಮಲಗಿದ್ದ.
ಜೋಗುಳ ನುಡಿಯ ಆಲಾಪನೆ ಸ್ತ್ರೀ ಕಂಠದಿಂದ ಕೇಳಿ ಬರುತ್ತಿತ್ತು:
"ಓ ಒಸೈರಿಸ್....ಓ ಒಸೈರಿಸ್...."

ಆ ಊರು ನೀರಾನೆ ಪ್ರಾಂತದ ಕೇಂದ್ರ. ಅಲ್ಲಿನ ದೋಣಿ ಕಟ್ಟೆಯನ್ನು
ಬಟಾ ತಲಪಿದಾಗ ಮುಚ್ಚಂಜೆಯಾಗಿತ್ತು. ಅಬ್ಟುವಿನಿಂದ ಮರಳಿ ಬಂದ
ಯಾತ್ರಿಕರು ಮೊದಲು ಕಂಡುದು ಕಂದಾಯ ಅಧಿಕಾರಿಯ ನಾವೆಯನ್ನು,
ದೊಡ್ಡದು. ಸುಭದ್ರ. ಮೇಲಿನ ಅಂಚಿನುದ್ದಕ್ಕೂ ಮರವನ್ನು ಕೊರೆದು
ರಚಿಸಿದ ಚಿತ್ತಾರಗಳು. ಅದು ಪೆರೋನ ಸಾಹಸ ಕಾರ್ಯಗಳನ್ನು ಬಣ್ಣಿಸುವ ಚಿತ್ರ
ಮಾಲಿಕೆ. ಕಟ್ಟೆಗೆ ಕಟ್ಟಿದ್ದ ದೋಣಿಯಲ್ಲಿ, ಹುಟ್ಟು ಹಾಕುವ ಇಬ್ಬರು ಚೌಕ
ಮಣೆ ಆಟ ಆಡುತ್ತ ಕುಳಿತಿದ್ದರು. ಅವರ ಸುತ್ತಲೂ ಕೆಲವರು ನಿಂತಿದ್ದರು,
ಆಟ ನೋಡುತ್ತ, ಆಡುವವರನ್ನು ಹುರಿದುಂಬಿಸುತ್ತ. ಎಲ್ಲರೂ ಆ ನಾವೆಯ
ಉದ್ಯೋಗಿಗಳು.
బಟಾ ತನ್ನವರೆಡೆಗೆ ತಿರುಗಿ " ಬಂದಿದಾರಪೋ " ಎಂದ.