ಪುಟ:Mrutyunjaya.pdf/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೪೯೭ “ಅಯ್ಯ, ನಾನು ಶೀಬಾ. ಪೆರೋನ ಕಸಾಯಿ ಮನೆಯವಳು. ಅತಿಥಿಗೃಹದ ನಾಯಕರ ಅಂಗರಕ್ಷಕರು ನನ್ನನ್ನು ಕಳಿಸಿದ್ದಾರೆ. ನಿಮಗೆ ಗೊತ್ತಿಲ್ಲಾಂತ ತೋರ್ತದೆ. ಇವತ್ತು ಬೆಳಿಗ್ಗೆ ರಾ ಹುಟ್ಟೋದಕ್ಮುಂಚೆ ನಾಯಕರನ್ನೂ ಅವರ ಅಂಗರಕ್ಷಕರನ್ನೂ ಹಿಡಿದು ಸೆರಮನೆಗೆ_” "ಆ ! ఓ ! "ಎಂದ ಮೆನ್ನ. ಉಸಿರು ಕಟ್ಟಿದ ಯಾತನೆ. ಪಾದಗಳನ್ನು ಪ್ರಯತ್ನಪೂರ್ವಕವಾಗಿ ಕಿತ್ತು ಅಂಜೂರ ವೃಕ್ಷದ ನೆರಳಿಗೆ ఆತ ನಡೆದ.ಶೀಬಾ ಹಿಂಬಾಲಿಸಿದಳು.

ಅಲ್ಲಿ ಮಾತಿಲ್ಲದೆ ಕುಳಿತ,ಮೆನ್ನ.ನೋಟ ಮಾತ್ರ ನದಿಯ ಕಡೆಗೆ,_ ಇನ್ನೂ ಒಂದೊಂದಾಗ ಬರುತ್ತಿದ್ದ ದೋಣಿಗಳತ್ತ. ಅವನೆಂದ ; "ಹೇಳು.ಹೇಳು...." ಮೊದಲು ಪ್ರಯಾಸ ಪಡುತ್ತ, బళిಕ ಬೇಗಬೇಗನೆ, ಅವಳೆಂದಳು : “ಸೆಡ್ ಉತ್ಸವದ ಜ್ಣಾಪಕಕ್ಕೇಂತ ಕಳೆದ ಮಧ್ಯರಾತ್ರಿಯಲ್ಲಿ ದರೊಡೆ ಗಾರರು ಪಾತಕಿಗಳು ಎಲ್ಲರನ್ನೂ ಬಿಟ್ರು. ನೀವು ಆಗ ಇಲ್ಲೇ ಇದ್ದಿರೀಂತ ತೋರ್ತದೆ. (ಮೆನ್ನ ತಲೆ ಆಡಿಸಿದ.) ಸೆರೆಮನೆ ಸ್ವಚ್ಛಕೂಡಾ ಮಾಡಿರ್ಲಿಲ್ಲ. ಜಜ್ ಮುಂಖನ ಕೋಣೆಗೆ ನಾಯರಕನ್ನು ತಳ್ಳಿದ್ರು. ದೊಡ್ಡಿ ಮನೆಗೆ ಅವರ ಅಂಗರಕ್ಷಕರನ್ನು ನೂಕಿದ್ರ. ಬೆಕ್ ಮತ್ತು ಔಟ ನೀರಾನೆ ಪ್ರಾಂತ ದೋರು. ತುಂಬ ಗೌರವಸ್ಥ ಜನ. ಈ ಮಗೂಗೆ ಕಾಹಿಲೆ ಆಗಿದ್ದಾಗ ಅರಮನೆ ಮಂದಿರದ ಆರ್ಚಕನಲ್ಲಿಗೆ ಔಷಧಿಗಾಗಿ ಹೋಗಿದ್ದೆ. ಅವರಿಬ್ರೂ ಅಲ್ಲಿಗೆ ಬಂದಿದ್ರು. ಕಳ್ಳರನ್ನೂ ಪುಂಡರನ್ನೂ ಹೊರಗೆ ಬಿಟ್ಟು ಸಜ್ಜನರನ್ನೂ ಸಾತ್ವಿಕರನ್ನೂ ಸೆರೆಯಲ್ಲಿಡೋದು ಯಾವ ನ್ಯಾಯ ?ನಿನ್ನೆ ರತ್ರಿಯಿಡೀ ಕಸಾಯಿ ಮನೆಯಲ್ಲಿ ದುಡಿಮೆ. ದಂಡಿನ ಠಾಣ್ಯದಿಂದ ಗಂಡ ಊರಿಗೆ ಬಂದಿ ದ್ದಾನೇಂತ ಕೆಲಸ ತಪ್ಪಿಸೋಕಾಗ್ತದಾ ? ನಸುಕಿನಲ್ಲಿ ಪೆರೋ ಎದ್ದ ತಕ್ಷಣ ನಾನು ಮನೆಗೆ ಹೋದೆ-ಮಗೂಗೆ ಹಾಲು ಕುಡಿಸೋದಕ್ಕೇಂತ.ನಾಯಕರ ವಿಷಯ ಕೇಳಿ ನನ್ನ ಗಂಡನಿಗೂ ಬೇಜಾರಾಯ್ತು. ಇವತ್ತು ಅವನಿಗೆ ಅರಮನೆ ಕೆಲಸ. ಕಳಿಸ್ಕೊಟ್ಟೆ. ದೊಡ್ಡಿಮನೆ ಬಾಗಿಲು ಕಾವಲಿನವರು ನನ್ನ ಗಂಡನ ಸ್ನೇಹಿತರು ಬೆಕ್ ಔಟರಿಗೆ ರೊಟ್ಟಿ ಕೊಟ್ಟು ಬಂದೆ.ಅವರಿಗೆ ನಾಯಕ ೩೨