ಪುಟ:Mrutyunjaya.pdf/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯೮ ಮೃತ್ಯುಂಜಯ ರದೇ ಯೋಚನೆ. ತಮಗೆ ಏನಾಯ್ತು ಅನ್ನೋದು ಗೊತ್ತಿಲ್ದೆ ಬಟಾ ಅಣ್ಣ ಬಂದು ಮೋಸ ಹೋದಾರೂಂತ ಅವರಿಗೆ దిగిలు.ನಿಮಗೆ ತಿಳಿಸ್ಬೇಕು ಅಂದ್ರು, ಆ ಕೆಲಸ ನಾನು ಮಾಡ್ತೇನೆ ಅಂದೆ.ಅಯ್ಯ, ನಾನು ಇಲ್ಲಿ ಕಾಯ್ತಾ ಇರ್ತೇನೆ. ಯಾರಿಗೂ ಗುಮಾನಿ ಬರೋದಿಲ್ಲ. ಅರಮನೇಲಿ ಮಧ್ಯಾಹ್ನದ ಔತಣದ ಗಲಾಟೆ.ಮಂದಿರದ ಪ್ರಸಾದ ಅಂತ ನೀವು ಏನಾ ದರೂ ತಗೊಂಡು ಹೋದ್ರೆ ಕಾವಲಿನವರು ನಿಮ್ಮನ್ನು ಜಜ್ ಮಂಜನ ಕೋಣೆಗೂ ಬಿಡ್ತಾರೆ....” ಶೀಬಾ ಮಾತು ನಿಲ್ಲಿಸಿದಳು. ಮೆನ್ನ ಉಗುಳು ನುಂಗಿದ.ಒಂದಕ್ಕೊಂದು ಅಂಟಿಕೊಂಡು ಒಣಗಿ ಹೋಗಿದ್ದ ತುಟಿಗಳನ್ನು ಬೇರ್ಪಡಿಸಿದ. ನಾಲ್ಕು ನಿಮಿಷ ಬಾಯಿಯಲ್ಲೇ ಉಸಿರಾಡಿ ಬಳಿಕ ಅವನೆಂದ: “ಊಟ ಮುಖ್ಯ ಅಲ್ಲ ತಾಯಿ. ನಾಯಕರು ದಿನಗಟ್ಟಲೆ ಉಪವಾಸ ವಿದು ಬೆಳೆದವರು......” ಆದರೂ_” “ಉಹುಂ. ಈಗ ಅವರನ್ನು ಅಲ್ಲಿಂದ ಪಾರು ಮಾಡ್ಬೇಕು....” “ಹಾಗಾದರೆ ನೀವು ಈಗ ಅಲ್ಲಿಗೆ ಬರೋದಿಲ್ಲವಾ ?” “ತಾಯಿ, ಸಂಜೆವರೆಗೆ ಬಟಾನ ದಾರಿ ನೋಡ್ತೇನೆ.ಅಷ್ಟರೊಳಗೆ ಆತ ಬರದಿದ್ದರೆ ಹೊರಟು ಬಂದ್ಬಿಡ್ತೇನೆ...ತಾಯಿ,ನಿನ್ನ ಗಂಡ ಏನಾದರೂ ಸಹಾಯ ಮಾಡಿಯಾನ ?” “ನನಗೋಸ್ಕರ ಈ ಮಗೂಗೋಸ್ಕರ ನನ ಗಂಡ ಏನುಬೇಕಾದರೂ ಮಾಡಿಯಾನು.” “ಬಟಾ ಬಂದರೆ ಸಹಾಯ ಬೇಕಾಗೋದಿಲ್ಲ, ಬರದಿದ್ದರೆ ಮಾತ್ರಸ್ವಲ್ಪ–” “ಆಗಲಿ ಅಯ್ಯ". “ಇನ್ನು ನೀನು ಹೊರಡು.. ನನ್ನನ್ನು ಇಲ್ಲಿ ಕಂಡ ವಿಷಯ-”