ಪುಟ:Mrutyunjaya.pdf/೫೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ

೪೯೯

"ಯಾರಿಗೂ ಹೇಳೋದಿಲ್ಲ.ನಿನ್ನೆಯಿಂದ ನೀವು ಏನೂ ತಗೊಂಡಿಲ್ಲ. ಏನಾದರೂ ತಂದ್ಕೊಡ್ಲಾ?"
“ ಬೇಡ ತಾಯಿಾ, ರಾತ್ರೆ ನಾಯಕರಿಗೆ ಪ್ರಸಾದ ಕೊಟ್ಮೇಲೆ ನಾನು ತಗೋತೇನೆ."
ಶಿಬಾ ಮಗುವನ್ನೆತ್ತಿಕೊಂಡು ಎದ್ದಳು. ಮೆನ್ನ ನದಿಯ ಮೇಲಿನ ದೃಷ್ಟಿಯನ್ನು ಕದಲಿಸಲಿಲ್ಲ.
****
ರಾ ನೆತ್ತಿಯ ಮೇಲೆ ಬರುವ ಹೊತ್ತಿಗೆ ಮೆರವಣಿಗೆ ಅರಮನಗೆ
ಮರಳಿತು.ಬಳಲಿದ ಪೆರೋ ಸ್ವಲ್ಪ ವಿಶ್ರಾಂತಿಗಗಿ ಶಯ್ಯಾಗೃಹವನ್ನು ಸೇರಿದ.
ಮಹಾ ಅರ್ಚಕ, ಅಮಾತ್ಯ, ಹೆಖ್ವೆಟ್ ಮತ್ತಿತರ ಸರು ಸದಸ್ಯರು; ಮಹಾ
ದಂಡನಾಯಕ,ತೆರಿಗೆ ಅಧಿಕಾರಿಗಳು, ಪ್ರಾಂತಪಾಲರು-ಹೀಗೆ ಪ್ರತಿ
ಷ್ಠಿತರೂ ಅವರಲ್ಲಿ ಕೆಲವರು ಮಹಿಳೆಯರೂ ಔತಣ ಭವನಕ್ಕೆ ನಡೆದರು.
(ಇದು ಬಗೆಬಗೆಯ ಮದಿರೆ ಭಕ್ಷ್ಯ ಭೋಜ್ಯಗಳ ಭೋಜನ,ತಂತೀ
ವಾದ್ಯ ಸಂಗೀತದ ಹಿನ್ನೆಲೆಯಲ್ಲಿ. ರಾ ಅಸ್ತಮಿಸಿದೊಡನೆ ದೀಪಾಲಂಕಾರ.
ಆ ಭವ್ಯ ಬೆಳಕಿನಲ್ಲಿ ಅರಮನೆಯ ಬಯಲಿನಲ್ಲಿ ನರ್ತನ, ಗಾಯನ ಮತ್ತಿತರ
ವಿನೋದಗಳು. ಆಗಲೇ ಅರಮನೆಯ ಮುಂದುಗಡೆ ನೆರೆದ ಸಹಸ್ರ
ಸಹಸ್ರ ಜನರಿಗೆ ಭಕ್ಷ್ಯಗಳ ವಿತರಣೆ)
ಔತಣಕ್ಕೆ ಮಹರಾಣಿಯೊಂದಿಗೆ ಪೆರೋ ಆಗಮಿಸಿದೊಡನೆ ಮಹಾ ಅರ್ಚಕನೆಂದ:
"ರಾಜಧಾನಿಯ ಪ್ರತಿಷ್ಠಿತರು ಐಗುಪ್ತದ ಮಹಾಪ್ರಭುವಿಗೆ ಸ್ವಾಗತ
ಬಯಸುತ್ತಿದ್ದಾರೆ. ನವಯೌವನ ಪ್ರಾಪ್ತವಾಗಿರುವ ಪೆರೋ, ನಿನ್ನ ಆಳ್ವಿಕೆ
ಸುದೀರ್ಘವಾಗಲಿ! ದೀರ್ಘಾಯುಷ್ಯ ನಿನಗಿರಲಿ!”
ಪ್ರತಿಷ್ಠಿತರೆಲ್ಲ ತಲೆಬಾಗಿ ನಮಿಸುತ್ತಿದ್ದಂತೆ ಹೇಪಾಟ್ ಒಂದು ಮಾತು ಸೇರಿಸಿದ: "ತಮ್ಮ ಮೆಚ್ಚಿನ ಮಹರಾಣಿಗೂ ರಾಜಧಾನಿಯ ಪ್ರತಿಷ್ಠಿತರು
ಸಾಗತ ಬಯಸುತ್ತಿದ್ದಾರೆ.”