ಪುಟ:Mrutyunjaya.pdf/೫೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ೫೦೧ ತಿಳಿದ ಮೇಲೆ ಅಮಾತ್ಯನ ಕಣ್ಣಿಗೆ ಬಿದ್ದ. ಅಮೆರಬ್ ಅವನನ್ನು ಕೇಳಿದ: " ಎಲ್ಲ ಗೊತ್ತಾಯ್ತಾ?" ಸೆನೆಬ್‍ ನಸುನಕ್ಕ ಗಂಭೀರ ಧ್ವನಿಯಲ್ಲಿ ಅಮಾತ್ಯನೆಂದ: “ನಾಳೆ ಬೆಳಿಗ್ಗೆ ಅವನ ವಿಚಾರಣೆ. ಅಮಾತ್ಯ ಭವನವನ್ನು ಸಿದ್ಧ ಗೊಳಿಸಬೇಕು."

"ಅಪ್ಪಣೆ.”

"ಊರಿಗೆ ಹೋಗಿದ್ದನಲ್ಲ ಅವನ ಅ೦ಬಿಗ ? ಮರಳಿ ಬಂದನಾ ?” "ಇನ್ನೂ ಇಲ್ಲ.” "ಸ್ವಲ್ಪ ಹುಷಾರಾಗಿರ್ಬೇಕೂಂತ ದಳಪತಿಗೆ ಹೇಳು.” ಸೆನಬ್ ಉಬ್ಬಿದ. ದಳಪತಿಯನ್ನು ಕಂಡು, “ಸ್ವಲ್ಪ ಹುಷಾರಾಗಿರ್ಬೇ ಕೂಂತ ನಿನಗೆ ಹೇಳು ಅಂದ್ರು_ಅಮಾತ್ಯರು.ಕಟ್ಟುನಿಟ್ಟಿನ ಆಜ್ಞೆ,"ಎಂದ. " ನನ್ನ ವಿರುದ್ಧ ದೂರು ಹೇಳಿದಿರಾ ಲಿಪಿಕಾರಯ್ಯ? " “ ಇಲ್ಲವಪ್ಪ. ದಳಪತಿ ಬಹಳ ಶ್ರದ್ಧೆಯಿಟ್ಟು ಕೆಲಸ ಮಾಡ್ತಿದಾನೇಂತ ಹೇಳ್ದೆ.” " ನೀವು ಒಳ್ಳೆಯವರು.” "ಭಾರೀ ಬಹುಮಾನಗಳು ಸಿಕ್ಕಾಗ ನನ್ನ ಒಳ್ಳೆತನ ನೆನಪಿಟ್ಕೊ.” ಔತಣಕ್ಕೆ ಬಂದವರೆಲ್ಲ ವಿರಮಿಸಲೆಂದು ಪಲ್ಲಕಿಗಳನ್ನೇರಿ ಹೊರಟು ಹೋದ ಮೇಲೆ ಸೆನೆಬ್ ಅತಿಥಿ ಗೃಹದತ್ತ ಹೋದ. " ಇನ್ನು ಬೇರೆ ಅತಿಥಿಗಳು, ಅಲ್ಲವಾ ?"ಎಂದು ಬಾಗಿಲಿನಲ್ಲಿದ್ದ ಅತಿಥಿ ಗೃಹದ ಅಧಿಕಾರಿ ಕೇಳಿದಾಗ, “ಹೂಂ” ಎಂದ ಸೆನೆಬ್, ಉದ್ಯಾನದಲ್ಲಿ ಕುಳಿತು ಕೊಳ್ಳುತ್ತ. ಸೆನೆಬ್‍ಗೆ ತಾನೊಬ್ಬ ದಡ್ಡ ಎನಿಸಿತು. 'ಬಹಳ ಬುದ್ದಿವಂತ ನಾನು ಅಂದ್ಕೊಂಡಿದ್ದೆ. ಯಾವತ್ತಾದರೂ ಭಾರೀ ಉಡುಗೊರೆ ಸಿಕ್ಕೀತು ಅನ್ನೋ ಆಸೆಯಿಂದ . ಎಲ್ಲ ವ್ಯರ್ಥವಾಯ್ತು.' ಎಂದು ಹಲುಬಿದ. ಯಾರು ಗೆದ್ದರು? ಯಾರು ಸೋತರು ? ಮಹಾ ಅರ್ಚಕ, ಭೂಮಾಲಿಕರು, ಅಮಾತ್ಯ, ಪೆರೋ, ಎಲ್ಲರೂ ಗೆದ್ದರು. 'ಮೆನೆಪ್‍ಟಾ ಸೋತ ಎನ್ನೋಣವೆ? ಈಗಲೇ ಹೇಳುವುದು