ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೫೦೩
"ಯಾರು?" "ನಾನು ಸೆನೆಬ್,” ಈತ.ಈತ....ಇಲ್ಲಿಯೂ....ಈಗಲೂ.... "ಹ್ಞ.ಏನು ?ಅಮಾತೈರಿಂದ ಏನಾದರೂ ಸಂದೇಶ ತಂದಿದ್ದೀರಾ?” "ನಾಯಕರೇ,ಬಡಲಿಪಿಕಾರನ ಮೇಲೆ ವ್ಯಗ್ರರಾಗಬಾರದು. ರಾತ್ರೆ ನಿಮ್ಮನ್ನು ಕಂಡು ಹೋದ ಸ್ಫಲ್ಫಹೊತ್ತಿನಲ್ಲಿ ಹೀಗಾಯಿತಂತೆ. ನನಗೂ ತಿಳಿಯದ ಹಾಗೆ ರಹಸ್ಯವಾಗಿ ಮಾಡಿದು.ಮಹತ್ವದ ఆ ಸುದ್ದಿಯನ್ನು ಮೊದಲೇ ನಿಮಗೆ ಕೊಡುವುದು ನನ್ನಿಂದಾಗలిల్ల." “ ನನ್ನಿಂದ ನಿಮಗೂ ಏನೂ ಪ್ರಯೋಜನವಾಗಿಲ್ಲ ಲಿಪಿಕಾರರೇ.” “ನನ್ನ ಸೇವೆಗೆ ಪ್ರತಿಫಲ ಇವತ್ತಲ್ಲ ನಾಳೆ ಸಿಗದೆ. ನೀವು ಒಂದು ಸೂಚನೆ ಕೊಟ್ಟರೆ ಸಾಕು. ನಿಮ್ಮ ಹಿಂಬಾಲಕರು ವ್ಯವಸ್ಯೆ ಮಾಡ್ತಾರೆ.”
ಯಾಕೆ ಬಂದ ಈತ? ತೊಲಗಬಾರದೆ ಇಲ್ಲಿಂದ? ಎನಿಸಿತು, ಮೆನೆಪ್ ಟಾಗೆ. ಆದರೂ ತಾಳ್ಮೆ ವಹಿಸಿ ಕೇಳಿದ:
"ಸೆಡ್ ಉತ್ಸವ ಆಯಿತೆ?” "ಧಾರಿಕ ಕ್ರಿಯೆಗಳೆಲ್ಲ ಮುಗಿದುವು ನಾಯಕರೆ. ఇನ್ನು ಬರೇ ಮನರಂಜನೆ ಕಾರ್ಯಕ್ರಮ.” "ಸಂತೊಶ." “ದಿನವೆಲ್ಲ ಅಮಾತ್ಯರ ಪಕ್ಕದಲ್ಲೇ ಇದ್ದರೂ ನನಗೆ ನಿಮ್ಮದೇ ಯೋಚನೆ.ಸೆಡ್ ಉತವಕ್ಕಂತనెళ్కేంతే ఆమె ದೂರದಿಂದ ಬಂದ ನೀವು ಪೆರೋ ಎದುರು ఇರಲಿಲ್ಲ ಅಂತ ಕೊರಗು.” “ ಆ ಗೃಹದಿಂದ ನನ್ನನ್ನು ಈ ಗೃಹಕ್ಕೆ ಕಳಿಸೋದಕ್ಕೆ ಇದ್ದಕ್ಕಿದ್ದಂತೆ ತೀರ್ಮಾನಿಸಿಲ್ಬೇಕು. ಅಲ್ಲವೆ?”
.ಹಾಗೆಯೇ ಇದ್ದಕ್ಕಿದ್ದಂತ ಇನ್ನೂ ಒಂದು ತೀರಾನ ಮಾಡಿ ದ್ದಾರೆ. ಮಹತ್ವದ್ದು. ಅದನ್ನು ತಿಳಿಸೋಣ ಅಂತಲೇ ನಿಮ್ಮ ಭೇಟಿಗೆ బంದೆ.”
“ಏನದು ?” “ ನಾಳೆ ನಿಮ್ಮ ವಿಚಾರಣೆ.”