ಪುಟ:Mrutyunjaya.pdf/೫೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತ್ಯುಂಜಯ ೫೦೯ ಮಗ್ನರಾದಾಗ ಬೆನ್ನುಗಾವಲು ಕೊಟ್ಟರೆ ಸಾಕು. ಅಣ್ಣನಿಗೆ ತಿಳಿಸೋದು ಹೇಗೆ?"

           “ನಾಯಕರಿಗೇಂತ ನಾನು ಅರಮನೆ ದೇವಮಂದಿರದಿಂದ ಪ್ರಸಾದ ತೆಗೆದುಕೊಂಡು ಹೋಗ್ತೇನೆ. ಭೇಟಿ ಸಾಧ್ಯವಾಗ್ತದೆ."
     “ಮಾತನಾಡೋದಕ್ಕೆ ನಾನೂ ಬರಬೌದಾ ?”
     "ಹೇಗೆ ಸಾಧ್ಯ ಬಟಾ ಅಣ್ಣ .
     "ಹೌದು ಏನೋ ಆಸೆ. ಹೇಳ್ದೆ. ನೀವು ತಿಳಿಸೋದೂ ಒಂದೇ ನಾನು ತಿಳಿಸೋದೂ ಒಂದೇ."
    ಆ ಕ್ಷಣ, ಮೆನೆಪ್‍ಟಾ ಒಪ್ಪದಿರಬಹುದು ಎಂಬ ಶಂಕೆ ಬಟಾನಲ್ಲಿ ಮೂಡಿತು.ಆಗಿನ ಅಸಹಾಯತೆಯಾಗಾಗಿ ತನ್ನ ಮೇಲೇಯೇ ಸಿಟ್ಟುಗೊಂಡು ಅವನೆಂದ:
                   “ಕರಕೊಂಡು ಹೋಗೋದಕ್ಕೆ ಅಬ್ಟು ಯಾತ್ರಿಕರೆಲ್ಲ ಬಂದಿದ್ದಾರೇಂತ ಅಣ್ಣನಿಗೆ ತಿಳಿಸಿ. ನಾವು ನೀರಾನೆ ಪ್ರಾಂತ ತಲುಪಿದೊಡನೆ ಕುಯಿಲಿನ ಹಬ್ಬ. ನಾಯಕರಿಗಾಗಿ ಜನ ಕಾಯ್ತಿದ್ದಾರೆ. ಅನವಶ್ಯವಾಗಿ ಒಂದು ಕ್ಷಣವೂ ನಾವು ಇಲ್ಲಿ ನಿಲ್ಲಬಾರದು. ಅವನ ಮಗ ರಾಮೆರಿ ಬಂದಿದ್ದಾನೆ ಅನ್ನಿ.ಅಹೂರಾ ಬಂದಿರೋದನ್ನೂ ಹೇಳಿ. ಅಬ್ಟು  ಯಾತ್ರೆ ಎಷ್ಟು ಪವಿತ್ರವಾಗಿತ್ತೋ ಇದೂ ಅಷ್ಟೇ ಪವಿತ್ರ......ಅವನು ಒಪ್ಪಬೇಕು.”
        ಗುಂಪಿನ ಮಧ್ಯದಿಂದ  ಆಗಾಗ್ಗೆ ತಮ್ಮೆಡೆಗೆ  ದೃಷ್ಟಿ ಬೀರುತ್ತಿದ್ದ ಹುಡುಗನನ್ನು ನೋಡುತ್ತ ಮೆನ್ನ ಅಂದ:
     "ನಿಮ್ಮ ಜತೆ ನಾನೂ ಬರ್‍ತಾ ಇದ್ದೇನೆ-ಅನ್ನಲಾ?"
 “ಹೂಂ ಮೆನ್ನ, ಹೂಂ.”
  “ನೆಲಮಾಳಿಗೆಯಿಂದ ಅವರು ಹೊರಬಂದ ಮೇಲೆ ನನ್ನ ಜವಾಬ್ದಾರಿ. ನೇರ ನದಿ ಸೇರುವ ಕಳ್ಳದಾರಿ ಇದೆ.”
 "ಔಟ-ಬೆಕ್?"
      "ಶೀಬಾ ನೋಡ್ಕೋಳ್ತಾಳೆ. ನಡುರಾತ್ರಿಗೆ ಮುಂಚೆ ದೀಪೋತ್ಸವದ ಸಡಗರ ಪರಾಕಾಷ್ಥೆಗೆ ಮುಟ್ಟಿದಾಗ ಈ ಕೆಲಸ ಆಗ್ಬೇಕು." 

ನಾನು ಇನ್ನು ಸ್ವಲ್ಪಹೊತ್ತಿನಲ್ಲಿ ಹೊರಡ್ತೇನೆ. ನಾಯಕರನ್ನು