ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೫೧೧ ಯಾರು? ಎಲ್ಲರೂ ? ಬೇಡ. ಐವರು ಸಾಕು. ('ನೀನೇ ಹೇಳು ಬಟಾ.' 'ಹ್. ನೀನು, ನೀನು, ನೀನು....')
ಪಿಸುದನಿ. ಗಾಳಿಯ ಮೇಲೆ ಪದಗಳು ಸವಾರಿ ಮಾಡಬಾರದು. “ನಮ್ಮ ಈ ಮೆನ್ನಯ್ಯ ಹೋಗಿ ನಾಯಕರನ್ನು ಹೇಗಾದರೂ ಮಾಡಿ ಕಂಡು, ಏರ್ಪಾಟು ಮಾಡ್ತಾರೆ. ರಾಮೆರಿ, ನೀನು ಅಹೂರಾ ಅತ್ತೆ ಒಟ್ಟಗೆ ಇರಬೇಕು. ನೀವೆಲ್ಲ ಸಣ್ಣ ಸಣ್ಣ ಗುಂಪುಗಳಾಗಿ ಹತ್ತಿರ ಹತ್ತಿರವೇ ಇರಿ. ದೂರದಿಂದ ಅರಮನೆಯ ದೀಪಾಲಂಕಾರ, ದಂಡೆಯ ಮೇಲಿಂದ ತೆಪ್ಪೋತ್ಸವ ನೋಡ್ಬಹುದು. ಪೆರೋ ಅರಮನೆಗೆ ಹೊರಟ ತಕ್ಷಣ ನೀವು ಇಲ್ಲಿಗೆ ಬನ್ನಿ. ನೆನಪಿಟ್ಟಕೊಳ್ಳಿ. ಯಾರು ಕೇಳಿದರೂ ನೀವು ನೀರಾನೆ ಪ್ರಾಂತದವರಲ್ಲ. ಟಗರು
ಪ್ರಾಂತದವರು. ಯಾರ ಗುರುತೂ ನಿಮಗಿಲ್ಲ. ನೀವು ಬಡ ಪರದೇಶಿಗಳು. ಅರ್ಥವಾಯ್ತಾ ?”
ಅರ್ಥವಾಗಿತ್ತು. ಬಾಕುಗಳು. ನಾಲ್ಕು ಅಂಬಿಗರಿಗೆ. ಉಳಿದವು ಬಟಾ ಮತ್ತು ಐವರಿಗೆ. “ಆ ದೋಣಿಗಳು ಈ ಕಡೆಗೆ ಬರ್ತಿವೆ. ಸೆಡ್ ಉತ್ಸವದ ಯಾತ್ರಿಕರು ಹೊರಡಿ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ರಾ ಮುಳುಗಿಯೇ ಬಿಡ್ತಾನೆ.... ಮೆನ್ನಯ್ಯ ನೀವೂ ಹೊರಡಿ. ಯಶಸ್ವೀ ರಾಯಭಾರ ಮುಗಿಸಿಬನ್ನಿ. ಇಲ್ಲಿಯೇ ಹತ್ತಿರ ಕಾಯ್ತಿರ್ತಿತೇವೆ.” ಕುಳಿತವರು ಏಳುತ್ತಿದ್ದಂತೆ, ಮೆನ್ನ ತಲೆತಗ್ಗಿಸಿದ. ಹಾಗೆಯೇ ನೆಲ ನೋಡುತ್ತ ಅರಮನೆಯ ಕಡೆಗೆ ಬೀಸುವ ಗಾಳಿಯಾದ. * * * *
ಸಹಸ್ರ ಸಹಸ್ರ ದೀಪಗಳ ರಾಜ್ಯದಲ್ಲೂ ಅಲ್ಲಿ ಇಲ್ಲಿ ಕತ್ತಲೆಯ ಕಣ್ಣು ಮುಚ್ಚಾಲೆಯಾಟ. ನದಿದಂಡೆಯ ಪ್ರಾಕಾರ ದ್ವಾರದತ್ತ ಮೆನ್ನ ಸಾಗಿದ. ಎರಡು ರಾಜನಾವೆಗಳನ್ನು ಪುಷ್ಪಗಳಿಂದ ಅಲಂಕರಿಸಿ ತೆಪ್ಪೋತ್ಸವಕ್ಕೆ ಅಣಿ ಗೊಳಿಸುತ್ತಿದ್ದರು.