ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮ್ರುತ್ಯುಂಜಯ ೫೧೩
ಕಾವಲುಗಾರರು ತಬ್ಬಿಬ್ಬಾದರು. ಯೋಚನಾಪರನಾಗಿ ಒಬ್ಬ ತೊದಲಿದ: "ಅಮಾತ್ಯರು-ಅಮಾತ್ಯರು-" ಮೆನ್ನ ಏರುದನಿಯಲ್ಲಿ ಅಂದ : “ನಿಮಗೆ ಏನೂ ತಿಳೀದು. ಇವತ್ತಿನಿಂದ ಮಹಾಪ್ರಭು, ಅರ್ಚಕರು, ಮಹಾಅಮಾತ್ಯರು ಎಲ್ಲ ಒಂದೇ....ಸೆಡ್ ಉತ್ಸವದ ದಿನ ಪಾಪಿಗಳಿಗೂ ಪ್ರಸಾದ ತಿನ್ನಿಸ್ಬೇಕು. ಇಲ್ಲದಿದ್ದರೆ ಪೆರೋಗೆ ಅಪಾಯ." ಏನು ಮಾಡಬೇಕೆಂದು ಕಾವಲಿನವರಿಗೆ ತೋಚಲಿಲ್ಲ. ಮೆನ್ನ ಸ್ತೋತ್ರದ ಒಂದೆರಡು ಸಾಲುಗಳನ್ನು ಪಠಿಸಿ, “ನಾನು ವಾಪಸು ಹೋಗಲಾ? ದೇವರ ಪ್ರಸಾದದ ವಿತರಣೆಗೆ ನೀವು ಅಡ್ಡಿ ಮಾಡ್ತಿದೀರಿ ಅಂತ ತಿಳಿಸಲಾ? " ಎಂದ. ಕಾವಲುಗಾರರಿಬ್ಬರೂ ಏಕಕಾಲದಲ್ಲೇ ನಡುಬಾಗಿಸಿ ವಂದಿಸಿದರು. ಬಾಗಿಲನ್ನು ಮುಂದಕ್ಕೆ ತಳ್ಳಿ ದಾರಿ ಬಿಟ್ಟರು. "ದೀಪ ತರಲಾ?"ಎಂದ ಒಬ್ಬ. “ಬೇಡ, ಪ್ರಸಾದದ ತಟ್ಟೆ ಇರುವಾಗ ದೇವಸೇವಕರಿಗೆ ಕತ್ತಲಲ್ಲೂ ಕಣ್ಣು ಕಾಣಿಸ್ತದೆ.” ಮೆನ್ನ ಕ್ರಮಬದ್ಧವಾಗಿ ಹೆಜ್ಜೆ ಇಡುತ್ತ ಇಳಿದ. ಜತೆಗೆ ಬಂದ ಯೋಧ, “ನನಗೆ ಭಯ ಅಯ್ಯ. ಇಲ್ಲೇ ಇರಿ. ದೀವಟಿಗೆ ತಂದಬಿಡ್ತೆನೆ” ಎಂದು ಹೇಳಿ ಮೇಲಕ್ಕೆ ಓಡಿದ. ದೀಪ ಬಂತು. ಮುಂದುವರಿಯುವುದು ಸುಲಭವಾಯಿತು. ಕೊನೆಯ ದ್ವಾರವನ್ನು ತಳ್ಳಿದ ಮೇಲೆ ಮೆನ್ನ “ನೀನು ದೀವಟಿಗೆ ಹಿಡ ಕೊಂಡು ನಡುಬಾಗಿಲಿನಾಚೆಗೆ ಇರು. ಪಾಪಿಗೆ ಪ್ರಸಾದ ತಿನ್ನಿಸಿ ಬರ್ತೆನೆ, "ಎಂದು ಹೇಳಿ, ಗಟ್ಟಿಯಾಗಿ ಪ್ಟಾ ಸ್ತೋತ್ರ ಪಠಿಸುತ್ತ, ನೆಲಮಾಳಿಗೆಯ ಕೊಠಡಿಯನ್ನು ಪ್ರವೇಶಿಸಿದ. ಸಾಕಷ್ಟು ಉಸಿರು ಆಡದ ನೆಲಮಾಳಿಗೆಯಲ್ಲಿ ಸುಡು ಯೋಚನೆಗಳ ಜತೆ (ಒಂದೆರಡು ಬಾರಿ ಹೊಂಡದ ಕೊಳಕು ನೀರನ್ನು ಕೈಬೊಗಸೆಯಿಂದ ಎತ್ತಿ ಕುಡಿದು) ಇಡೀ ದಿನವನ್ನು ಮೆನೆಪ್ಟಾ ಕಳೆದಿದ್ದ. ಪರಿಚಿತ ಧ್ವನಿ. ಮೆನ್ನನೇ. ೩೩